;

ದಿ, ಮಾಜಿ ಶಾಸಕರಾದ ಎನ್ ಟಿ, ಬೊಮ್ಮಣ್ಣ ಅವರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ…!!!

ದಿ,ಎನ್ ಟಿ ಬಿ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ವಿದ್ಯಾನಿಕೇತನ ಶಾಲೆಯಲ್ಲಿ. ಫೆಬ್ರವರಿ26ರಂದು, ಡಾ, ಎನ್.ಟಿ.ಶ್ರೀನಿವಾಸ ಅಭಿಮಾನ ಬಳಗದಿಂದ. ಮಾಜಿ ಶಾಸಕ ದಿವಂಗತ ಎನ್.ಟಿ.ಬೊಮ್ಮಣ್ಣ ನವರ ಸ್ಮರಣಾರ್ಥವಾಗಿ,ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಡಾಕ್ಟರ್ ಎನ್,ಟಿ,ಶ್ರೀನಿವಾಸ್ ರವರ ಇಂಗ್ಲೆಂಡ್,ಅಮೆರಿಕದ ಖ್ಯಾತ ವೈದ್ಯರ ಸಲಹೆ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಕಣ್ಣಿನ ವಿಶೇಷ ತಪಾಸಣೆ, ಹಾಗೂ ಚಿಕಿತ್ಸೆ ಮತ್ತು ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ. ವಿಶೇಷವಾಗಿ ಮಹಿಳೆಯರ ಖಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ ಮತ್ತು ಔಷಧಿ ವಿತರಣೆ, ಮಕ್ಕಳ ಖಾಯಿಲೆಗಳು, ಹೃದ್ರೋಗ,ಸಕ್ಕರೆ ಖಾಯಿಲೆ,ರಕ್ತದೊತ್ತಡ,ಕ್ಷಯ,ಜ್ವರ,ಅಲರ್ಜಿ, ಪಿತ್ತಕೋಶ ತೊಂದರೆ,ಹರ್ನಿಯಾ,ಮೂತ್ರಪಿಂಡದಲ್ಲಿ ಕಲ್ಲು,ಪೈಲ್ಸ್,ಮಲಬದ್ದತೆ,ಹೊಟ್ಟೆನೋವು, ಅಲ್ಸರ್, ಗ್ಯಾಸ್ಟ್ರಿಕ್,ಮೂಳೆ ಸವೆತ,ಕೀಲುನೋವು, ಬೆನ್ನುನೋವು,ಬೆನ್ನು ಹುರಿ ತೊಂದರೆ ಸೇರಿದಂತೆ ಇತರೆ ಖಾಯಿಲೆಗಳಿಗೆ.ಉಚಿತವಾಗಿ ಬೆಳಿಗ್ಗೆ 10:00 ಗಂಟೆಯಿಂದ ತಪಾಸಣೆ ಮಾಡಲಾಗುವುದು, ಹಾಗೂ ಉಚಿತ ಚಿಕಿತ್ಸೆ ಮತ್ತು ಉಚಿತ ವಾಗಿ ಔಷದಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರಣ ಖಾನಾಹೊಸಹಳ್ಳಿ ಗ್ರಾಮ ಸೇರಿದಂತೆ, ತಾಲೂಕಿನ ಸಮಸ್ತ ನಾಗರೀಕರು ಗ್ರಾಮೀಣ ಜನತೆ. ಮಕ್ಕಳು, ಮಹಿಳೆಯರು, ವೃದ್ಧರು,ಯುವಕರು ಒಳಗೊಂಡಂತೆ. ರೈತರು ಹಾಗೂ ಕಾರ್ಮಿಕರು, ಸರ್ವ ಸಾರ್ವಜನಿಕರು. ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ. ಈ ಮೂಲಕ ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗ, ಪ್ರಕಟಣೆಯಲ್ಲಿ ಕೋರಿದೆ…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;