ಬಿಜೆಪಿ ಸಂಕಲ್ಪ ಯಾತ್ರೆಯ ಪೂರ್ವ ಸಿದ್ಧತೆಯ ಪತ್ರಿಕಾ ಗೋಷ್ಟಿ .
ಹ.ಬೊ. ಹಳ್ಳಿ. ನಮ್ಮಲ್ಲಿ ಯಾವುದೇ ಸಣ್ಣಪುಟ್ಟ ಗೊಂದಲ ಇಲ್ಲ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ನಮ್ಮ ಒಗ್ಗಟ್ಟಿನಲ್ಲಿ ಬಲವಿದೆ ಈ ಭಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಜಯಬೇರಿ ಬಾರಿಸಲಿದೆ.ಎಂದು ತಾಲೂಕು ಮಂಡಲದ ಅಧ್ಯಕ್ಷ ವೀರೇಶ್ವರ ಸ್ವಾಮಿ .ಹೇಳಿದರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಪೂರ್ವ ಭಾವಿ ಸಭೆಯ ಅಂಗವಾಗಿ, ಪತ್ರಿಕಾ ಗೋಷ್ಟಿ ಕರೆಯಲಾಗಿತ್ತು . ನಂತರ ಮಾತನಾಡಿದ, ವೀರೇಶ್ವರ ಸ್ವಾಮಿ , ಇದೆ ತಿಂಗಳು 15 ನೇ ರಂದು ನೆದೇಳಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದ್ದು. ಈಗಾಗಲೇ ವಿಜಯ ರಥವು ನಮ್ಮ ಕ್ಷೇತ್ರಕ್ಕೆ ಬರಲಿದೆ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು, ಹಾಗೂ ಪದಾಧಿಕಾರಿಗಳು ಸೇರಿ ದಶಮಾಪುರ ಗ್ರಾಮದಲ್ಲಿ ಸ್ವಾಗತ ಮಾಡಲಾಗುತ್ತೆ. ಇದರ ಜೊತೆಗೆ ಭಾರಿ ಬಹಿರಂಗ ಸಭೆಯನ್ನು ಮಾಡಲಾಗಿದೆ.

ಈ ಕಾರ್ಯಕ್ರಮವನ್ನು ಹ.ಬೊ.ಹಳ್ಳಿ ತಾಲೂಕು ಮಂಡಲ ವತಿಯಿಂದ, ಎಲ್ಲಾಕಾರ್ಯ ಕರ್ತರು, ಹಿರಿಯ ರೂವರಿಗಳಿಂದ, ನಮ್ಮಎಲ್ಲಾ ಮುಖಂಡರುಗಳ ಸಹಾಯದೊಂದಿಗೆ,ಬಹಳ ಯಶಸ್ವಿಯಾಗಿ, ಮಾಡ ಬೇಕಾಗಿದೆ.ಈಗಾಗಲೇ 2-3,ಭಾರಿ ಸಭೆಯಲ್ಲಿ ಇದರಬಗ್ಗೆ ಚರ್ಚಿಸಲಾಗಿದೆ, ಎಲ್ಲಾ ಪದಾಧಿಕಾರಿಗಳನ್ನು ವಿಂಗಡನೆ ಮಾಡಿ, ಆ ಭಾಗಡಿಂದ ಬೂತ್ ಮಟ್ಟದ ಕಾರ್ಯ ಕರ್ತರನ್ನು ಕರೆಯಿಸಿ, ಆವರಿಗೆ ಯಾವುದೇ ತರದ ಅವ್ಯವಸ್ಥೆ ಆಗದೆ , ಸುಸಜ್ಜಿತವಾದ, ಆಸನ,ಕುಡಿಯುವ ನೀರಿನ ವ್ಯವಸ್ಥೆ, ಊಟ ದ ವ್ಯವಸ್ಥೆ, ಯಾವುದೇ ರೀತಿಯ ಗೊಂದಲ ಆಗದಂತೆ, ಮಾಡಲಾಗಿದೆ, ಈ ಕಾರ್ಯಕ್ರಮದಲ್ಲಿ ಸುಮಾರು 20ರಿಂದ25ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲು ನಿರೀಕ್ಷೆ ಇದೆ. ಇವತ್ತು ಭಾರತ ದೇಶದ ಪ್ರಧಾನ ಮಂತ್ರಿ ಗಳಾದ ಸನ್ಮಾನ್ಯ ನರೇಂದ್ರ ಮೋದಿ ಜಿ ಯ ವರು ಹಾಗೂ ರಾಜ್ಯದ ಮುಖ್ಯ ಮಂತ್ರಿ ಗಳಾದ ಶ್ರೀ ಬಸವರಾಜ್ ಬೊಮ್ಮಾಯಿ,ನೇತೃತ್ವದ ಡಬ್ಬಲ್ ಇಂಜಿನ್ ಸರಕಾರ ಇದೆ. ಈಗಾಗಲೇ ರಾಜ್ಯದಲ್ಲಿ ಪ್ರಧಾನ ಮಂತ್ರಿಗಳು ಅನೇಕ ಭಾರಿ ಭೇಟಿ ನೀಡಿದ್ದಾರೆ. ಮೊನ್ನೆ ನಡೆದ ಮಂಡ್ಯ ಜಿಲ್ಲೆಯ ಕಾರ್ಯಕ್ರಮದಲ್ಲಿ ಬೇರೆಪಕ್ಷದವರು ಅನೇಕ ನಾಯಕರುಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಯಾದರು.ನಮ್ಮಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ .ನಮ್ಮರಾಜ್ಯದಲ್ಲಿ ಈ ಭಾರಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರ ಗಳಲ್ಲಿ ಜಯ ಭೇರಿ ಬಾರಿಸಲಿದೆ. ಈ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ನಮ್ಮಜಿಲ್ಲಾ ಉಸ್ತುವಾರಿ ಸಚಿವರಾದಂತ ,ಶ್ರೀಮತಿ ಶಶಿಕಲಾ ಜೊಲ್ಲೆ ಅಣ್ಣಾಸಹೆಬ್, ಸಚಿವರದಂತ ಶ್ರೀರಾಮುಲು, ಶ್ರೀ ಆನಂದ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಹಾಗೂ ಇನ್ನು ಅನೇಕ ಬಿಜೆಪಿ ಯ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳ ಜನ ಇದ್ದಾರೆ ಆದರೆ ಇದು ಪ್ರಜಾ ಪ್ರಭುತ್ವ ಯಾರಾದರೂ ನಿಲ್ಲಬಹುದು ಮತದಾರರ ಗೊಂದಲಕ್ಕೆ ತೆರೆಎಳೆದರು. ನಮ್ಮಲ್ಲಿ ಸಣ್ಣಪುಟ್ಟ ರಹಿತ ಗೊಂದಲವಿಲ್ಲ ಟಿಕೆಟ್ ಯಾರಿಗೆ ಸಿಗಲಿ ನಮ್ಮಪಕ್ಷದ ಹೈ ಕಮಾಂಡ್ ಗೆ ಬಿಟ್ಟಿದ್ದು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ನಮ್ಮ ಒಗ್ಗಟ್ಟಿನಲ್ಲಿ ಬಲವಿದೆ .

ಈ ಭಾರಿ2023 ರ ಹ.ಬೊ.ಹಳ್ಳಿ ವಿಧಾನ ಸಭಾ ಕ್ಷೇತ್ರದ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಬಹು ಮತದಿಂದ ಜಯಭೇರಿ ಗಳಿಸಲಿದ್ದಾರೆ. ಎಂದು ತಿಳಿ ಸಿದರು. ಈ ವೇಳೆಯಲ್ಲಿ ಬಿಜೆಪಿ ಮಾಜಿ ಶಾಸಕರಾದ ಕೆ.ನೆಮಿರಾಜ್ ನಾಯ್ಕ್, ತಾಲೂಕ ಮಂಡಲ ಆದ್ಯಕ್ಷರಾದ, ವೀರೇಶ್ವರ ಸ್ವಾಮಿ, ತಾಲೂಕ ಮಂಡಲ ಚುನಾವಣೆ ಉಸ್ತುವಾರಿ ನಂಜನ ಗೌಡ, ಬಿಜೆಪಿ ಯ ಮುಖಂಡದರಾದ, ಕೃಷ್ಣ ನಾಯ್ಕ್,ಬಲ್ಲಾಹುಣಿಸಿ ರಾಮಣ್ಣ, ಭದ್ರವಾಡಿ ಚಂದ್ರ ಶೇಖರ್, ಮಲ್ಲಿಕಾರ್ಜುನ ನಾಯ್ಕ್, ಎಂ, ಲಕ್ಷ್ಮೀ ನಾರಾಯಣ, ಜಯಪ್ರಕಾಶ್, ಪುರಸಭೆಯ ಸದ್ಯಸ್ಯ ರಾದ, ಜೋಗಿ ಹನುಮಂತ, ನಾಗರಾಜ್ ಜನ್ನು, ಅಂಬಣ್ಣ, ಹಾಗೂ ಚಿರಬಿ ಕೊಟ್ರೇಶ, ಯುವಘಟಕದ ಅಧ್ಯಕ್ಷ ರಾರಾಳ್ ಶ್ರೀ ಕಾಂತ್, ಡಾ. ರಮೇಶ್, ಕಿನ್ನಾಳ ಸುಭಾಷ್, ರಾಜು ಪಟೇಲ್, ಪ್ರಧಾನ ಕಾರ್ಯದರ್ಶಿ, ಭ್ಯಾ ಟೀ ನಾಗರಾಜ್, ನಾಗಯ್ಯ,ಸಿದ್ದರಾಮ ,ಸರ್ದಾರ್ ಯಮನೂರೆಪ್ಪ,ಹಾಗೂ ಬಿಜೆಪಿ ಕಾರ್ಯ ಕರ್ತರು , ಪದಾಧಿಕಾರಿಗಳು ಉಪಸ್ಥಿತಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
