ಕೂಡ್ಲಿಗಿ: ನಮ್ಮೂರಿನ ಎರೆಡು ದ್ರುವ ನಕ್ಷತ್ರಗಳು ಮರೆಯಾಗಿವೆ-ವೀರೇಶ ಅಂಗಡಿ ವಿಷಾಧ- ವಿಜಯನಗರ ಜಿಲ್ಲೆ ಕೂಡ್ಲಿಗಿ: ನಮ್ಮೂರಿನ ಕಲೆ ಹಾಗೂ ಸಮಾಜ ಕ್ಷೇತ್ರದ, ಎರಡು ಧ್ರುವ ನಕ್ಷತ್ರಗಳು ಮರೆಯಾಗಿದ್ದು. ಸಾಮಾಜಿಕ ಹಾಗೂ ರಂಗ ಕಲಾ ಕ್ಷೇತ್ರಗಳಲ್ಲಿ, ತುಂಬಲಾರದ ನಷ್ಟವಾಗಿದೆ ಹಾಗೂ ದುಃಖಕರ ವಾಗಿದೆ
ಎಂದು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರು, ಹಾಗೂ ಪತ್ರಕರ್ತರಾರ ವೀರೇಶ್ ಅಂಗಡಿ ವಿಷಾದ ವ್ಯಕ್ತಪಡಿಸಿದರು. ಅವರು ಆ19ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ. ಇತ್ತೀಚೆಗೆ ಅಗಲಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ರಂಗಕಲಾವಿದೆ ಬಾಣದ ಶಿವಕುಮಾರಿ. ಹಾಗೂ ಉದ್ಯಮಿ ಹಾಗೂ ಸಮಾಜ ಸೇವಕ, ಆರ್.ಕೆ.ಶೆಟ್ರು ರವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಬಿ.ಶಿವಕುಮಾರಿ- ಕೂಡ್ಲಿಗಿ ಪಟ್ಟಣ ಹಾಗೂ ತಾಲೂಕು, ರಂಗ ಕಲಾವಿದರ ತವರೂರಾಗಿದೆ. ತಾಲೂಕನ್ನು ತಮ್ಮ ಕಲಾ ಸೇವೆಯ ಮೂಲಕ, ಇಡೀ ನಾಡಿನಾದ್ಯಂತ ಪ್ರಚುರ ಪಡಿಸಿದ ರಂಗ ಕಲಾವಿದೆ ಬಿ. ಶಿವಕುಮಾರಿಯವರು. ತಮ್ಮ ನಾಲ್ಕು ದಶಕಗಳ ಕಾಲ ರಂಗ ಕಲಾಸೇವೆಯಿಂದಲೇ, ತಮ್ಮನ್ನ ರಂಗಕಲಾ ಕ್ಷೇತ್ರಕ್ಕೆ ಅರ್ಪಿಸಿಕೊಂಡು ರಂಗಭೂನಿಯನ್ನು ಶ್ರೀಮಂತಗೊಳಿಸಿದವಾರಗಿದ್ದಾರೆ. ನಾಡು ಕಂಡ ಬಲು
ಅಪರೂಪದ ರಂಗ ಕಲಾ ಪ್ರತಿಭಾನ್ವಿತೆ, ಬಿ.ಶಿವಕುಮಾರಿ, ರಾಜ್ಯ ಹಾಗೂ ನೆರೆ ಹೊರೆ ರಾಜ್ಯಗಳಲ್ಲಿ ರಂಗ ಕಲೆಯನ್ನು ಪಸರಿಸಿದ್ದಾರೆ. ಸಾಮಾಜಿಕ ಪೌರಾಣಿಕ ಸಾವಿರಾರು ನಾಟಕಗಳನ್ನು ಅಭಿನಯಿಸಿದ್ದಾರೆ, ಅವರು ತಮ್ಮ ರಂಗ ಕಲಾಸಿರಿಯಂದಾಗಿ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡವರು. ನಾಟಕ ಅಕಾಡೆಮಿ ಸದಸ್ಯೆಯಾಗಿ ಗೌರವಕ್ಕೆ ಪಾತ್ರರಾಗಿದ್ದರು, ನೆರೆ ರಾಜ್ಯ ಆಂದ್ರ ಸರ್ಕಾರ ಕೊಡ ಮಾಡುವ, ನಂದಿ ಪ್ರಶಸ್ತಿಗೂ ಭಾಜನರಾಗಿದ್ದರು ಎಂದರು. ಆರ್.ಕೆ.ಶೆಟ್ರು- “ಓದು ಒಕ್ಕಾಲು ಬುದ್ದಿ ಮುಕ್ಕಾಲು” ಮಾತಿನಂತೆ,
ಓದಿದ್ದು ಮೂರನೇ ತರಗತಿ ಯಾಗಿದ್ದರು ತಮ್ಮ ಬುದ್ದಿಶಕ್ತಿಯಿಂದ ಉದ್ಯಮಿಯಾಗಿ ಗುರುತಿಸಿಕೊಂಡವರು ಆರ್.ಕೆ.ಶೆಟ್ರು. ಅವರು ಹೋಟೆಲ್ ಉದ್ಯಮದಲ್ಲಿ ಶ್ರಮ ವಹಿಸಿ ಸಾಧನೆ ಮಾಡೋ ಮೂಲಕ, ಯಶಸ್ವೀ ಉದ್ಯಮಿಗಳೆನಿಸಿಕೊಂಡವರು. ಪಟ್ಟಣದ ಸರ್ಕಾರಿ ಶಾಲೆಗಳನ್ನ ದತ್ತು ಪಡೆದು, ಅನೇಕ ಬಡ ವಿಧ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣ ಪ್ರೇಮಿಯಾಗಿದ್ದರು. ದಿವಂಗತ ಆರ್.ಕೆ.ಶೆಟ್ರು ಪಟ್ಟಣದಲ್ಲಿ ನಡೆಯುವ ಪ್ರತಿ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಿಗೆ. ತಮ್ಮದೇ ಆದ ರೀತಿಯಲ್ಲಿ ನೆರವು ನೀಡುತ್ತಿದ್ದರು, ಚಿಂತನಾ ಸಾಹಿತ್ಯ ಬಳಗ ಹಾಗೂ ಕನ್ನಡ ಮಿತ್ರ ಸಂಘಗಳ, ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಅನೇಕ ಸಾಹಿತ್ಯ ಚಟುವಟಿಕೆಗಳನ್ನು ಮಾಡಿದರು. ಪಟ್ಟಣದ ಸಾಹಿತ್ಯಾಸಕ್ತರಿಗೆ ಕನ್ನಡ ಭವನ ನಿರ್ಮಿಸಲು, ಕನ್ನಡ ಸಾಹಿತ್ಯ ಪರಿಷತ್ತಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ. ನಿವೇಶನ ದಾನ ಮಾಡುವ ಮೂಲಕ, ಸಾಹಿತ್ಯದ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು. ಸಾಹಿತಿಗಳು ಹಾಗೂ ಹಿರಿಯ ನಾಟಕಕಾರರಾದ, ಎಮ್.ಬಿ.ಅಯ್ಯನಹಳ್ಳಿ ಎನ್.ಎಂ.ರವಿಕುಮಾರ್, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ, ಎಸ್.ವಿ.ಸಿದ್ದಾರಾಧ್ಯ. ಕನ್ನಡ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷರು, ಹಾಗೂ ಪತ್ರಕರ್ತರಾದ ಕೆ.ಎಂ.ವೀರೇಶ್. ಗುಡೇಕೋಟೆ ಹೋಬಳಿ ಕಸಾಪ ಅಧ್ಯಕ್ಷ, ಟಿ.ಎಚ್.ಎಂ.ಶೇಖರಯ್ಯ. ಕೆ.ಎಸ್.ವೀರೇಶ್, ಉದ್ಯಮಿ ಹಾಗೂ ಪಂಚಮ ಸಾಲಿ ಸಮಾಜದ ಮುಖಂಡ, ಟಿ.ಜಿ.ಮಲ್ಲಿಕಾರ್ಜುನ ಗೌಡ, ನಂದಿ ಬಸವರಾಜ, ಹಿರಿಯ ಪತ್ರಕರ್ತರಾದ, ಎ.ಎಂ. ಸೋಮಶೇಖರ ಆರಾಧ್ಯ. ಕೆ.ನಾಗನಗೌಡ, ವಿರುಪಾಕ್ಷ ಮೂರ್ತಿ, ಕಕ್ಕುಪ್ಪಿ ಪ್ರಶಾಂತ ಗೌಡ, ರೇವಣ್ಣ, ಉಡುಚಪ್ಪ, ಆರ್.ಬಿ.ಬಸವರಾಜ, ಪತ್ರಕರ್ತ ಹಾಗೂ ವಿಶ್ವಕರ್ಮ ಸಮಾಜದ ಮುಖಂಡ, ಬಡಿಗೇರ ನಾಗರಾಜ. ಹೋರಾಟಗಾರ ಹಾಗೂ ಪತ್ರಕರ್ತರಾದ, ಎಚ್.ವೀರಣ್ಣ. ಪತ್ರಕರ್ತರಾದ ಗುಡೇಕೋಟೆ ಎಲೆ ನಾಗರಾಜ, ಪತ್ರಕರ್ತ ಹಾಗೂ ದಲಿತ ಮುಖಂಡ ರಾಘವೇಂದ್ರ, ಕಲಾವಿದರಾದ ಅಗಸಗಟ್ಟೆ ತಿಂದಪ್ಪ, ಶಂಕ್ರಣ್ಣ, ರಾಘವೇಂದ್ರ ಮುಂತಾದವರಿದ್ದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
