ಬೇಸಿಗೆ ಶಿಬಿರ ಮಕ್ಕಳ ಪ್ರತಿಭೆಗೆ ವೇದಿಕೆ
ಕೂಡ್ಲಿಗಿ: ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಸರ್ಕಾರ ಉಚಿತ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ. ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೆ ಲಕ್ಷ್ಮೀಬಾಯಿ ತಿಳಿಸಿದರು. ತಾಲೂಕಿನ ಹೂಡೇಂ ಸ.ಹಿ.ಪ್ರಾ ಶಾಲೆಯಲ್ಲಿ ಶುಕ್ರವಾರ ಗ್ರಾ.ಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಹೂಡೇಂ ವತಿಯಿಂದ 8 ವರ್ಷದಿಂದ 13 ವರ್ಷದೊಳಗಿನ ಮಕ್ಕಳಿಗಾಗಿ ಮೇ 19 ರಿಂದ ಮೇ 27ರ ರವರೆಗೆ ಆಯೋಜಿಸಲಾದ ಬೇಸಿಗೆ ಶಿಬಿರ ತರಬೇತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇನ್ ಗ್ರಂಥಪಾಲಕರಾದ ತುಡುಮ ಗುರುರಾಜ್ ಮಾತನಾಡಿ ನಮ್ಮ ಇಲಾಖೆಯ ಆದೇಶದ ಮೇರೆಗೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ 8 ವರ್ಷದಿಂದ 13 ವರ್ಷದ ಒಳಗಿನ ಎಲ್ಲ ಮಕ್ಕಳು ಉಚಿತವಾಗಿ ನೊಂದಣಿಯನ್ನು ಪಡೆದು ಗ್ರಂಥಾಲಯದ ಉಪಯೋಗ ಮತ್ತು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪುಟ್ಟಮ್ಮ ಮಲ್ಲಿಕಾರ್ಜುನ, ರಾಮಚಂದ್ರಪ್ಪ, ಅಜ್ಜಣ್ಣ, ನಾಗಮ್ಮ ಗದ್ದಿ ಸ್ವಾಮಿ, ಶಾಲೆಯ ಶಿಕ್ಷಕ ವೀರೇಶ್, ಸಿಬ್ಬಂದಿ ದಕ್ಷಿಣ ಮೂರ್ತಿ, ಮಲಿಯಪ್ಪ ಹಾಗೂ ಗ್ರಂಥಾಲಯ ಓದುಗರು ಹಾಗೂ ಹೂಡೇಂ ಸ.ಹಿ.ಪ್ರಾ ಶಾಲೆ ಮಕ್ಕಳು ಮತ್ತು ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರದ ಮಕ್ಕಳು ಭಾಗವಹಿಸಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
