;

ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ(ಎಂಸಿಎಂಸಿ)ತರಬೇತಿ…!!!

ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ(ಎಂಸಿಎಂಸಿ)ತರಬೇತಿ

ಬೆಂಗಳೂರು ಗ್ರಾಮಾಂತರ :
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಚಿಸಲಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ(ಎಂಸಿಎಂಸಿ) ಸದಸ್ಯರ ತರಬೇತಿ ಇಂದು ಜರುಗಿತು.

ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಇಂದು ಜರುಗಿದ ತರಬೇತಿಯಲ್ಲಿ ರಾಜ್ಯಮಟ್ಟದ ತರಬೇತುದಾರ ಡಾ.ಅಮೀರ್ ಪಾಷಾ ಮಾತನಾಡಿ,ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ದೇಶವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಹೆಸರಾಗಿದೆ.ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಲು ಬಯಸುವ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರಕಟಣೆಗೆ ಮೂರು ದಿನಗಳ ಕಾಲ ಮುಂಚಿತವಾಗಿ, ಮಾನ್ಯತೆ ಹೊಂದಿರದ ರಾಜಕೀಯ ಪಕ್ಷಗಳು ಏಳು ದಿನಗಳ ಕಾಲ ಮುಂಚಿತವಾಗಿ ಜಾಹೀರಾತಿನ ದೃಢೀಕೃತ ಹಾಗೂ ಸಾಫ್ಟ್ ಪ್ರತಿಗಳೊಂದಿಗೆ ಜಿಲ್ಲಾ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಸಮಿತಿಯು ನಿಗದಿತ ಕಾಲಾವಧಿಯಲ್ಲಿ ಜಾಹೀರಾತನ್ನು ಪರಿಶೀಲಿಸಿ, ಪ್ರಮಾಣ ಪತ್ರ ನೀಡಬೇಕು.ಇ-ಪೇಪರ್‌ಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೂ ಕೂಡ ಈ ನಿಯಮ ಅನ್ವಯವಾಗುತ್ತದೆ.ಯಾವುದಾದರೂ ಅಭ್ಯರ್ಥಿಯ ಪರವಾಗಿ,ಬೆಂಬಲಿಸಿ ಪ್ರಕಟವಾಗುವ ಸುದ್ದಿಗಳನ್ನು ಗಮನಿಸಿ,ಪಾವತಿ ಸುದ್ದಿ(ಪೇಡ್ ನ್ಯೂಸ್) ಗುರುತಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು‌.ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳ ಮೂಲಕ ಅಂತಹ ಅಭ್ಯರ್ಥಿಗೆ ನೋಟಿಸ್ ಜಾರಿ ಮಾಡಬೇಕು.ಸಾಮಾಜಿಕ ಜಾಲತಾಣಗಳು ಹಾಗೂ ಟಿವಿ ವಾಹಿನಿಗಳನ್ನು ನಿರಂತರವಾಗಿ ವೀಕ್ಷಿಸಿ ವರದಿ ನೀಡಬೇಕು ಎಂದರು.

ತರಬೇತಿ ನೋಡಲ್ ಅಧಿಕಾರಿ ಉಪಕೃಷಿ ನಿರ್ದೇಶಕಿ ವಿನುತಾ,ಎಂಸಿಎಂಸಿ ನೋಡಲ್ ಅಧಿಕಾರಿ ,ವಾರ್ತಾ ಉಪನಿರ್ದೇಶಕ ಮಂಜುನಾಥ ಡೊಳ್ಳಿನ,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ,ಸಮಿತಿ ಸದಸ್ಯ ಪತ್ರಕರ್ತ ನಾಗರಾಜ ಅಶ್ವತ್ಥ,ಜಿಲ್ಲಾ ನಗರಾಭಿವೃದ್ಧಿ ಕೋಶದ ಗಂಗಾಧರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಜೆ ಮತ್ತಿತರರು ಇದ್ದರು…

ವರದಿ. ಕಲಾವತಿ, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;