ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ದಲಿತ ಮುಖಂಡರಿಂದ ಒತ್ತಾಯ
ಕೂಡ್ಲಿಗಿ: ಗುಂಡು ಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ದಲಿತ ಮುಖಂಡರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಮನವಿ ಹಾಗೂ ಒತ್ತಾಯ ಮಾಡಿದ್ದಾರೆ.
ಸಿದ್ದಾಪುರ ಗ್ರಾಮಕ್ಕೆ ಈವರೆಗೂ ಒಂದೇ ಚರಂಡಿ ಇದ್ದು ಅದು ಕೂಡ ಸಂಪೂರ್ಣ ಹದಗೆಟ್ಟು ಹಾಳಾಗಿ ಹೋಗಿದೆ. ಗ್ರಾಮದ ನೀರಲ್ಲ ಹರಿದು ಬಂದು ಒಂದೇ ಚರಂಡಿಗೆ ಸೇರಿ ವಾಸಿಸುವ ಕುಟುಂಬಗಳ ಮನೆಯ ಮುಂದೆ ನಿಂತು ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ತಾಣವಾಗಿದೆ ಸಾಂಕ್ರಮಿಕ ರೋಗಗಳ ಹರಡುವ ಬೀತಿ ಉಂಟಾಗಿದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನೂರಾರು ಬಾರಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಮಾಧ್ಯಮಗಳ ಮೂಲಕ ಅನೇಕ ಬಾರಿ ಪ್ರಕಟಿಸಲಾಗಿದೆ ಚರಂಡಿಯನ್ನು ಹೂಳೆತ್ತುವುದರಿಂದ ಇಲ್ಲಿನ ಸಮಸ್ಯೆ ಬಗೆಹರಿಯುವುದಿಲ್ಲ ಹೊಸ ಚರಂಡಿ ನಿರ್ಮಾಣವಾಗಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮುಂದೆ ಹೇಳಲಾಗಿದೆ ಆದರೂ ಕೂಡ ಯಾವ ಅಧಿಕಾರಿಗಳು ಈ ವಿಚಾರದ ಬಗ್ಗೆ ಧ್ವನಿ ಎತ್ತಿಲ್ಲ ಮಾಡಿಸುತ್ತೇವೆ ಎಂಬ ಭರವಸೆಗಳನ್ನು ಕೊಡುತ್ತಾ ಬಂದಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸಿದರೆ ಸಮಸ್ಯೆ ಗೊತ್ತಾಗುತ್ತದೆ ಅತಿ ಶೀಘ್ರದಲ್ಲಿ ಚರಂಡಿ ವ್ಯವಸ್ಥೆ ಸೇರಿದಂತೆ ಅಂಗನವಾಡಿ ಕೇಂದ್ರದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ರಸ್ತೆ ದುರಸ್ತಿ, ಕಾಂಪೌಂಡ್ ಹಿಂಬಾಗದಲ್ಲಿ ಹಾಕಿರುವ ಕಸದ ರಾಶಿಗಳು, ಅಂಗನವಾಡಿ ಪಕ್ಕದಲ್ಲಿರುವ ಪಾಳುಬಾವಿ, ಅಂಗನವಾಡಿ ಕೇಂದ್ರದ ಮೇಲೆ ಬೆಳೆದಿರುವ ಮುಳ್ಳಿನ ಬೇಲಿ, ಓಡಾಡುವ ರಸ್ತೆ ಗಳಿಗೆ ವಾಗಿರುವ ಮುಳ್ಳಿನ ಬೇಲಿಗಳನ್ನು ಹಾಗೂ ಸಾರ್ವಜನಿಕರ ನೀರಿನ ನಳದ ಪಕ್ಕದಲ್ಲಿ ಹಾಕಿರುವ ತ್ಯಾಜ್ಯ ವಸ್ತುಗಳು ಇನ್ನು ಅನೇಕ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸದಿದ್ದಲ್ಲಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ಮಾಡಲು ಅನಿವಾರ್ಯವಾಗುತ್ತದೆ ಎಂದು ಸಿದ್ದಾಪುರ ಗ್ರಾಮಸ್ಥರು ದಲಿತ ಮುಖಂಡರು ವಿವಿಧ ಪರ ಸಂಘಟನೆಗಳು ಮಹಿಳಾ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಇಷ್ಟಕ್ಕೆಲ್ಲಾ ಅವಕಾಶ ಕೊಡದಂತೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿ ಚರಂಡಿ ವ್ಯವಸ್ಥೆ ರಸ್ತೆ ದುರಸ್ತಿ ಸೇರಿದಂತೆ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ದಲಿತ ಮುಖಂಡರು, ವಿವಿಧ ಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಒತ್ತಾಯ ಹಾಗೂ ಮನವಿ ಮಾಡಿದ್ದಾರೆ
[ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿದ್ದೇನೆ ಮುಂಬರುವ ಯೋಜನೆಗಳಲ್ಲಿ ಹೊಸ ಚರಂಡಿ ವ್ಯವಸ್ಥೆ ಮಾಡಲಾಗುತ್ತದೆ ಹಾಗೂ ಗ್ರಾಮದಲ್ಲಿನ ಸ್ವಚ್ಛತೆ ಮತ್ತು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ
ಗ್ರಾ.ಫಂ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್]…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
