;

ಕಸಪುರ ರಸ್ತೆಯ ಕಳಪೆ ಕಾಮಗಾರಿಯನ್ನು ಪರಿಶೀಲನೆಯನ್ನು ಮಾಡಿದ ಅಧಿಕಾರಿಗಳು…!!!

ಕಸಪುರ ಗ್ರಾಮದ ಡಾಂಬರ್ ರಸ್ತೆ ಪರಿಶೀಲಿಸಿದ ಅಧಿಕಾರಿಗಳು.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಸಪುರ ಗ್ರಾಮ ದಿಂದ ಹುರುಡಿಹಳ್ಳಿ ಹೋಗುವ ರಸ್ತೆಗೆ ಡಾಂಬರೀಕರಣ ಮಾಡಲಾಯಿತು ಕಾಮಗಾರಿ ಈ ಕಾಮಗಾರಿ ಬಗ್ಗೆ ಕಸಪುರ ಗ್ರಾಮಸ್ಥರಿಂದ ಕಳಪೆ ಕಾಮಗಾರಿ ಎಂದು ಆರೋಪ ಮಾಡಿದರು ಆರೋಪ ಮಾಡಿದ ತಕ್ಷಣ ಲೋಕಪಯೋಗಿ ಇಲಾಖೆ ಅಧಿಕಾರಿಗಳು ಕಸಪುರ ಗ್ರಾಮದ ಡಾಂಬರ್ ಮಾಡಿದ ರಸ್ತೆಯನ್ನು ಪರಿಶೀಲಿಸಿದರು. ಈ ಕಾಮಗಾರಿ ಗುಣಮಟ್ಟವಾಗಿದೆ ಇದು ಹಳ್ಳಿಯ ರಸ್ತೆ ಸರ್ಕಾರದ ನಿಯಮದಂತೆ ಎಷ್ಟು ಡಾಂಬರ್. ಜಲ್ಲಿ ಹಾಕಬೇಕು ಎಂದು ಎಷ್ಟು ಮೆಂಟ್ ಕಾಪಿಯಲ್ಲಿ ಇರುತ್ತದೆ ಇದರ ಪ್ರಕಾರ ಗುತ್ತಿಗೆದಾರರು ಕೆಲಸ ಮಾಡಿರುತ್ತಾರೆ. ಲೋಕ ಉಪಯೋಗಿ ಇಲಾಖೆಯ Jee. ನಾಗನಗೌಡ ಮಾತನಾಡಿ ಕಸಪುರ ಗ್ರಾಮದಲ್ಲಿ ಡಾಂಬರ್ ರಸ್ತೆ ಮಾಡುವಾಗ ನಮ್ಮ ಇಲಾಖೆ ಅಧಿಕಾರಿಗಳು ನಾನು ಈ ಕೆಲಸ ಮುಗಿಯುವರೆಗೂ ಪ್ರತಿದಿನ ನಿತ್ಯ ಸೈಟಿಗೆ ಬಂದಿರುತ್ತೇವೆ. ಕಸಪುರ ಗ್ರಾಮಸ್ಥರು ಈ ರಸ್ತೆಗೆ ಅರ್ಧ ಅಡಿ ಡಾಂಬರ್ ಹಾಕಿ ಎಂದು ಕಸಪುರ ಗ್ರಾಮಸ್ಥರು ಕೇಳಿಕೊಂಡರು. ಈ ರಸ್ತೆ ಎಸ್ಟಿಮೆಂಟ್ ಕಾಪಿಯಲ್ಲಿ ಎಷ್ಟು ಇರುತ್ತದೆ ಅದರ ಪ್ರಕಾರ ಈ ರಸ್ತೆಯನ್ನು ನಾವು ಸುರಕ್ಷಿತವಾಗಿ ಮಾಡಿಕೊಡಿಸುತ್ತೇವೆ ಎಂದು ಗ್ರಾಮಸ್ಥರಿಗೆ ತಿಳಿಸಿರುತ್ತಾರೆ. ಆದರೆ ಗ್ರಾಮಸ್ಥರು ಕಳಪೆ ಕಾಮಗಾರಿ ಎಂದು ಮಾಧ್ಯಮದವರಿಗೆ ಗ್ರಾಮದ ಗ್ರಾಮಸ್ಥರು ಹೇಳಿಕೆಯನ್ನು ಕೊಟ್ಟಿರುತ್ತಾರೆ ನಂತರ ನಾವು ಪರಿಶೀಲಿಸಿರುತ್ತೇವೆ.ನಾವು ಸ್ಥಳಕ್ಕೆ ಹೋಗಿ ಡಾಂಬರ್ ರಸ್ತೆಯನ್ನು ಪರಿಶೀಲಿಸಿದಾಗ ಈ ರಸ್ತೆಯ ಪಕ್ಕ CC ರಸ್ತೆ ನಿರ್ಮಾಣ ಮಾಡಿರುತ್ತಾರೆ. Cc ರಸ್ತೆ ಮಾಡುವ ಹೈಜಾಕ್ ಮಿಷನ್ ಭಾರವಾಗಿ ಇರುತ್ತದೆ ಈ ವಾಹನ ಲೋಡ್ ತುಂಬಿಕೊಂಡು ಈ ರಸ್ತೆ ಮೇಲೆ ಅಡ್ಡಾಡಿದ್ದರಿಂದ ಅಲ್ಲಲ್ಲಿ ಸ್ವಲ್ಪ ಕ್ರಾಚ್ ಈ ಗ್ರಾಮದಲ್ಲಿ ರಸ್ತೆ ಗೆ ಡಾಂಬರ್ ಮಾಡಿ ಎರಡು ದಿನದಲ್ಲಿ ಈ ರಸ್ತೆಯ ಮೇಲೆ ಹೈಜಾಕ್ ಲೋಡ್ ತುಂಬಿಕೊಂಡು ಅಡ್ಡಾಡಿ ದರಿಂದ ಈ ರೀತಿ ಆಗಿರುತ್ತದೆ ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸರಿಪಡಿಸುವುದಕ್ಕೆ ನಾವು ತಿಳಿಸಿರುತ್ತೇವೆ. ಎಂದು ಇಲಾಖೆ ಅಧಿಕಾರಿಗಳು ತಿಳಿಸಿರುತ್ತಾರೆ ಇನ್ನು jee ನಾಗನಗೌಡರು ಕೂಡ್ಲಿಗಿ ತಾಲೂಕಿನಲ್ಲಿ ಸಾಕಷ್ಟು ರಸ್ತೆಗಳು ನಿರ್ಮಾಣ ಆಗಿರುತ್ತವೆ ಎಲ್ಲೂ ಸಮತ ಕಳಪೆ ಕಾಮಗಾರಿಗಳು ಆಗಿರುವುದಿಲ್ಲ ಕೆಲವೊಂದು ಹಳ್ಳಿಯಲ್ಲಿ ಗ್ರಾಮಸ್ಥರು ಡಾಂಬರ್ ಮಾಡುವಾಗ ಅರ್ಧ ಅಡಿ ಡಾಂಬರ್ ಹಾಕು ಹಂತ ಹೇಳುತ್ತಾರೆ ಆದರೆ ಸರ್ಕಾರದ ಎಷ್ಟ್ ಮೆಂಟ್ ಕಾಫಿಯಲ್ಲಿ ಇಷ್ಟು ಇರುತ್ತದೆ ಅಷ್ಟೇ ಆಗಬೇಕು ಅದು ಬಿಟ್ಟು ಬೇರೇನು ಮಾಡುವುದಕ್ಕೆ ಆಗುವುದಿಲ್ಲ ಸರ್ಕಾರದ ನಿಯಮವನ್ನು ನಾವೆಲ್ಲರೂ ಪಾಲಿಸಬೇಕೆಂದು ತಿಳಿಸಿದರು.

ವರದಿ. ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;