ಕೂಡ್ಲಿಗಿ:ಶಾಸಕರಿಂದ 39ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ -ವಿಜಯನಗರ ಜಿಲ್ಲೆ ಕೂಡ್ಲಿಗಿ:ಕ್ಷೇತ್ರದ ಡಾ”ಎನ್.ಟಿ.ಶ್ರೀನಿವಾಸ್ ರವರು, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜನತೆನ್ನು. ಕಣ್ಣಿನ ಪೊರೆ ಸಮಸ್ಯೆಯಿಂದ ಮುಕ್ತವಾಗಿಸುಲು ಪಣ ತೊಟ್ಟಿದ್ದು, ಅದಕ್ಕಾಗಿ ಅವರು ಉಚಿತವಾಗಿ ಶಸ್ತ್ರಚಿಕಿತ್ಸೆ ಸೇವೆ ನೀಡುತ್ತಿದ್ದಾರೆ. ತಮ್ಮ ಮಹಾತ್ವಾಕಾಂಕ್ಷೆ ಈಡೇರಿಕೆಗಾಗಿ, ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರೊಂದಿಗೆ ಅವರೊಂದಿಗೆ, ಅವರ ವೈದ್ಯ ಗೆಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ. ಶಾಸಕರ ಜೊತೆ ಜೊತೆಗೆ ಅವರ ಪತ್ನಿ ಶ್ರೀಮತಿ ಡಾ” ಪುಷ್ಪಾ ಎನ್.ಟಿ.ಶ್ರೀನಿವಾಸ್ ರವರು, ಪತಿಯ ಪ್ರತಿಯೊಂದು ಜನಪರ ಸೇವೆಯಲ್ಲಿ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಪ್ರತಿ ವಾರದಂತೆ ಈ ವಾರವು ಸಹ ಹೊಸಪೇಟೆಯ ಅಶ್ವಿನಿ ಕಣ್ಣಿನ ಆಸ್ಪತ್ರೆ ಯಲ್ಲಿ , ಕೂಡ್ಲಿಗಿ ಕ್ಷೆತ್ರದ ಸುಮಾರು ಒಟ್ಟು 39 ಜನರಿಗೆ ಯಶಸ್ವಿಯಾಗಿ. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಹೊಸಪೇಟೆಯ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ, ಸಂಪೂರ್ಣ ಶಾಸಕರು ಭರಿಸಿ ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ತಮ್ಮಅಂಧತ್ವ ನಿವಾರಿಸಿ ಹೊಸ ಭರವಸೆಯ ಬೆಳಕು ಮೂಡಿಸಿದ, ಡಾ” ಶ್ರೀನಿವಾಸ್ ಯವರಿಗೆ ಅವರೆಲ್ಲರೂ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಳ್ಳಿಕಟ್ಟಿ, ಹಾರಕಬಾವಿ, ಕರ್ನಾರಹಟ್ಟಿ, ತಾಯಕನಹಳ್ಳಿ, ಕೂಡ್ಲಿಗಿ, ಭೀಮಸಮುದ್ರ, ಶಿವಪುರ, ಗೊಲ್ಲರಟ್ಟಿ, ಅಯ್ಯನಹಳ್ಳಿ, ಕುಮತಿ, ಚಿಕ್ಕ ಜೋಗಿಹಳ್ಳಿ ತಾಂಡಾ, ಹೊಸೂರು , ಚಂದ್ರಶೇಖರಪುರ , ಕಾನಹೊಸಹಳ್ಳಿ, ತಿಪ್ಪೇಹಳ್ಳಿ, ಓಬಳಾಪುರ ಇನ್ನೂ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ, ಒಟ್ಟು 39ಜನರು ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಸೇವೆ ಪಡೆದರು ….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
