;

77ನೇ ಸ್ವತಂತ್ರೋತ್ಸವ:ನವ ದೆಹಲಿ ಕಾರ್ಯಕ್ರಮಕ್ಕೆ, ಕೂಡ್ಲಿಗಿ ಜಿ.ಅಂಬಿಕ ಮತ್ತು ಜಿ.ಗಿರೀಶ್ ದಂಪತಿಗೆ ಪ್ರಧಾನಿಯಿಂದ ಆಹ್ವಾನ…!!!

77ನೇ ಸ್ವತಂತ್ರೋತ್ಸವ:ನವ ದೆಹಲಿ ಕಾರ್ಯಕ್ರಮಕ್ಕೆ, ಕೂಡ್ಲಿಗಿ ಜಿ.ಅಂಬಿಕ ಮತ್ತು ಜಿ.ಗಿರೀಶ್ ದಂಪತಿಗೆ ಪ್ರಧಾನಿಯಿಂದ ಆಹ್ವಾನ- ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಮೂಲದವರು, ಹಾಲಿ ಕೂಡ್ಲಿಗಿ ಪಟ್ಟಣದ ವಾಸಿಗಳು ಹಾಗೂ ಎಪ್.ಪಿ.ಓ ರೈತರ ಕಂಪನಿ ಅಧ್ಯಕ್ಷರಾಗಿರುವ. ಶ್ರೀಮತಿ ಜಿ.ಅಂಬಿಕಾ ಗಂಡ ಜಿ.ಗಿರೀಶರವರ ಸೇವೆಯನ್ನು ಆಧರಿಸಿ. ಹಾಗೂ ಇದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಣಾ ಅಧಿಕಾರಿಯಾಗಿ, ಸೇವೆ ಸಲ್ಲಿಸುತ್ತಿರುವ ಅವರ ಪತಿ ಜಿ.ಗಿರೀಶ್ ಅವರಿಗೆ. ಆಗಸ್ಟ್15ರಂದು ದೆಹಲಿಯಲ್ಲಿ ಜರುಗುವ, ಸ್ವಾತಂತ್ರ್ಯೋತ್ಸವದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಯಲ್ಲಿ. ಈ ದಂಪತಿಗಳಿಗೆ ಭಾಗಿಯಾಗುವ ಅವಕಾಶ ದೊರೆತಿದೆ. ನವದೆಹಲಿಯ ಪ್ರಧಾನಿ ನರೇಂದ್ರ ಮೋದಿಯವರ ಆಢಳಿತ ಕಚೇರಿಯಿಂದ ಈ ದಂಪತಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು, ಇಂತಹ ವಿಶಿಷ್ಟ ಅವಕಾಶವನ್ನು ದೇಶದ ಎಲ್ಲಾ ರಾಜ್ಯಗಳಿಂದ ನಿಗದಿತ ಸಂಖ್ಯೆಯಲ್ಲಿ. ವಿವಿದ ಕ್ಷೇತ್ರಗಳಲ್ಲಿ ಸೇವೆ ಗೈದವರನ್ನು ಗುರುತಿಸಿ, ಅವರನ್ನು ತಮ್ಮೊಂದಿಗೆ ಸ್ವಾತಂತ್ರ್ಯದಲ್ಲಿ ಭಾಗಿಯಾಗಿಸುವ ವಿಶಿಷ್ಟವಾದ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಇಂತಿಷ್ಟು ಜನರನ್ನು ಗುರುತಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ದೇಶದ ಒಟ್ಟು 128 ಸಾಧಕರನ್ನ ಗುರುತಿಸಿ, ಪ್ರದಾನಮಂತ್ರಿಗಳ ಕಾರ್ಯಾಲಯದಿಂದ. ಅತಿಥಿಗಳನ್ನು ನೇರವಾಗಿ ಮೊಬೈಲ್ ಮೂಲಕ ಸಂಪರ್ಕಿಸಿ, ಕಾರ್ಯಕ್ರಮಕ್ಕೆ ಆವರನ್ನು ಆಹ್ವಾನಿಸಲಾಗಿದೆ. ಅಂತೆಯೇ ಕೂಡ್ಲಿಗಿ ಪಟ್ಟಣದ ಶ್ರೀಮತಿ ಜಿ.ಅಂಬಿಕ , ಹಾಗೂ ಅವರ ಪತಿ ಜಿ.ಗಿರೀಶರನ್ನು ಪ್ರಧಾನ ಮಂತ್ರಿ ಸಚಿವಾಲಯದಿಂದ
ಸ್ವತಂತ್ಸೋವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ದೂರವಾಣಿ ಮೂಲಕ ಈಗಾಗಲೇ ಆಹ್ವಾನಿಸಿದೆ. ಸಂಬಂಧಿಸಿದಂತೆ ಪತ್ರಕರ್ತರು ಈ ದಂಪತಿಗಳನ್ನು ಸಂಪರ್ಕಿಸಿದಾಗ,
ಶ್ರೀಮತಿ ಜಿ.ಅಂಬಿಕಾ ಮತ್ತು ಗಿರೀಶ್ ದಂಪತಿಗಳು ಸಂತಸ ವ್ಯೆಕ್ತ ಪಡಿಸಿದ್ದಾರೆ. ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ, ನರೇಂದ್ರ ಮೋದಿಯವರು ನಮ್ಮನ್ನ ಗುರುತಿಸಿ. ಆಗಸ್ಟ್ 15 ರಂದು ನವದೆಹಲಿಯಲ್ಲಿ ಜರುಗುವ, 77 ನೇ ಸ್ವತಂತ್ರೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಸಂದರ್ಭವನ್ನು ಒದಗಿಸಿರುವುದು. ನಮ್ಮ ಸೌಭಾಗ್ಯವಾಗಿದ್ದು, ಅದಕ್ಕಾಗಿ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ. ನರೇಂದ್ರ ಮೋದೀಜಿಯವರಿಗೆ ಹಾಗೂ ಅವಕಾಶ ನೀಡಿದ್ದಕ್ಕಾಗಿ, ಕೇಂದ್ರ ಸರ್ಕಾರಕ್ಕೆ ನಾವು ಎಂದೆದಿಗೂ ಋಣಿಯಾಗಿದ್ದೇವೆ ಮತ್ತು ಕೃತಜ್ಞರಾಗಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯಿಂದ, ನಮ್ಮನ್ನು ಆಯ್ಕೆ ಮಾಡಿರುವುದು ನಮ್ಮ ಸುದೈವವಾಗಿದೆ. ಅದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ ಎಂದು, ಶ್ರೀಮತಿ ಜಿ.ಅಂಬಿಕಾ ಹಾಗೂ ಅವರ ಪತಿ ಜಿ.ಗಿರೀಶ ದಂಪತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. *ಹರಿದು ಬಂದ ಅಭಿನಂದನೆಗಳ ಮಹಾಪೂರ* -ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯಲ್ಲಿ, ಪ್ರಧಾನಿ ಮೋದಿಯವರು ಕೂಡ್ಲಿಗಿ ಪಟ್ಟಣದ ವಾಸಿಗಳಾದ ದಂಪತಿಗಳನ್ನು. ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ, ಆಹ್ವಾನಿಸಿರುವುದರ ವಿಷಯ ತಿಳಿದ ಹಿತೈಷಿಗಳು ಬಂಧುಗಳು. ದಂಪತಿಗಳಿಗೆ ಶುಭ ಹಾರೈಸಿದ್ದು, ಮೋದಿಯವರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಾಗೂ ಜಿಲ್ಲೆಯ ವಿವಿದೆಡೆಗಳಿಂದ, ದಂಪತಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ನಿತ್ಯ ತಮಗೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿದ ಜನ ಪ್ರತಿನಿಧಿಗಳು, ಅನೇಕ ಗಣ್ಯಮಾನ್ಯರು, ಜಿಲ್ಲೆಯ ಪ್ರಭಾವಿಗಳು, ಸಮಾಜ ಸೇವಕರು, ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೆವೆ ಸಲ್ಲಿಸಿ, ರಾಜ್ಯಾಧ್ಯಂತ ಪ್ರಖ್ಯಾತಿ ಹೊಂದಿರುವವರು. ಮೊಬೈಲ್ ಮೂಲಕ ತಮನ್ನ ಸಂಪರ್ಕಿಸಿ ಶುಭ ಹಾರೈಸುತ್ತಿದ್ದು, ಅಭಿನಂದನೆ ಸಲ್ಲಿಸುವ ಉದ್ದೇಶದಿಂದ. ಹಿತೈಷಿಗಳಿಂದ ತಮಗೆ ನಿತ್ಯ ಅಸಂಖ್ಯಾತ ಮೊಬೈಲ್ ಕರೆಗಳು ಬರುತ್ತಿದ್ದು, ದೂರವಾಣಿ ಮೂಲಕ ತಮಗೆ ಅಭಿನಂದಿಸುತ್ತಿದ್ದಾರೆಂದು ಜಿ.ಅಂಬಿಕ ಹಾಗೂ ಜಿ.ಗಿರೀಶ ತಿಳಿಸಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend