ನಿವೃತ್ತ ಯೋಧರಿಗೆ ಅದ್ದೂರಿ ಸ್ವಾಗತ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಗಡಿ ಗ್ರಾಮ ಆಲೂರು ಗ್ರಾಮದಲ್ಲಿ
ಗಡಿ ಭದ್ರತಾ ಪಡೆ ( ಬಿ ಎಸ್ ಎಫ್ ) ಎಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ ರಾಗಿ ವೀರಯೋಧ ರಾಘವೇಂದ್ರ ರೆಡ್ಡಿ ರವರಿಗೆ ಆಲೂರು ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಆಲೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಿಂದ ಗ್ರಾಮದವರೆಗೆ ವೀರಯೋಧ ರಾಘವೇಂದ್ರ ರೆಡ್ಡಿ ಸೇರಿ ಕುಟುಂಬದವರನ್ನು ಅಲಂಕೃತಗೊಂಡ ಟ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರಾಘವೇಂದ್ರ ರೆಡ್ಡಿ ಮಾತನಾಡಿ
ದೇಶದ ಬಗ್ಗೆ ಭಾರತ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ಈಗಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೇಶದ ಹಿರಿಮೆ ಗರಿಮೆಯನ್ನು ತಿಳಿಸಬೇಕು. ಎಂದು ಸ್ವ ವಿವರವಾಗಿ ತಿಳಿಸಿದರು.
ಆಲೂರು ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ರಾಘವೇಂದ್ರ ರೆಡ್ಡಿ ಅವರಿಗೆ ಗ್ರಾಮಸ್ಥರು ಸನ್ಮಾನಿಸಿದರು
ಇದೇ ಸಂದರ್ಭದಲ್ಲಿ ಮಧು ರೆಡ್ಡಿ. ಪವನ್ ರೆಡ್ಡಿ. ಪ್ರವೀಣ ಗೌಡ. ಕರಿಬಸವ ರೆಡ್ಡಿ.ಶ್ರೀನಿವಾಸ ರೆಡ್ಡಿ. ಪ್ರದೀಪ್ ಕುಮಾರ್.ರಾಕೇಶ್. ತಿಪ್ಪೇಶ್. ವಿನುತ್ ರೆಡ್ಡಿ.ಮೂರ್ತಿ ಮಂಜುನಾಥ್. ಹನುಮಂತಪ್ಪ. ಗ್ರಾಮದ ಹಿರಿಯರು ಹಿರಿಯರು ಮಹಿಳೆಯರು ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
