;

ವಿಜಯನಗರ ಸಂಸ್ಕೃತಿ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಸಮಾರಂಭ…!!!

ವಿಜಯನಗರ ಸಂಸ್ಕೃತಿ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಸಮಾರಂಭ

ಕೂಡ್ಲಿಗಿ: ತಾಲೂಕಿನ ಕಾನಮಡುಗು ಗ್ರಾಮದ ದಾಸೋಹ ಮಠದ ಆವರಣದಲ್ಲಿ ಮಾತೆ ಪಾರ್ವತಮ್ಮ ನಾಲ್ವಡಿ ಶರಣಾರ್ಯರ 3ನೇ ವರ್ಷದ ಪುಣ್ಯಸ್ಮರಣೆ ಹಾಗೂ ವಿಜಯನಗರ ಸಂಸ್ಕೃತಿ ಮತ್ತು ಸಾಹಿತ್ಯ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಸ್ತ ಪ್ರತಿ ವಿಭಾಗದ ಮುಖ್ಯಸ್ಥರಾದ ಡಾ.ಕೆ ರವೀಂದ್ರನಾಥ್ ಮಾತನಾಡಿ ವಿಜಯನಗರ ಸಾಮ್ರಾಜ್ಯ ಇಡೀ ದಕ್ಷಿಣ ಭಾರತದ ಆಡಳಿತ ಸೂತ್ರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಮೆರೆದ ಏಕೈಕ ಸಾಮ್ರಾಜ್ಯವೆನಿಸಿತ್ತು. ಆ ಸಾಮ್ರಾಜ್ಯದಲ್ಲಿ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ನೂತನ ವಿಜಯನಗರ ಜಿಲ್ಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಿರೂಪಿಸುವ ಸಂಶೋಧನಾತ್ಮಕ ಲೇಖಕನಗಳ ಸಂಕಲನವಾಗಿದೆ ಕೃತಿಯ ಕುರಿತು ಮಾತನಾಡಿದರು.
ನಂತರ ಬೆಂಗಳೂರಿನ ಸಾಹಿತಿ ರಾಜಶೇಖರ ಮಠಪತಿ ಮಾತನಾಡಿ
ಶೈಕ್ಷಣಿಕ ಕ್ಷೇತ್ರದಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ ಎಂದರು ದೇವಸ್ಥಾನಗಳು ಮಠಗಳನ್ನು ಕಟ್ಟುವ ಮೂಲಕ ನಮ್ಮನ್ನು ನಾವು ಕಟ್ಟಿಕೊಳ್ಳೋಣ. ನಮ್ಮಲ್ಲಿನ ಪ್ರಜ್ಞ ಹೀನತೆಯಿಂದಾಗಿ ಹಲವು ದೇವಸ್ಥಾನಗಳು, ಮಠಗಳು ಅವಾಸದ ಅಂಚಿನಲ್ಲಿರುವುದು ವಿಷಾದನೀಯವಾಗಿದೆ. ಅಲ್ಲದೆ ಈ ಕೃತಿಯಲ್ಲಿ ಎಚ್ಚರಿಕೆಯ ಸಂದೇಶ ಸಹ ಸಿಗಲಿದೆ ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಟ್ಟೂರಿನ ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿ ಮಾತನಾಡಿ ದಾಸೋಹ ಮಠದ ಕೊಡುಗೆ ಈ ನಾಡಿನ ನಾನಾ ಭಾಗಗಳಲ್ಲಿ ಇಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಕೊಟ್ರೇಶ್ ಕೃತಿಯ ಸ್ವ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದಾ.ಮ. ಐಮಡಿ ಶರಣಾರ್ಯರು ಅಧ್ಯಕ್ಷತೆ ವಹಿಸಿದ್ದರು. ಮುಸ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ. ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ. ಅಡವಿಹಳ್ಳಿ ವೀರಗಂಗಾಧರ ಸ್ವಾಮೀಜಿ. ಕುಷ್ಟಗಿಯ ಕೈಲಾಸನಾಥ ಸ್ವಾಮೀಜಿ. ಸಾನಿಧ್ಯ ವಹಿಸಿದ್ದರು.
ತಳವಾರ ಶರಣಪ್ಪ. ದಿವಾಕರ್ ನಾರಾಯಣ. ನಿರ್ವಹಿಸಿದರು. ಸೇರಿದಂತೆ ಈ ಕಾರ್ಯಕ್ರಮದಲ್ಲಿ ಮಠದ ಸದ್ಭಕ್ತರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;