ಹೊಳಲ್ಕೆರೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಜಯಸಿಂಹ ನಾಮಪತ್ರ ಸಲ್ಲಿಕೆ

ಹೊಳಲ್ಕೆರೆ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಜಯಸಿಂಹ ಮಂಗಳವಾರ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿ ವಿವೇಕಾನಂದರವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗು ಮುನ್ನ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕುಕ್ವಾಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಮುಖ್ಯ ವೃತ್ತದ ವರೆಗೆ ಮೆರವಣಿಗೆಯ ನಡೆಸಿದರು. ಮೆರವಣಿಗೆಯಲ್ಲಿ ಸಹಸ್ರಾರು ಜನರು ಸೇರಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿ, ಕ್ಷೇತ್ರದ ಜನರ ಒಮ್ಮತದ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 10 ವರ್ಷಗಳಿಂದ ತಾಲೂಕು ಆರೋಗ್ಯಾಧಿಕಾರಿ ಕೆಲಸ ಮಾಡಿದ್ದೇನೆ. ಜನರ ಒತ್ತಾಸೆ ಮೇರೆರೆ ಸರಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ. 11 ತಿಂಗಳ ಬಳಿಕ ರಾಜೀನಾಮೆ ಸ್ವೀಕೃತವಾಯಿತು. ಅಂದಿನಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದೆ. ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಲು ಭಾರೀ ಪ್ರಯತ್ನ ನಡೆಸಿದೆ. ಆದರೆ ರಾಜಕೀಯ ಪಕ್ಷಕ್ಕೆ ಸೇರ್ಪಡೆಯೂ ಆಗಲಿಲ್ಲ, ಟಿಕೆಟ್ ಕೂಡ ಸಿಗಲಿಲ್ಲ. ಅದಾದ ನಂತರ ಕ್ಷೇತ್ರದ ಜನರ ಮುಂದೆ ಬಂದೆ. ಅವರು ಸರಕಾರಿ ಸೇವೆಯಲ್ಲಿದ್ದ ನಿಮ್ಮನ್ನು ರಾಜೀನಾಮೆ ಕೊಡಿಸಿ ರಾಜಕೀಯಕ್ಕೆ ಕರೆತಂದಿದ್ದೇವೆ. ನೀವು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಇಟ್ಟಿರುವ ಹೆಜ್ಜೆ ಹಿಂದೆ ಇಡಬೇಡಿ, ಪಕ್ಷೇತರ ಅಭ್ಯರ್ಥಿಯಾಗುವಂತೆ ಅವರ ಆದೇಶದ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಪ್ರತಿದಿನ 25 ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇವೆ. ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸುವ ಉದ್ದೇಶದಿಂದ ನನಗೆ ಬೆಂಬಲವಾಗಿ ನಿಂತಿದ್ದಾರೆ. 10 ರಿಂದ 15 ವರ್ಷಗಳಿಂದ ಕ್ಷೇತ್ರದ ಜನರಿಗೆ ಅನ್ಯಾಯವಾಗಿದೆ. ಮೀಸಲು ಕ್ಷೇತ್ರದಲ್ಲಿ ಒಳ್ಳೆಯ ಹಾಗೂ ಸ್ಥಳೀಯ ವ್ಯಕ್ತಿ ಬರಬೇಕು ಎಂಬುದು ಅವರ ಆಶಯವಾಗಿತ್ತು. ಅವರ ಆಶಯದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ಡಾ. ಜಯಸಿಂಹ ಆಸ್ತಿ ವಿವರ:
ಚರಾಸ್ತಿ ಒಟ್ಟು ಮೌಲ್ಯ – ೩೮,೦೫,೫೪೮ ರೂ.
ಪತ್ನಿ ಹೆಸರಿನಲ್ಲಿರುವ ಚರಾಸ್ತಿ ಒಟ್ಟು ಮೌಲ್ಯ – ೨೮,೨೦,೯೦೮ ರೂ.
ಸ್ಥಿರಾಸ್ತಿ ಒಟ್ಟು ಮೌಲ್ಯ – ೪೦ ಲಕ್ಷ ರೂ.
ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ತಿ ಒಟ್ಟು ಮೌಲ್ಯ – ೧೪೯೩೦೪೦೦
ಬ್ಯಾಂಕ್ ಸಾಲ – ೩೦ ಲಕ್ಷ ರೂ.
ಇತರೆ ಸಾಲ – ೧೦ ಲಕ್ಷ ರೂ.
ಚಿತ್ರದುರ್ಗದಲ್ಲಿ ೭೨ ಲಕ್ಷ ರೂ. ಬೆಲೆ ಬಾಳುವ ನಿವೇಶನ
ಬೆಂಗಳೂರಿನಲ್ಲಿ ೪೦ ಲಕ್ಷ ರೂ. ಬೆಲೆ ಬಾಳುವ ಅಪಾರ್ಟ್ಮೆಂಟ್ ಇದೆ…

ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
