ಹೂಡೇಂ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾಹಿತಿ ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೂಡೇಂ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಕಂಪಳರಂಗ ಪ್ರೌಢಶಾಲಾ ಮಕ್ಕಳಿಂದ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಪ್ರಹ್ಲಾದ್ ಶಿಕ್ಷಕರು ಸ್ವಾಗತ ಮಾಡಿದರು.

ಪ್ರೌಢಶಾಲೆಯ ದಾದಾ ಕಲಂದರ್ . ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಹೇಳುತ್ತಾ ಈಗ ಸಮಾಜದಲ್ಲಿ ಗಂಡು ಮಕ್ಕಳಿಗೆ ಸಮಾನವಾಗಿ ಹೆಣ್ಣು ಎಲ್ಲ ರಂಗದಲ್ಲೂ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಮತ್ತು ನಿಮಗಾಗಿ ಗ್ರಂಥಪಾಲಕರು ಇಷ್ಟೆಲ್ಲ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ ಅದರ ಸದುಪಯೋಗಪಡೆದುಕೊಳ್ಳಿ ಎಂದು ತಿಳಿಸಿದರು. ನಂತರ ದೈಹಿಕ ಶಿಕ್ಷಕರಾದ ಸುಪ್ರೀತ್ ಕುಮಾರ್ ಇವರು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಕಿರು ಪರಿಚಯ ಮಾಡಿದರು. ಶಿಕ್ಷಕರಾದ ಪ್ರಹ್ಲಾದ್ ಸರ್ ಮಾತನಾಡಿ ಅತಿ ಹೆಚ್ಚು ಗ್ರಂಥಾಲಯದ ಅತ್ಯುತ್ತಮ ಸೇವ ಪಡೆದುಕೊಂಡವರು ಎಂದರೆ ಡಾ. ಬಿ ಆರ್ ಅಂಬೇಡ್ಕರ್ ಅವರು ಎಂದು ತಿಳಿಸಿದರು. ಶಿಕ್ಷಣ ಪ್ರೇಮಿ ಗ್ರಂಥಾಲಯ ಓದುಗರಾದ ಮಲ್ಲರೆಡ್ಡಿ ಅವರು ಮಾತನಾಡಿ ಏನಾದರೂ ಆಗು ಮೊದಲು ಮಾನವನಾಗು ಆಮೇಲೆ ಗುರುಗಳಾಗಿ ಕೆಲಸ ನಿರ್ವಹಿಸಿದರೆ ಉತ್ತಮ ಸಮಾಜ ಕಟ್ಟಬಹುದು ಗುರುವಿನ ಸ್ಥಾನ ದೊಡ್ಡದು ಎಂದರು.

ಗ್ರಂಥಪಾಲಕರು ಮಾತನಾಡಿ ಮಕ್ಕಳು ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡು ಜ್ಞಾನಾರ್ಜನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ದಿನಕ್ಕೆ ಅರ್ಧ ಗಂಟೆ ಸಮಯವನ್ನು ಗ್ರಂಥಾಲಯಕ್ಕೆ ಮೀಸಲಿಡಲು ತಿಳಿಸಿದರು. ವಿದ್ಯಾರ್ಥಿ ಜೀವನ ಬಂಗಾರದಂತ ಜೀವನ ಎಂದು ತಿಳಿಸಿದರು. ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದರೆ ನೂರು ವರ್ಷ ಚೆನ್ನಾಗಿ ಇರಬಹುದು. ಜೀವನದಲ್ಲಿ ಓದಿದ ಶಾಲೆ ಕಲಿಸಿದ ಗುರು ಮತ್ತು ತಂದೆ ತಾಯಿಯವರನ್ನು ಮರೆಯಬಾರದು ಎಂದು ತಿಳಿಸಿದರು. ಹಾಗೂ ಈ ಸಂದರ್ಭದಲ್ಲಿ ಎಲ್ಲಾ ಮಕ್ಕಳು ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಪ್ರಬಂಧವನ್ನು ಅತ್ಯುತ್ತಮವಾಗಿ ಬರೆದಿದ್ದಾರೆ ಎಂದು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಓದುವರಾದ ಪೂಜಾರಿ ಪಾಲಯ್ಯ ಅವರು ಮತ್ತು ಗ್ರಂಥಾಲಯ ಓದುಗರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಸುಪ್ರೀತ್ ಕುಮಾರ್ ಸರ್ ನೆರವೇರಿಸಿದರು. ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
