ಕೂಡ್ಲಿಗಿ: ತಾಲೂಕು ಆಡಳಿತದಿಂದ ರೇಣುಕಾಚಾರ್ಯ ಜಯಂತ್ಯೋತ್ಸವ
ಕೂಡ್ಲಿಗಿ: ಪ್ರಪಂಚದ ಎಲ್ಲಾ ಜೀವಿಗಳಿಗೂ ಲೇಸನ್ನು ಬಯಸಿರುವ ಧರ್ಮ ವೀರಶೈವ ಧರ್ಮವಾಗಿದೆ ಎಂದು ಪಪಂ ಸದಸ್ಯ ಸಚಿನ್ಕುಮಾರ್ ತಿಳಿಸಿದರು. ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಭಾನುವಾರ ತಾಲೂಕು ಆಡಳಿತ ಏರ್ಪಡಿಸಿದ ಶ್ರೀ ರೇಣುಕಾಚಾರ್ಯರ ಜಯಂತಿಯ ಯುಗಮಾನೋತ್ಸವದ ಶುಭದಿನದಂದು ಮಾತನಾಡಿದರು. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಘೋಷಾವಾಕ್ಯವನ್ನು ನೀಡಿ ದೇಶದ ಉದ್ದಗಲಕ್ಕೂ ಧರ್ಮ ಪ್ರಚುರ ಪಡಿಸಿದವರು ಶ್ರೀಮದ್ ರೇಣುಕಾಚಾರ್ಯಯಾಗಿದ್ದಾರೆ. ಕಲಿಯುಗದಲ್ಲಿ ವೀರಶೈವ ಧರ್ಮವನ್ನು ಬೋಧಿಸಲು ಮತ್ತು ಬೋಧಿಸಲು ಬಂದ ಐವರು ಆಚಾರ್ಯರಲ್ಲಿ ಒಬ್ಬರಾದ ರೇಣುಕಾಚಾರ್ಯರು ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅಲೆರ್ ನಗರದ ಕೊಲ್ಲಿಪಾಕಿ ಸೋಮೇಶ್ವರ ಲಿಂಗದಿಂದ ಜನಿಸಿಬಂದವರಾಗಿದ್ದಾರೆ ಎಂದರು. ಅಗಸ್ತ್ಯ ಮುನಿಗಳಿಗೆ ಗುರುವಾಗಿ, ವಿಭೀಷಣನ ಇಚ್ಚೆಯನುಸಾರ ೩೦ಮಿಲಿಯನ್ ಲಿಂಗಗಳನ್ನು ಪ್ರತಿಷ್ಠಾಪಿಸಿದವರೆಂದು ಪೌರಣಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು. ಅಂತಿಮವಾಗಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ರಂಭಾಪುರಿ ಮಠವನ್ನು ಸ್ಥಾಪಿಸಿ. ವೀರಶೈವರ ರೇಣುಕಾ ಗೋತ್ರಕ್ಕೆ ಇವರ ಹೆಸರನ್ನು ಸ್ಮರಿಸಲಾಗಿದೆ ಎಂದರು. ನಿವೃತ್ತ ನೌಕರರ ಸಂಘದ ಆರಾಧ್ಯ ಮಠದ ವೀರಯ್ಯನವರು ಮಾತನಾಡಿ ದಶ ಧರ್ಮಗಳನ್ನು ಬೋಧಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು. ಸರ್ವಧರ್ಮಿಯರಿಗೂ ಸಮಾನತೆಯನ್ನು ಕಲ್ಪಿಸಿದ ಕಲ್ಪವೃಕ್ಷವಾದ ವೀರಶೈವ ಧರ್ಮವು ಇಂದು ಅನೇಕ ಉಪಪಂಗಡಗಳು ಇವೆ. ವೀರಶೈವ ಧರ್ಮವನ್ನು ೧೨ನೇ ಶತಮಾನದ ಬಸವೇಶ್ವರರು ಜಾತಿವೇದ ಮುನಿಗಳಿಂದ ಧೀಕ್ಷೆ ಪಡೆದು ವೀರಶೈವ ಧರ್ಮ ಪ್ರವರ್ತಕರಾಗಿದ್ದಾರೆ. ಈ ಧರ್ಮದಲ್ಲಿ ಸ್ತ್ರೀ ಸಮಾನತೆ, ಕಾಯಕದಿಂದ ಕೈವಲ್ಯವನ್ನು ಹೊಂದುವದು ಬಸವೇಶ್ವರರಿಗೆ ಮುಖ್ಯ ಆಕರ್ಷಣೆಯಾಗಿದೆ ಎಂದರು. ತಾಲೂಕು ವೀರಶೈವ ಯುವ ಸಮಾಜದ ಅಧ್ಯಕ್ಷ ಕೂಡ್ಲಿಗಿ ಹಿರೇಮಠದ ಗಂಗಾಧರಯ್ಯ, ಎ.ಎಂ. ವಾಗೀಶ್ಮೂರ್ತಿ, ಮೊರಬ ಮಠದ ವೀರಯ್ಯ, ಮಾತನಾಡಿದರು. ಕೆ.ಹೆಚ್.ಎಂ ವಿವೇಕ್, ವೀರೇಶ್, ಮಂಜುನಾಥ, ಎಸ್.ಎಂ.ಮಂಜುನಾಥ,ಎಸ್.ಎಂ. ಕೊಟ್ರೇಶ್, ಎ.ಎಂ.ಚೆನ್ನಬಸಯ್ಯ, ಉಪತಹಶೀಲ್ದಾರ್ ಕುಮಾರಸ್ವಾಮಿ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿದರು. ಕಂದಾಯ ಇಲಾಖೆಯ ನವೀನ್ ಕುಮಾರ್, ಕುಮಾರ ಸ್ವಾಮಿ ಇದ್ದರು. ತಾಲೂಕಿನ ವಿವಿಧ ಕಡೆಯಿಂದ ಆಗಮಿಸಿದ ಜಂಗಮ ಸಮಾಜದ ಅನೇಕ ಮುಖಂಡರು ಪಾಲ್ಗೊಂಡಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
