ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲೆ ರೈತ ಮೋರ್ಚಾದ ಜಿಲ್ಲಾ ಸಮಾವೇಶವನ್ನು ರಾಯಭಾಗ ಪಟ್ಟಣದ ಮಹಾವೀರ ಭವನದಲ್ಲಿ ರವಿವಾರ ದಿನಾಂಕ :19-03- 2023 ರಂದು ಮಧ್ಯಾಹ್ನ 1:00ಗಂಟೆಗೆ ನಡೆಯಲಿದ್ದು
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೃಹತ್ ಸಮಾವೇಶಕ್ಕೆ ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆಯವರು, ರಾಜ್ಯಸಭಾ ಸದಸ್ಯರು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟರಾದ ಶ್ರೀ ಜಗ್ಗೇಶ್ ,ರಾಜ್ಯಸಭಾ ಸದಸ್ಯರು ಕರ್ನಾಟಕ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಈರಣ್ಣ ಕಡಾಡಿ , ಜಿಲ್ಲಾ ಅಧ್ಯಕ್ಷರಾದ ಡಾ|| ರಾಜೇಶ್ ನೇರ್ಲಿ, ಕರ್ನಾಟಕ ಸರಕಾರದ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕರು ಹಾಗೂ ನಿಗಮ ಮಂಡಳಿ ಅಧ್ಯಕ್ಷರಾದ ಶ್ರೀ ದುರ್ಯೋಧನ ಐಹೊಳೆ, ಚಿಕ್ಕೋಡಿಯ ಸಂಸತ ಸದಸ್ಯರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಸಂಸದರು, ಮಾಜಿವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರುಗಳು
ಎಲ್ಲ ಗಣ್ಯಾತಿಗಣ್ಯರು ಸಮಾರಂಭಕ್ಕೆ ಬರುತ್ತಿರುವುದರಿಂದ ರೈತಮೋರ್ಚಾ ಎಲ್ಲ ಮಂಡಲ ಅಧ್ಯಕ್ಷರು ತಮ್ಮ ತಮ್ಮ ಮಂಡಲಗಳಿಂದ ಕನಿಷ್ಠ 100 ಜನರನ್ನು ಈ ಸಮಾವೇಶದಲ್ಲಿ ಕರೆದುಕೊಂಡು ಕರೆದುಕೊಂಡು ಬಂದು* ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ
ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲ ಪದಾಧಿಕಾರಿಗಳು ತಪ್ಪದೇ ಕಡ್ಡಾಯವಾಗಿ ಸಮಾವೇಶದಲ್ಲಿ ಹಾಜರಿರಲು ಕೋರಲಾಗಿದೆ

ವರದಿ
ವಿನಾಯಕ ಮೈಶಾಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
