ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉಪಾಧ್ಯಕ್ಷರಾಗಿ ಮಣ್ಣವರ ಸಿದ್ದಣ್ಣ ಅವಿರೋಧ ಆಯ್ಕೆ!!!!
ಕೂಡ್ಲಿಗಿ: ಖಾನಹೊಸಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸ್ಥಾನವು ಈ ಮೂರು ತಿಂಗಳ ಹಿಂದೆ ರಾಜೀನಾಮೆ ನೀಡಿದ ಕಾರಣ, ಬುಧವಾರ ನಡೆದ ಚುನಾವಣೆಯಲ್ಲಿ ಖಾನಹೊಸಹಳ್ಳಿಯ ಮಣ್ಣವರ ಸಿದ್ದಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದ ನಿಜಾಮುದ್ದೀನ್ ಅವರು ಕಳೆದ ಮೂರು ತಿಂಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು, ಆ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಗೆ ಎಂ ಸಿದ್ದಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿ ಕೃಷ್ಣನಾಯ್ಕ ರವರು ಎಂ ಸಿದ್ದಪ್ಪ ಅವರ ಹೆಸರನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಇಮಡಾಪುರ ವೀರೇಶ್ ಸ್ವಾಮಿ, ಹಾಗೂ ನಿರ್ದೇಶಕರಾದ ನಿಜಾಮುದ್ದೀನ್, ವಿರೂಪಾಕ್ಷಪ್ಪ, ಎಳನೀರು ಗಂಗಣ್ಣ, ವಕೀಲ ಕೆ. ಚನ್ನಪ್ಪ, ಸಜ್ಜಲರ ನಾಗರಾಜ್, ಭುವನೇಶ್ವರಿ, ಹನುಮಂತಪ್ಪ, ಬಸವರಾಜ್ ಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಎಚ್ .ಕರೆಗೌಡ, ಮುಖಂಡರಾದ ಕೆ. ಜಿ. ಕುಮಾರ್ ಗೌಡ , ಎಂ. ಬಸವರಾಜ ಹಾಗೂ ಸಂಘದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
