ಇಂದು ರಾಯಬಾಗ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಸಾವಿರಾರು ಕಾರ್ಯಕರ್ತರೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸೋಲಿಲ್ಲದ ಸರದಾರ ಬಡವರ ಬಂಧು ದುರ್ಯೋಧನ ಐಹೊಳೆ ಅವರ ಕ್ಷೇತ್ರದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನ ಎಲ್ಲಿ ನೋಡಿದರಲ್ಲಿ ಸಾವಿರಾರು ಸಂಖ್ಯೆಯ ಬಿಜೆಪಿಯ ಕಾರ್ಯಕರ್ತರು ಹಿರಿಯೂರು ಮಹಿಳೆಯರು ಯುವಕರು ಹಾಗೂ ರಾಯಬಾಗ ತಾಲೂಕಿನ ಬಿಜೆಪಿ ಬೆಂಬಲಿಗರು ಈ ಸಂದರ್ಭದಲ್ಲಿ ಶಾಸಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದರು.

ಶತಾಯಗತಾಯ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪಣತೊಟ್ಟು ನಿಂತ ಮಾನ್ಯ ಶ್ರೀ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ, ರಾಯಬಾಗ ನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ, ಶ್ರೀ ಲಕ್ಷ್ಮಣ ಸವದಿ, ಶ್ರೀ ಸಿ.ಟಿ. ರವಿ, ಶ್ರೀ ಪಿ. ರಾಜೀವ್, ಶ್ರೀ ಮಹಾಂತೇಶ ಕವಟಗಿಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು…

ವರದಿ. ವಿನಾಯಕ ಮೈಶಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
