;

ಕೊಪ್ಪಳ ರಜತ ಮಹೋತ್ಸವ: ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಚಾರಕ್ಕೆ ಚಾಲನೆ…!!!

ಕೊಪ್ಪಳ ರಜತ ಮಹೋತ್ಸವ: ಕೇಂದ್ರ
ಬಸ್ ನಿಲ್ದಾಣದಲ್ಲಿ ಪ್ರಚಾರಕ್ಕೆ ಚಾಲನೆ

ಕೊಪ್ಪಳ : ಮಾರ್ಚ 10 ಮತ್ತು ಮಾರ್ಚ 11ರಂದು ನಡೆಯಲಿರುವ ಕೊಪ್ಪಳ ಜಿಲ್ಲಾ ರಜತ ಮಹೋತ್ಸವದ ಪ್ರಚಾರಕ್ಕೆ ಮಾ.4ರಂದು ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ರಿಬ್ಬನ್ ಕತ್ತರಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕೊಪ್ಪಳ ರಜತ ಮಹೋತ್ಸವದಲ್ಲಿ ಸಾರ್ವಜನಿಕರು ತಮ್ಮೂರ ಹಬ್ಬ ಎಂದು ಭಾವಿಸಿ ಪಾಲ್ಗೊಳ್ಳಬೇಕು. ನಾನಾ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿರುವ ರಜತ ಮಹೋತ್ಸವದ ಯಶಸ್ಸಿಗೆ ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ಧ ಹೊಸಮನಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದ ಡಿಪೋ ಮ್ಯಾನೇಜರ್ ಬಸವರಾಜ ಬಟ್ಟೂರ, ಟಿಸಿ ಸಂಗಪ್ಪ ಬೆಟಗೇರಿ, ವಾರ್ತಾ ಇಲಾಖೆಯ ಸಿಬ್ಬಂದಿ ಪಾಂಡು, ತಿಪ್ಪಯ್ಯನಾಯ್ಡು, ಹೊರ ಗುತ್ತಿಗೆ ಸಿಬ್ಬಂದಿ ಆರೀಫ್, ಷಣ್ಮುಖ, ಅಪ್ರೆಂಟಿಶೀಪ್ ತರಬೇತುದಾರರಾದ ಲಕ್ಷ್ಮಣ ಹಾಗೂ ಮತ್ತಿತರರು ಇದ್ದರು..

ವರದಿ. ಸಂಗೀತ ಪಾಟೀಲ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;