;

ಕಲಿಕೆಯ ಮೊದಲ ಬುನಾದಿ ಅಂಗನವಾಡಿ ಶಿಕ್ಷಣ!!!!

ಕಲಿಕೆಯ ಮೊದಲ ಬುನಾದಿ ಅಂಗನವಾಡಿ ಶಿಕ್ಷಣ!!!! ಕೂಡ್ಲಿಗಿ: ತಾಲೂಕಿನ ಗಡಿ ಗ್ರಾಮ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನೆಯ ಹಳ್ಳಿ ಹೊಸೂರು ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವದರ ಜೊತೆಗೆ ಅವರ ಮೊದಲ ಶಿಕ್ಷಣದ ಬದ್ರಬುನಾದಿ ಅಂಗನವಾಡಿ ಶಿಕ್ಷಣ ಕಲಿಕೆಯ ಬುನಾದಿ ಎಂದು ಪ್ರಗತಿಪರ ರೈತ ಎಚ್. ಸಿ ಶಿವಶಂಕರಮೂರ್ತಿ ತಿಳಿಸಿದರು, ಕೆ.ಕೆ. ಆರ್.ಡಿ.ಬಿ ಅನುದಾನದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಕೊನೆ ಹಳ್ಳಿಯಾದ ಹೊಸೂರಿನಲ್ಲಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡುವುದರ ಹಿನ್ನೆಲೆಯಿಂದ ಅಂಗನವಾಡಿ ಕೇಂದ್ರವು ಬಹಳ ಸಹಕಾರಿಯಾಗಿದ್ದು, ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರ ಅನುದಾನದಲ್ಲಿ ಕಟ್ಟಡ ನಿರ್ಮಾಣ ವಾಗಿರುವುದು ಉತ್ತಮ ಕೆಲಸವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದರು. ತಾಲೂಕಿನ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಅನುಪಮಾ ಅವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಇಲಾಖೆಯ ಮಾರ್ಗಸೂಚಿಯಂತೆ ಮಕ್ಕಳು ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರವನ್ನು ಸಕಾಲದಲ್ಲಿ ನೀಡಬೇಕು, ಮಕ್ಕಳ ಕಲಿಕೆಗೆ ಒತ್ತು ನೀಡುವುದಲ್ಲದೆ ಅವರ ಆರೋಗ್ಯದ ಬಗ್ಗೆಯೂ ನಿಗಾವಹಿಸಿ ಆರೋಗ್ಯವಂತ ಗ್ರಾಮವಾಗಿಸಲು ಮುಂದಾಗಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು,ಸಹಾಯಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುರುಬರ ಶರಣಪ್ಪ, ಎಚ್. ವಿ. ವಿರುಪಾಕ್ಷಪ್ಪ, ವೆಂಕಟೇಶ್, ಶಿವಣ್ಣ, ವೀರಣ್ಣ, ಎಚ್. ಕೆ. ರಾಜಣ್ಣ, ಹಾಗೂ ಅಂಗನವಾಡಿ ಕಾರ್ಯಕರ್ತೆ ಪಾರ್ವತಮ್ಮ , ಸಹಾಯಕಿ ರೂಪ  ಹಾಗೂ ಗ್ರಾಮದ ಸಾರ್ವಜನಿಕರು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;