;

ಗುಡೇಕೋಟೆ ವಲಯ ಕಚೇರಿಗೆ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಬೇಟಿ…!!!

ಗುಡೇಕೋಟೆ ವಲಯ ಕಚೇರಿಗೆ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಬೇಟಿ

ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಡೇಕೋಟೆ ವಲಯ ಕಚೇರಿಗೆ ನೂತನ ವಿಜಯನಗರ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ಜಿಲ್ಲಾ ನಿರ್ದೇಶಕರಾಗಿ ನೇಮಕವಾಗಿ ಜಿಲ್ಲೆಗೆ ಆಗಮಿಸಿದ ನಂತರ ಇದೇ ಮೊದಲ ಬಾರಿಗೆ ಗುಡೇಕೋಟೆ ವಲಯ ಕಛೇರಿಗೆ ಆಗಮಿಸಿದ ಅವರಿಗೆ ಗೌರವ ಪೂರ್ವಕವಾಗಿ ಸ್ವಾಗತಿಸಿದ ವಲಯ ಮೇಲ್ವಿಚಾರಕರಾದ ಜ್ಯೋತಿಗುಡಿ.ರವರು ಅಭೂತಪೂರ್ವಕವಾಗಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದರೆ ಸಮಾಜದ ಅಭಿವೃದ್ಧಿ ಎಂಬುದಾಗಿದೆ. ಯೋಜನೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಸೃಷ್ಟಿಯಾಗಿದೆ ಹಲವು ಕಡುಬಡ ಕುಟುಂಬಕ್ಕೆ ಬೆಳಕು ಚೆಲ್ಲಿದೆ ಎಂದರು.

ಕರ್ತವ್ಯ ನಿಷ್ಠೆ ಸಾಧನೆ ಬದುಕಿಗೆ ಅದರ ಹಿಂದೆ ಪ್ರಾಮಾಣಿಕತೆಯೂ ಬದುಕಿನಲ್ಲಿ ಕರ್ತವ್ಯವನ್ನು ಮೆರೆಯಬೇಕು. ಆಗಲೇ ಸಾರ್ಥಕತೆ ಎಂಬುದು ಬರುತ್ತೆ. ಇಂದು ಮಾಡುವ ಕೆಲಸ ಇಂದೇ ಮಾಡುವ ಎಂಬ ಸಂಕಲ್ಪ ನಮ್ಮೆಲ್ಲರಲ್ಲಿ ಇರಬೇಕು. ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕಂತು ಬಾಕಿ ನಿಯಂತ್ರಣದಲ್ಲಿರಬೇಕು ಹಾಗೆ ಡಿಜಿಟಲ್ ಎಸ್ ಕೆ 21 ಸಂಬಂಧಿಸಿದ್ದಂತೆ ಸದಸ್ಯರಿಗೆ ಆರ್ಥಿಕ ಶಿಸ್ತಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ಈಗೆ ಹಲವಾರು ಸಂದೇಶಗಳನ್ನು ನಾವು ಅಳವಡಿಸಿಕೊಂಡು ಮತ್ತೊಬ್ಬರಿಗೆ ಹಂಚುವ ಕಾರ್ಯ ಮಾಡಿದಾಗ ಮಾತ್ರ ಸಂಘಗಳಲ್ಲಿ ಗುಣಮಟ್ಟ ಹಾಗೂ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸಬಹುದು.ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ವಲಯದ ಗುರಿ ಹಾಗೂ ಗುಣಮಟ್ಟ ಸುಧಾರಿಸಬಹುದಾಗಿದೆ ಎಂದು ಸೇವಾ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆಯಲ್ಲಿ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ.ಗುಡೇಕೋಟೆ ವಲಯ ಮೇಲ್ವಿಚಾರಕರಾದ ಜ್ಯೋತಿ ಗುಡಿ.ಸೇವಾಪ್ರತಿನಿಧಿಗಳಾದ ಮಹಾಲಕ್ಷ್ಮಿ.ನೇತ್ರಾವತಿ.ಲಕ್ಷ್ಮೀ.ದುರುಗೇಶ್.ಸೇವಾ ಕೇಂದ್ರದ ಸುನೀಲ್.ಸುವಿಧಾ ಪ್ರಿಯಾಂಕ.ಆಶಾ.ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;