ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಇಂದ್ರಜಿತ್ ನಾಯ್ಕ್..
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಆರ್ ಇಂದ್ರಜಿತ್ ನಾಯ್ಕ್ ಅವರು ಬೃಹತ್ ಮೆರವಣಿಗೆಯೊಂದಿಗೆ ಇಂದು ಚುನಾವಣಾಧಿಕಾರಿ ವಿವೇಕಾನಂದ ಅವರಿಗೆ ನಾಮಪತ್ರ ಸಲ್ಲಿಸಿದರು.
ಹೊಳಲ್ಕೆರೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಈ ಬಾರಿ ಕಣಕ್ಕೆ ಇಳಿದಿದ್ದು, ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಾಗೂ ಬೆಂಬಲಿಗರೊಂದಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಅವರ ಆಸ್ತಿ ವಿವರ ಹೀಗಿದೆ;
ಎಸ್.ಆರ್ ಇಂದ್ರಜಿತ್ ನಾಯ್ಕ್ ಅವರ ಕೈಯಲ್ಲಿ 5 ಲಕ್ಷ, ಪತ್ನಿ ಮಂಜುಳಾ ಕೈಯಲ್ಲಿ 3ಲಕ್ಷ ಇದೇ. ಕಾರು, ಒಡವೆ, ಬಂಗಾರ ಸೇರಿದಂತೆ ಇನ್ನಿತರೆ ಇಂದ್ರಜಿತ್ ನಾಯ್ಕ್ ಹೆಸರಿನಲ್ಲಿ 80 ಲಕ್ಷದ 50 ಸಾವಿರ ಚರಾಸ್ತಿ, ಪತ್ನಿ ಹೆಸರಿನಲ್ಲಿ 58 ಲಕ್ಷದ 50 ಸಾವಿರ ಚರಾಸ್ತಿ ಇದೆ.
ಇನ್ನೂ ಇಂದ್ರಜಿತ್ ನಾಯ್ಕ್ ನವರ ಹೆಸರಿನಲ್ಲಿ ಒಂದು ಪೋಲಿಸ್ ಪ್ರಕರಣ ಇದ್ದು, ಬೆಂಗಳೂರಿನಲ್ಲಿ 1ಕೋಟಿ ಬೆಲೆ ಬಾಳುವ 30+40 ಕೃಷಿಯೇತರ ಭೂಮಿ ಇದೇ. ಒಟ್ಟು 15 ಲಕ್ಷ ಸಾಲ ಮಾಡಿರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ…

ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
