ಹೊಸಹಳ್ಳಿಪೊಲೀಸರ ಕಾರ್ಯಾಚರಣೆ
ಬಂಗಾರ ದ ಆಭರಣಬೆಳ್ಳಿ ಮೂರ್ತಿ ಕಳ್ಳತನ ಮಾಡಿದ ನಗದು ಸಹಿತ ಆರೋಪಿ ಬಂಧನ
ಕಾನ ಹೊಸಹಳ್ಳಿ: ಸಮೀಪದ ಚಿಕ್ಕಜೋಗಿಹಳ್ಳಿ ತಾಂಡದ ವೀಣಾ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕಾನಾಹೊಸಹಳ್ಳಿ ಪೊಲೀಸರು ಒಂದೇ ದಿನದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆಭರಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ದಿನಾಂಕ 3/7/23 ರಂದು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮನೆ ಹಾಗೂ ತೋಟದ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಮಂಜುನಾಥ ಎನ್ನುವವರು ಮನೆಯಲ್ಲೂ ಇಲ್ಲದೇ, ಪೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದು, ಅವನೇ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮನೆಯ ಮಾಲೀಕರು ದೂರು ದಾಖಲಿಸಿದ್ದರು. ಆರೋಪಿ ಮಂಜುನಾಥನನ್ನು ಮಂಗಳವಾರ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳುವಾದ 26 ಗ್ರಾಂ ಬಂಗಾರದ ಆಭರಣ ಮತ್ತು 74 ಗ್ರಾಂ ಬೆಳ್ಳಿಯ ಮೂರ್ತಿಗಳು, ಹಾಗೂ ರೂ 55,130 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಂಜುನಾಥನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಬಿ. ಎಲ್, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಮಾರ್ಗದರ್ಶನದಲ್ಲಿ, ಕಾನಾಹೊಸಹಳ್ಳಿ ಪಿಎಸ್‌ಐ ಎರಿಯಪ್ಪ ಅಂಗಡಿ, ಪಿಎಸ್ಐ ಎಚ್ ನಾಗರತ್ನಮ್ಮ (ಅಪರಾಧ ವಿಭಾಗ) ಇವರ ನೇತೃತ್ವದಲ್ಲಿ ಹಾಗೂ ಕಾರ್ಯಾಚರಣೆಯಲ್ಲಿ ಎಎಸ್ಐ ಗೋಪಾಲ್, ಪೊಲೀಸ್ ಇಲಾಖೆ ಸಿಬ್ಬಂದಿ ನಾಗರಾಜ್, ಸಿದ್ದಲಿಂಗಪ್ಪ ಜಗದೀಶ್ ವಿಜಯ್, ಪ್ರಭಾಕರ್, ಹಾಲೇಶ್, ಕಲ್ಲೇಶ್, ಸಂದೀಪ್, ಕುಮಾರ್ ನಾಯ್ಕ, ರವಿಗೌಡ ಭಾಗಿಯಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
