ಭಾರಿ ಜನಸ್ತೋಮ ದಿಂದ ಕೂಡಿದ ವಿಜಯ ಸಂಕಲ್ಪ ಯಾತ್ರೆ
:ಹ.ಬೊ. ಹಳ್ಳಿ. ಈ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದವರು ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಶ್ರೀ ನೇಮಿರಾಜ್ ನಾಯಕ್ ಹೇಳಿಕೆ. ತಾಲೂಕು ಪಟ್ಟಣದ ಗಂ.ಭೀ.ಪ.ಪೂ. ಕಾಲೇಜ್ ಕ್ರೀಡಾಂಗಣದಲ್ಲಿ ನಡೆದ ಭಾ.ಜ.ಪಾರ್ಟಿಯ ವಿಜಯ ಸಂಕಲ್ಪ ಯಾತ್ರೆ ಭಾರಿ ಜನಸ್ತೋಮ ದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ , ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಜಗದೀಶ್ ಶೆಟ್ಟರ.ಮಾತನಾಡಿ, ಕಾಂಗ್ರೆಸ್ ಪ್ರಜಾ ಧ್ವನಿಯಾತ್ರೆ ಮುಕ್ತಾಯ ಕಾಂಗ್ರೆಸ್ ಐ ಸಿ ಯು ನಲ್ಲಿ ದೆ.ಈಗಾಗಲೇ ಕಾಂಗ್ರೆಸಿನ ನಾಲ್ಕು ಐದು ಜನರು ಮೊದಲೇ ಸೂಟು ಬೂಟು ರೆಡಿ ಮಾಡಿಕೊಂಡಿದ್ದಾರೆ. ಆದರೆ ಅವರ ಕನಸು ನನಸಾಗುವುದಿಲ್ಲ ಎಂದು ವ್ಯಂಗ್ಯ ವಾಡಿದರು. ಈ ಬಾರಿ ಬಿಜೆಪಿ ರಾಜ್ಯದಲ್ಲಿ 140 ಸೀಟ್ಗಳನ್ನು ಗೆದ್ದೇ ಗೆಲ್ಲುತ್ತೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಇದೆ ಹ.ಬೊ.ಹಳ್ಳಿ ಪಂಚಮಸಾಲಿ ಭವನಕ್ಕೆ ನಾಲ್ಕು ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ಆದ್ದರಿಂದ ಬಿಜೆಪಿಯನ್ನು ಬೆಂಬಲಿಸಿ ಎಂದರು. ಸಂಸದರಾದ, ವೈ ದೇವೇಂದ್ರಪ್ಪ ಮಾತಾಡಿ, ನಮ್ಮ ರಾಜ್ಯದಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ದೇಶ ಬಲಿಷ್ಠವಾಗಿದೆ ಡಬಲ್ ಇಂಜಿನ್ ಸರ್ಕಾರ ದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದ ಅಭಿವೃದ್ಧಿಗಳು ನಿರಂತರವಾಗಿ ಕಾರ್ಯರೂಪಕ್ಕೆ ಬಂದಿವೆ. ಎಂದು ತಿಳಿಸಿದರು. ನಂತರ ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ್ ಮಾತನಾಡಿ, ಯಡಿಯೂರಪ್ಪನವರು ಹ.ಬೊ. ಹಳ್ಳಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳಿಗೆ ಹಾಗೂ ಮರಿಯಮ್ಮನಹಳ್ಳಿ ಭಾ ಗಕ್ಕೆ 240 ದೇಗುಲಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದರು. ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಈ ಕ್ಷೇತ್ರ ಒಳ್ಳೆ ಪವಿತ್ರವಾಗಿರುವ ಕ್ಷೇತ್ರ, ಶ್ರೀ ಬಸವೇಶ್ವರ ಸ್ವಾಮಿಯ ನಡೆದಾಡುವಂತ ನೆಲ ಇದು ಇಲ್ಲಿ ಕುಳಿತಿರುವಂತ ಜನಸ್ತೋಮ, ಹಾಗೂ ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ನನಗೆ ತುಂಬಾ ಖುಷಿಯಾಗುತ್ತೆ ಈ ಕ್ಷೇತ್ರದಲ್ಲಿ ಕಮಲ ಅರಳುತ್ತೆ, ಹುಲಿ ಅಖಾಡಕ್ಕೆ ಇಳಿಯುತ್ತೆ ಬಂಡೆ ಹೊಡೆದು ಹೋಗುತ್ತೆ ಕಮಲ ಅರಳುತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತೆ, ಶಾಸಕ ಭೀಮಾ ನಾಯಕ್ ಕಾಶಿಯಾತ್ರೆಗೆ ಹೋಗುತ್ತಾರೆ. ಅನ್ನೋದು ಯಾವುದೇ ರೀತಿಯ ನೂರಕ್ಕೆ ನೂರರಷ್ಟು ಸಂಶಯವಿಲ್ಲ, ನಾನು ಈ ಭಾಗಕ್ಕೆ ಬಂದಾಗ ನಾಲ್ಕು ದಿಕ್ಕಿನ ಕಡೆಯಿಂದ ನಮ್ಮ ಪಕ್ಕದ ಆಕಾಂಕ್ಷಿಗಳ ಘೋಷಣೆಗಳು ಬಹಳ ಜೋರಾಗಿತ್ತು ಇಲ್ಲಿ10 ಜನ ಅಭ್ಯರ್ಥಿಗಳು ನಮ್ಮ ಪಕ್ಕದ ಆಕಾಂಕ್ಷಿಗಳಾಗಿದ್ದಾರೆ ಅಂದರೆ ನಮ್ಮ ಪಕ್ಷ ಬಲಿಷ್ಠವಾದ ಪಕ್ಷವಾದ ಪಕ್ಷ ಈ ಪಕ್ಷಕ್ಕೆ ಯಾರಾದರೂ ಶಾಸಕರಾಗಬಹುದು , ನೀವು ಕೂಡ ಶಾಸಕರಾಗಲು ಈ ಪ್ರಜಾಪ್ರಭುತ್ವದಲ್ಲಿ ಅರ್ಹತೆ ಇದೆ . ಹಾಗಾಗಿ ಯಾರು ಬೇಕಾದರೂ ಆಕಾಂಕ್ಷಿಗಳಾಗಬಹುದು ಆದರೆ 10 ಜನ ಆಕಾಂಕ್ಷಿಗಳಲ್ಲಿ ಒಬ್ಬರೇ ಮಾತ್ರ ಸೀಟ್ ಕೊಡಬಹುದು ಅದು ನಮ್ಮ ಹೈಕಮಾಂಡ್ಗೆ ಬಿಟ್ಟ ವಿಷಯ ಯಾರೇ ಒಂಬತ್ತುಕಾಂಕ್ಷೆಗಳು ಸೇರಿ ಒಗ್ಗಟ್ಟಾಗಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ . ನಮ್ಮ ಪಕ್ಷ ಅಪ್ಪನ ಹೆಸರಿನಲ್ಲಿ ಬೆಳದಿಲ್ಲ, ಅಜ್ಜನ ಮಾಡಿದ ಹೆಸರಿನಲ್ಲಿ ಹುಟ್ಟಿಲ್ಲ ಹಳ್ಳಿ ಹಳ್ಳಿಯಲ್ಲಿ ಬಿಜೆಪಿ ಶಾಖೆಯನ್ನು ಮಾಡಿದವರು. ಸನ್ಮಾನ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆದರು. ಈಗಾಗಲೇ ಕಾಂಗ್ರೆಸ್ ಪ್ರಜಾಧ್ವನಿ ಅರ್ಧಕ್ಕೆ ನಿಂತಿದೆ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ , ಇವರು ಗ್ಯಾರೆಂಟಿ ಕಾರ್ಡ್ ಕೊಡುವುದರಲ್ಲಿ ಮುಂದಾಗಿದ್ದಾರೆ ಆದರೆ ಇವರ ಪಕ್ಷ ಅಧಿಕಾರಕ್ಕೆ ಬರುವುದುಗ್ಯಾರಂಟಿನೇ ಇಲ್ಲ ನಮ್ಮ ವಿಜಯ ಸಂಕಲ್ಪ ಯಾತ್ರೆಯನ್ನು ತಡೆಯಕ್ಕಾಗುತ್ತಿಲ್ಲ. ಈ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ದಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮುಂದೆ ಈ ಭಾಗದ ಕ್ಷೇತ್ರದ ಕಾರ್ಯಕರ್ತರು ಎಲ್ಲರೂ ಸೇರಿ ಒಗ್ಗಟ್ಟಾಗಿ ಬಿಜೆಪಿಯನ್ನು ಗೆಲ್ಲಿಸಿರಿ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಬ್ಯಾಟಿ ನಾಗರಾಜ್ ಸ್ವಾಗತ ಭಾಷಣ ಮಾಡಿದರು. ತಾಲೂಕು ಮಂಡಲ ಅಧ್ಯಕ್ಷರಾದ, ಶ್ರೀ ವೀರೇಶ್ವರ ಸ್ವಾಮಿ ಪ್ರಾಸ್ತವಿಕ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಸಿದ್ದೇಶ್, ಚಂದ್ರಶೇಖರ್ ಪಾಟೀಲ್ ಹಲಗೇರಿ, ಎಂ ಲಕ್ಷ್ಮೀನಾರಾಯಣ ,ಪೂಜಪ್ಪ, ಡಿ.ಕೆ .ಅರುಣ, ನಂಜನ ಗೌಡ್ರು, ಮಲ್ಲಿಕಾರ್ಜುನ ನಾಯಕ, ಜಯಪ್ರಕಾಶ್, ಬಲ್ಲಾ ಹುಣಸಿ ರಾಮಣ್ಣ, ಕೃಷ್ಣ ನಾಯಕ್, ಉಮಾದೇವಿ ಕೊಟ್ರೇಶ್, ರಾಜೇಶ್, ಸಿದ್ದರಾಜು, ಹಾಗೂ ಬಿಜೆಪಿಯ ಹಿರಿಯ ಮುಖಂಡರು, ಪದಾಧಿಕಾರಿಗಳು, ಸಹಸ್ತ್ರಾರು ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
