;

ಕೂಡ್ಲಿಗಿ: ಅಗತ್ಯ ಇರೋ ಕಡೆಗಳಲ್ಲಿ, ತಡೆ ಗೋಡೆ ನಿರ್ಮಿಸುವಂತೆ ಕ್ರಮಕ್ಕೆ ವಂದೇ ಮಾತರಂ ಒತ್ತಾಯ…!!!

ಕೂಡ್ಲಿಗಿ: ಅಗತ್ಯ ಇರೋ ಕಡೆಗಳಲ್ಲಿ, ತಡೆ ಗೋಡೆ ನಿರ್ಮಿಸುವಂತೆ ಕ್ರಮಕ್ಕೆ ವಂದೇ ಮಾತರಂ ಒತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಅತ್ಯಂತ ಹೆಚ್ಚು ವಾಹನ ಸಂಚರಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾದ, ಸಂಡೂರು ರಸ್ತೆಯು ಸದಾ ವಾಹನಗಳ ಸಂಚಾರ ದಿಂದ ಕೂಡಿರುತ್ತದೆ. ಪಟ್ಟಣದ ಅಂಚಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ರಸ್ತೆಗೆ ಹೊಂದಿಕೊಂಡಂತಿರುವ ಕಟ್ಟಡದಲ್ಲಿದೆ. ಅದು ರಸ್ತೆಯಿಂದ ಆರೇಳು ಅಡಿ ಆಳದ ತೆಗ್ಗು ಪ್ರದೇಶದಲ್ಲಿದ್ದು, ರಸ್ತೆಯಿಂದ ಐದಾರು ಅಡಿಯಷ್ಟೇ ಅಂತರದಲ್ಲಿದೆ. ವಸತಿ ನಿಲಯದ ಮುಂದುಗಡೆಯ ರಸ್ತೆಯ ಅಂಚಿನಲ್ಲಿ, ಯಾವುದೇ ತಡೆ ಗೋಡೆ ನಿರ್ಮಿಸಿಲ್ಲ ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿಯಾಗಿದೆ. ಇದರಿಂದಾಗಿ ವಸತಿ ನಿಲಯದ ವಿದ್ಯಾರ್ಥಿಗಳು ನಿತ್ಯ ಆತಂಕ ಅನುಭವಿಸುತ್ತಿದ್ದಾರೆ, ರಸ್ತೆಯ ತಿರುವಿನಲ್ಲಿ ತುಂಬಾ ಕೆಳ ಸ್ಥರದಲ್ಲಿ ವಸತಿ ನಿಲಯವಿದ್ದು, ಸಂಡೂರು ರಸ್ಥೆಯಿಂದ ಕೂಡ್ಲಿಗಿ ಕಡೆಗೆ ಸಂಚರಿಸುವ ವಾಹನಗಳು. ತಿರುವಿನಲ್ಲಿ ಅಕಸ್ಮಾತ್ ಆಗಿ ಚಾಲಕರ ಹತೋಟಿ ತಪ್ಪಿದರೆ, ವಾಹನ ನೇರವಾಗಿ ವಸತಿ ನಿಲಯವನ್ನೇ ಪ್ರವೇಶಿಸುವ ಸಾಧ್ಯತೆ ಇದೆ. ನೂರಾರು ವಿದ್ಯಾರ್ಥಿಗಳಿರುವ ವಸತಿ ನಿಲಯದಲ್ಲಿ, ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ಸಹಜವಾಗಿಯೇ ನಿಲಯದ ಕಿರಿದಾದ ಅಂಗಳದಲ್ಲಿರುತ್ತಾರೆ. ಈ ವಸತಿ ನಿಲಯದ ಮುಂಭಾಗದಲ್ಲಿ ಸುಸಜ್ಜಿತ ಅಂಗಳವಿಲ್ಲ, ಆಟದ ಮೈದಾನವಂತೂ ಇಲ್ಲವೇ ಇಲ್ಲ.

ಸಹಜವಾಗಿಯೇ ವಿದ್ಯಾರ್ಥಿಗಳು ತಮ್ಮ ಶಾಲೆ ಬಿಟ್ಟನಂತರ, ಕೆಲ ಹೊತ್ತು ತಮ್ಮ ವಸತಿ ನಿಲಯದ ಅಂಗಳದಲ್ಲಿ ತಂಗೋದು ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರಸ್ತೆಯ ಮೇಲೆ ಸಂಚರಿಸುವ ವಾಹನ, ಆಕಸ್ಮಾತ್ ಚಾಲಕನ ನಿಯಂತ್ರಣ ತಪ್ಪಿ ವಸತಿ ನಿಲಯದ ಕಡೆ ನುಗ್ಗಿದರೆ, ಭಾರೀ ಅನಾಹುತ ಜರುಗುವ ಸಾಧ್ಯತೆ ಇದೆ. ಇಂತಹ ಘಟನೆಗಳು ವರ್ಷದಲ್ಲಿ ಆಗಾಗ್ಗೆ ಜರುಗಿದ್ದು, ಅದೃಷ್ಟ ವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ.
ನಿತ್ಯ ಅಸಂಖ್ಯಾತ ವಾಹನಗಳ ಸಂಚಾರದಿಂದ ಕೂಡಿರುವ ಪರಿಣಾಮ, ರಸ್ತೆಯ ದೂಳು ವಾಹನದ ಸಂಚಾರದ ರಭಸಕ್ಕೆ ಉಂಟಾದ ಗಾಳಿಯೊಂದಿಗೆ ವಸತಿ ನಿಲಯಕ್ಕೆ ನುಗ್ಗುತ್ತಿದೆ.
ಪಟ್ಟಣ ಪ್ರವೇಶಿಸುವ ಭಾರೀ ವಾಹನಗಳು, ಅತೀ ಹೆಚ್ಚಾಗಿ ಸಂಚರಿಸುವುದು ಇದೇ ರಸ್ತೆಯಲ್ಲಿಯೇ. ಹಲವು ಶಾಲಾ ಕಾಲೇಜ್ ಗಳು ಹಾಗೂ ಕೆಲ ಸರ್ಕಾರಿ ಇಲಾಖೆಗಳ ಕಚೇರಿಗಳು, ಇನ್ನೂ ಈ ರಸ್ತೆಯಲ್ಲೇ ಇವೆ. ಸಾರ್ವಜನಿಕರು ವಿದ್ಯಾರ್ಥಿಗಳು ಬೈಕ್ ಚಾಲನೆಯೊಂದಿಗೆ, ಅಥವಾ ಪಾದಾಚಾರಿಗಳಾಗಿ ಸಂಚರಿಸುವುದು ಸರ್ವೇ ಸಾಮಾನ್ಯ. ತಡೆಗೋಡೆಗಳಿಲ್ಲದ ಪರಿಣಾಮ ಅವರೂ ಕೂಡ ಅಪಾಯದಂಚಿಗೆ ತೆರಳುವ ಸಾಧ್ಯತೆ ತಳ್ಳಿಹಾಕೋಹಾಗಿಲ್ಲ, ಸಂಬಂಧಿಸದ ಇಲ‍ಾಖೆಯವರು ಶೀಘ್ರವೇ ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕಿದೆ. ತಡೆಗೋಡೆ ಕೇವಲ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮ‍ಾತ್ರವಲ್ಲ, ರಸ್ತೆಯಲ್ಲಿ ಸಂಚರಿಸುವ ಎಲ್ಲ‍ರಿಗೂ ಸುರಕ್ಷೆಯಾಗಲಿದೆ. ರಸ್ತೆಯ ಒಂದು ಕಡೆ ವಸತಿ ಶಾಲೆ ಇದ್ದು, ಮತ್ತೊಂದೆಡೆ ಆಳದ ತೆಗ್ಗಿರುವ ಹಳ್ಳವಿದೆ. ಕೂಡ್ಲಿಗಿ ಕಡೆಯಿಂದ ಸಂಡೂರು ಕಡೆ ತೆರಳುವವರಿಗೆ ಹಳ್ಳ, ಸಂಡೂರು ಕಡೆಯಿಂದ ಕೂಡ್ಲಿಗಿ ಕಡೆ ಆಗಮಿಸುವವರಿಗೆ . ತಡೆಗೋಡೆಗಳಿಲ್ಲದ ಕಾರಣ ಸಾರ್ವಜನಿಕರಿಗೆ ವಸತಿ ಶಾಲೆಯ ಅಂಗಳದಲ್ಲಿರುವ ತೆಗ್ಗು, ಮಾರಾಣಾಂತಿಕ ಅಪಾಯದ ಕದ ತಟ್ಟಲಿದೆ. ಕಾರಣ ರಸ್ತೆಯ ಇಕ್ಕೆಲಗಳಲ್ಲಿ ಸಂಬಂಧಿಸಿದ ಇಲಾಖೆಯವರು, ಶೀಘ್ರವೇ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಬೇಕಿದೆ. ಇಂತಹ ಅಪಾಯ ಕಾರಿ ರಸ್ತೆ ತಿರುವುಗಳು, ಹಾಗೂ ಪಣೆವುಗಳು ಪಟ್ಟಣದಂಚಿನಲ್ಲಿನ ಅನೇಕ ರಸ್ಥೆಗಳಲ್ಲಿವೆ. ಹೊಸಪೇಟೆ ರಸ್ಥೆಯ ಹಳೇ ರೈತ ಸಂಪರ್ಕ ಕೇಂದ್ರ ಹತ್ತಿರ, ಊರ ಮುಂದಿನ ಹಳ್ಳಕ್ಕೆ ಇರೋ ಪಣೇವು. ಹೊಸಪೇಟೆ ರಸ್ಥೆಯ ತಿರುವು ಹಳ್ಳದ ಬಳಿ ಇದೆ, ಪಣೆವು ಇರುವ ರಸ್ಥೆಯಲ್ಲಿ ತಡೆಗೋಡೆಗಳಿಲ್ಲದೇ ಅಪಾಯದ ಘಂಟೆ ಭಾರಿಸುತ್ತಿದೆ. ರಸ್ಥೆಯ ಇಕ್ಕೆಲಗಳಲ್ಲಿ ತಡೆಗೋಡೆಗಳಿಲ್ಲ, ಅವು ಅಪಾಯಕ್ಕೆ ಆಹ್ವಾನ ನೀಡುವ ರೀತಿಯಲ್ಲಿ ಗೋಚರಿಸುತ್ತಿವೆ. ಪಟ್ಟಣದ ಅಂಚಿನಲ್ಲಿ ಇಂತಹ ಅಪಾಯಕಾರಿ ಸ್ಥಳಗಳು ಕೆಲವು ಇದ್ದು, ಸಂಬಂಧಿಸಿದ ಇಲಾಖೆಯವರು ಖುದ್ದು ಪರಿಶೀಲಿಸಿ ಶೀಘ್ರವೇ ತಡೆಗೋಡೆಗಳನ್ನು ನಿರ್ಮಿಸಬೇಕಿದೆ.

ಮತ್ತು ಅಪಘಾತ ವಲಯಗಳಲ್ಲಿ ಹಾಗೂ ಪಣೇವು ಇರೋಕಡೆ, ತಿರುವು ರಸ್ಥೆಗಳ ಬಳಿ ವೇಗ ನಿಯಂತ್ರಣಕ್ಕೆ. ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ, ಅಗತ್ಯ ಇರೋ ಕಡೆ ತಡೆಗೋಡೆಗಳನ್ನು. ಶೀಘ್ರವೇ ನಿರ್ಮಿಸಬೇಕಿದೆ, ಕೆಲವು ಅಪಘಾತ ವಲಯಗಳಲ್ಲಿ ವೇಗ ನಿಯಂತ್ರಣದ ಸೂಚನಾ ಫಲಕ ಗಳನ್ನು ನಿರ್ಮಿಸಬೇಕಿದೆ. ಮತ್ತು ವೇಗ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ, ಹಾಗೂ ವೇಗ ನಿಯಂತ್ರಣ ಮತ್ತು ಅಪಾಯದ ಸೂಚನಾ ಫಲಕಗಳನ್ನು ನಿರ್ಮಿಸಬೇಕಿದೆ. ಎಲ್ಲದಕ್ಕೂ ಮಿಗಿಲಾಗಿ ರಸ್ತೆಗೆ ಅಂಟಿಕೊಂಡಿರುವ , ಇಂತಹ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಸುವ್ಯವಸ್ಥೆ ಇರೋ ಕಡೆಗೆ ಶೀಘ್ರವೇ ಸ್ಥಳಾಂತರಿಸಬೇಕಿದೆ. ಇದಕ್ಕ‍ಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲಿಸಿ, ವಸ್ಥು ಪರಿಸ್ಥಿತಿಯ ಗಂಭೀರತೆಯನ್ನರಿತು. ತುರ್ತು ಮುಂಜಾಗ್ರತಾ ಕ್ರಮಗಳನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ಶೀಘ್ರವೇ ಕೈಗೊಳ್ಳಬೇಕಿದೆ.
ಂನಿರ್ಲಕ್ಷ್ಯ ತೋರಿದ್ದಲ್ಲಿ, ಘತಿಸ ಬಹುದಾದ ಅವಘಡಗಳಿಗೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೇ ನೇರ ಹೊಣೆ ಎಂದು, ಪ್ರಜ್ಞಾವಂತರು ವಂದೇ ಮಾತರಂ ಜಾಗೃತಿ ವೇದಿಕೆ ಸಹಯೋಗದಲ್ಲಿ ಈ ಮೂಲಕ ಎಚ್ಚರಿಸಿದ್ದಾರೆ.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend