;

ಮಹಿಳೆಯರ ಏಳಿಗೆಗಾಗಿ ಅಬುಧ್ದ್ಯಯ ಮಹಿಳಾ ವಿದ್ಯಾಸಂಸ್ಥೆ( ರೀ ) ಯನ್ನು ಉದ್ಘಾಟಿಸಲಾಯಿತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಕಲ್ಲು ಗ್ರಾಮದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ. ಮಹಿಳೆಯರ ಏಳಿಗೆಗಾಗಿ ಅಬುಧ್ದ್ಯಯ ಮಹಿಳಾ ವಿದ್ಯಾಸಂಸ್ಥೆ( ರೀ ) ಯನ್ನು ಉದ್ಘಾಟಿಸಲಾಯಿತು ಸಂಸ್ಥೆಯ ಉದ್ಘಾಟಕರಾಗಿ ಶ್ರೀಮತಿ ಗೀತಾಂಜಲಿ. ಸಂಗೀತ ಶಿಕ್ಷಕರು ಮುರಾರ್ಜಿ ವಸತಿ ಶಾಲೆ ಇಟಗಿ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ವಿಜಯರಾಜ್ ಜಿಬಿ ಕನ್ನಡ ಉಪನ್ಯಾಸಕರು. ಹಾಗೂ ವಿದ್ಯಾನಿಕೇತನ ಕಾಲೇಜು ಹ ಬೊ ಹಳ್ಳಿ ಇವರು ಆಗಮಿಸಿದ್ದರು ಈ ಸಂಸ್ಥೆಯ ಮಹಿಳೆಯರ ಅಭ್ಯುದಯ ಕಾಗಿ ಸ್ಥಾಪನೆಗೊಂಡಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಹೊಂದಿದೆ ಗ್ರಾಮೀಣ ಭಾಗದ ಮಹಿಳೆಯರು ಇನ್ನೂ ಕೆಲವು ವಿಷಯಗಳಲ್ಲಿ ಹಿಂದುಳಿದಿದ್ದು ಅವರನ್ನು ಸಮುದಾಯದಲ್ಲಿ ಸಕರಾತ್ಮಕ ವಾಗಿ ಕರೆತರುವ ಆಶಯ ಹೊಂದಿದೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀಮತಿ ಕುಸುಮ ಆಶಾ ವರ್ಕರ್ ರವರು ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು ಸಂಸ್ಥೆಯ ಅಧ್ಯಕ್ಷರು/ ಕಾರ್ಯದರ್ಶಿ ಶ್ರೀಮತಿ ಸುಧಾ ಬಿ ದೇವರಾಜ್ ಉಪಾಧ್ಯಕ್ಷರಾದ ಶ್ರೀಮತಿ ಶಿಲ್ಪಾ.ಬಿ ಇವರು ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ತಿಳಿಸಿ ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು ತಮ್ಮ ಸಂಸ್ಥೆಯ ಲೋಗೋ ಚಿತ್ರವಾದ ಫೀನಿಕ್ಸ್ ಪಕ್ಷಿಯ ವಿಶೇಷತೆಯನ್ನೇ ತಮ್ಮ ಸಂಸ್ಥೆಯ ಪ್ರೇರಣಾ ಶಕ್ತಿ ಎಂದು ತಿಳಿಸಿದರು ನಿರೂಪಕರಾಗಿ ಕುಮಾರಿ ಸೌಂದರ್ಯ ಬಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಈ ಸಂದರ್ಭದಲ್ಲಿ ಪ್ರಗತಿ ಶಾಲೆ ಬನ್ನಿ ಕಲ್ಲು ಮುಖ್ಯ ಗುರುಗಳಾದ ಶ್ರೀ ಕಾಸಿಂ ಪೀರ್ ಕೆ ಮತ್ತು ಸಾಯಿ ಶಿಕ್ಷಕರಾದ ಶ್ರೀಮತಿ ಮಕ್ಬುಲ್ಲ ಸಾಹೇಬ್ ಉಪಸ್ಥಿತರಿದ್ದರು ಸಂಸ್ಥೆಗೆ ಶುಭ ಕೋರಿದರು ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಿದರು ಹಾಗೆ ಗ್ರಾಮದ ಎಲ್ಲಾ ಮಹಿಳೆಯರು ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿದ್ದರು ಮತ್ತು ಈ ಕಾರ್ಯಕ್ರಮವನ್ನು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಅಮ್ಮಂದಿರಿಗೆ ಅರ್ಪಿಸುತ್ತೇವೆ ಎಂದು ಸಂಸ್ಥೆಯ ಪರವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು ಉದ್ಘಾಟಕರಾದ ಗೀತಾಂಜಲಿ ಅವರು ದೀಪದ ಸಂದೇಶದ ಬಗ್ಗೆ ತಿಳಿಸಿದರು ಅತಿಥಿಗಳಾಗಿ ಆಗಮಿಸಿದ್ದ ವಿನಯರಾಜ ರವರು ಹೆಣ್ಣಿನ ಆದರ್ಶ ಗುಣಗಳ ಬಗ್ಗೆಯ ತ್ಯಾಗದ ಬಗ್ಗೆ ಕವನದ ಮೂಲಕ ತಿಳಿಸಿದ್ದರು. ಅಭ್ಯುದಯ ಮಹಿಳಾ ವಿದ್ಯಾ ಸಂಸ್ಥೆಯ(ರೀ) ಪದಾಧಿಕಾರಿಗಳು. ಮತ್ತು ಶಿಕ್ಷಕರು. ಮಹಿಳೆಯರು ಮಕ್ಕಳು ಸಾರ್ವಜನಿಕರು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;