ಕೂಡ್ಲಿಗಿ:ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ- ಪ್ರಗತಿ ಪರಿಶೀಲನೆ ಸಭೆ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಆ10ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ, ರಾಜ್ಯ ಸರ್ಕಾರದ ವಸತಿ ಸಚಿವರು, ಹಾಗೂ ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ನೇತೃತ್ವದಲ್ಲಿ. ಕೂಡ್ಲಿಗಿ ಶಾಸಕರಾದ ಡಾ”ಎನ್.ಟಿ. ಶ್ರೀನಿವಾಸ್ ರವರು, ಜಿಲ್ಲಾ ಅಧಿಕಾರಿ ದಿವಾಕರವರು ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿಗಳಾದ ಹರಿಬಾಬುರವರ ಉಪಸ್ಥಿತಿಯಲ್ಲಿ. ತಾಲ್ಲೂಕಿನ ವಿವಿಧ ಇಲಾಖೆಗಳ ಜಿಲ್ಲಾಧಿಕಾರಿಗಳು ಹಾಗೂ ತಾಲೂಧಿಕಾರಿಗಳನ್ನೊಳಗೊಂಡ, ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಸಭೆಯಲ್ಲಿ ಪ್ರಮುಖ ಇಲಾಖೆಗಳಲ್ಲಿನ ಯೋಜನೆಗಳ ಪ್ರಗತಿ ಕುರಿತು, ಪ್ರತಿಯೊಂದು ಇಲಾಖೆಯ ಅಧಿಕಾರಿಗಳಲ್ಲಿನ ಯೋಜನೆಗಳ ಅನುಷ್ಠಾನಕ್ಕೆ ತಂದಿರುವ ಸ್ಥಿತಿಗತಿಗಳ ಪರಿಶೀಲನೆ ನಡೆಯಿತು. ಶಿಕ್ಷಣ, ಆರೋಗ್ಯ, ಅರಣ್ಯ, ಕರಡಿದಾಮ, ಪೋಲೀಸ್, ಪಂಚಾಯತಿ, ಶೌಚಾಲಯ, ವಸತಿ, ಕೃಷಿ, ತೋಟಗಾರಿಕೆ, ಅಂಗನವಾಡಿ, ನೀರಾವರಿ, ಮೂಲಭೂತ ಸೌಕರ್ಯ, ಪಂಚಾಯ್ತ ರಾಜ್ಯ, ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಗಂಭೀರವಾಗಿ ಚರ್ಚಿಸಲಾಯಿತು.
ಮತ್ತು ಕೆಲ ಇಲಾಖೆಗಳ ಪ್ರಗತಿಯ ಕುರಿತು ವರದಿಗಳನ್ನು ಗಮನಿಸಿದರು, ಆದಷ್ಟು ಬೇಗ ಕುಂದು ಕೊರತೆಗಳು ಜರುಗದಂತೆ. ನೋಡಿಕೊಳ್ಳಬೇಕು ಎಂದು ಶಾಸಕರು ಹಾಗೂ ಸಚಿವರು, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಅಧಿಕಾರಿ ದಿವಾಕರವರು ಮಾತನಾಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ, ಸಾರ್ವಜನಿಕರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ. ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕಿದೆ, ಸಾರ್ವಜನಿಕರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಪಂಧಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನೊಂದಣಿ ಕಛೇರಿ ಉದ್ಘಾಟನೆ- ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಪಟ್ಟಣದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ರವರು, ನೊಂದಣಿ ಕಚೇರಿಯನ್ನು ಉದ್ಘಾಟಿಸಿದರು. ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ತಹಶಿಲ್ದಾರರು ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
