ಕೂಡ್ಲಿಗಿ:ಸರ್ವೆ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಿ ಡಾ॥ಬಿ.ಆರ್.ಅಂಬೇಡ್ಕರ್ ಕಾಲೋನಿ ಮಾಜಿ ದೇವದಾಸಿಯರ ಹಕ್ಕೊತ್ತಾಯ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 14ನೇ ವಾರ್ಡ್, ಡಾ॥ಬಿ.ಆರ್.ಅಂಬೇಡ್ಕರ್ ನಗರ ಮಾಜಿ ಮಾಜಿ ದೇವದಾಸಿ ಮಹಿಳೆಯರು. ಸರ್ಕಾರ ಈ ಹಿಂದೆ 2007 ಮತ್ತು 8ನೇ ಸಾಲಿನಲ್ಲಿ, ರಾಜ್ಯಾದ್ಯಂತ ದೇವದಾಸಿಯರ ಸರ್ವೇ ಸಮೀಕ್ಷೆಯನ್ನು ಮಾಡಿಸಿದ್ದು. ಆ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ 14ನೇ ವಾರ್ಡಿನ, ಡಾ॥ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ ಮಾಜಿ ದೇವದಾಸಿ ಮಹಿಳೆಯರನ್ನು. ಇಲಾಖೆಯ ಸಮೀಕ್ಷಾತಂಡ ಪರಿಗಣಿಸದೇ ತಪ್ಪು ಮಾಹಿತಿಯ ಆಧಾರದ ಮೇಲೆ ಅಂಖ್ಯೆ ಸಂಖ್ಯೆ ನೀಡಲಾಗಿರುತ್ತದೆ, ಕಾರಣ ಮರು ಸರ್ವೆ ಸಮೀಕ್ಷೆ ಮಾಡದೆ ಕೈ ಬಿಟ್ಟು ಹೋಗಿರುತ್ತಾರೆ. ಆದರ ಪರಿಣಾಮ ನಿಜವಾದ ಮಾಜಿ ದೇವದಾಸಿ ಮಹಿಳೆಯರು, ತಮ್ಮನ್ನು ಕೈ ಬಿಟ್ಟಿರುವುದಕ್ಕೆ ಕಂಗಾಲಾಗಿದ್ದಾರೆ. ಈ ದುರಾವಸ್ಥೆಗೆ ಇಲಾಖೆಯಿಂದ ಇಂದಿಗೂ ಕಾರಣ ತಿಳಿದು ಬಂದಿಲ್ಲ, ಸಂಬಂಧಿಸಿದಂತೆ ಸಾಕಷ್ಟು ಬಾರಿ ಇಲಾಖಾಧಿಕಾರಿಗಳ ಬಳಿ. ಸರ್ವೆ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸುವಂತೆ ಮನವಿ ಮಾಡಲಾಗಿದೆಯಾದರೂ, ಪ್ರಯೋಜನವಾಗಿಲ್ಲ ನಿರ್ಲಕ್ಷ್ಯ ದೋರಣೆ ತಾಳಲಾಗಿದೆ. ಪರಿಣಾಮ ಸರ್ಕಾರದ ಸೌಲಭ್ಯಗಳಿಗೆ ತಾವು ಅರ್ಹರಿದ್ದರೂ ಕೂಡ, ಯಾವೊಂದೂ ಸೌಲಭ್ಯ ದೊರಕದಾಗಿದೆ ಎಂದು. ನೊಂದ ಮಾಜಿ ದೇವ ದಾಸಿಯರು, ಜಿಲ್ಲಾಧಿಕಾರಿಗಳ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ದಲಿತ ಹೋರಾಟಗಾರ, ಹಾಗೂ ಪತ್ರಕರ್ತ ಸಾಲುಮನಿ ರಾಘವೇಂದ್ರ ನೇತೃತ್ವದಲ್ಲಿ. ಜಿಲ್ಲಾಧಿಕಾರಿಗೆ ಸರ್ವೆ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರ್ಪಡೆಗೊಳಿಸುವಂತೆ, ಕ್ರಮಕ್ಕಾಗಿ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. *ಪತ್ರದ ಸಾರಾಂಶ*- ಮಾನ್ಯ ಜಿಲ್ಲಾಧಿಕಾರಿಗಳಾದ ತಾವುಗಳು ಗಮನಿಸಬೇಕಾಗಿರುವ ವಿಷಯವೇನೆಂದರೆ_ ಸರ್ಕಾರದ ಸಮೀಕ್ಷೆ ಪಟ್ಟಿಯಲ್ಲಿ 14ನೇ ವಾರ್ಡಿನ ಮಾಜಿ ದೇವದಾಸಿಯರಾದ. ನಾವು 35ಕ್ಕೂ ಹೆಚ್ಚು ಮಾಜಿ ದೇವದಾಸಿಯರಿದ್ದು, ಸರ್ವೆ ಪಟ್ಟಿಯಿಂದ ನಮ್ಮ ಹೆಸರುಗಳನ್ನು ಕೈಬಿಡಲಾಗಿದೆ. ಇಲಾಖೆ ಸರ್ವೆ ಮಾಡಿರುವ ಪಟ್ಟಿಯಲ್ಲಿ ನಮ್ಮ ಹೆಸರುಗಳನ್ನು ಸೇರಿಸಬೇಕಿದೆ, ನಮಗೆ ನ್ಯಾಯಯುತವಾಗಿ ಸಲ್ಲಬೇಕಿರುವ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ಸರ್ವೆ ಮಾಡಿರುವವು ಮಾಡಿರುವ ತಪ್ಪಿನಿಂದಾಗಿ, ನಾವು ಈವರೆಗೂ ಸರ್ಕಾರದ ಯಾವುದೇ ಸೌಕರ್ಯಗಳನ್ನು ಹೊಂದದೇ ವಂಚನೆಗೆ ಒಳಗಾಗಿದ್ದೇವೆ. ಕಾರಣ ತಾವು ನಮ್ಮ ಹೆಸರುಗಳನ್ನು .ಸರ್ವೆ ಪಟ್ಟಿಯಲ್ಲಿ ಸೇರಿಸಿ, ಸಂಬಂಧಪಟ್ಟಂತಹ ಇಲಾಖೆಗೆ ಪರಿಗಣಿಸುವಂತೆ ನಿರ್ಧೇಶಿಸಬೇಕೆಂದು ಮನವಿ. ಈ ಪತ್ರವನ್ನು ಮಾಜಿ ದೇವದಾಸಿಯರು ಜಿಲ್ಲಾಧಿಕಾರಿಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿ, ಫಿರೋಜ್ ಖಾನ್ ರನ್ನು ಕರೆಯಿಸಿ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ 14ನೇ ವಾರ್ಡಿನ ಸರ್ವೆ ಕುರಿತು ಮಾಹಿತಿ ಪಡೆಯಿರಿ ಎಂದು ಸೂಚಿಸಿದರು. ಮಾಜಿ ದೇವದಾಸಿ ಮಹಿಳೆಯರಿಗೆ ಈ ಬಾರಿ ಸರ್ಕಾರದ ಅನ್ವಯ ಸರ್ವೆ ಪಟ್ಟಿಯಲ್ಲಿ ಸೇರಿಸುವ ಅವಕಾಶವಿದ್ದರೆ, ಕೂಡಲೇ ಸೇರಿಸುವಂತೆ ಕ್ರಮಕ್ಕೆ ಸೂಚಿಸಿದರು. ಸಂಬಂಧಿಸಿದಂತೆ ಶೀಘ್ರವೇ ಇಲಾಖಾಧಿಕಾರಿಗಳ ಚರ್ಚಿಸಿ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ, ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿಗಳು ಮಾಜಿ ದೇವದಾಸಿಯರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ದೇವದಾಸಿ ಮಹಿಳೆಯರಾದ ಪೂಜಾರಿ ಗಂಗಮ್ಮ, ಸಮಾದೇಮ್ಮ,ಲೋಕಮ್ಮ, ಮರಿಯಮ್ಮ, ರತ್ನಮ್ಮ, ಗೌರಮ್ಮ, ಶಾರದಮ್ಮ, ರೇಣುಕಮ್ಮ, ತಾಳಿಕಾಯಿ ಹಾಲಮ್ಮ,ಸೊಲ್ಲಾಪುರ ಹುಲಿಗೆಮ್ಮ,ದಂಡೆಮ್ಮ, ಪೂಜಾರಿ ಗೌರಮ್ಮ, ಪೂಜಾರಿ ರೇಣುಕಮ್ಮ ಸೇರಿದಂತೆ ಹತ್ತಾರು ಮಾಜಿ ದೇವದಾಸಿ ಮಹಿಳೆಯರು ಇದ್ದರು…

ವರದಿ,ವಿ. ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
