ಕಾಂಗ್ರೆಸ್ ಕಟ್ಟಡ ಕಾರ್ಮಿಕರ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪ್ರವಾಸ ಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಟ್ಟಡ ಕಾರ್ಮಿಕರ ಕೂಡ್ಲಿಗಿ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು,
ಪದಗ್ರಹಣ ಕಾರ್ಯಕ್ರಮದಲ್ಲಿ ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ ನನಗೆ ಕಾಂಗ್ರೆಸ್ ಪಕ್ಷದಿಂದ ಕೂಡ್ಲಿಗಿ ತಾಲೂಕು ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ, ನಮ್ಮ ಕಾರ್ಮಿಕರ ಘಟಕದಲ್ಲಿ ಬರುವಂತಹ ಎಲ್ಲಾ ಪ್ರಯೋಜನವನ್ನು ಕಟ್ಟಡ ಕಾರ್ಮಿಕರಿಗೆ ತಲುಪಿಸುವಂತಹ ಕೆಲಸ ನಾನು ಹಾಗೂ ನಮ್ಮ ಪದಾಧಿಕಾರಿಗಳು ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಂತರ ಕಾರ್ಮಿಕರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ತಿಪ್ಪೇಸ್ವಾಮಿ, ಮಾತನಾಡಿ ಈಗಾಗಲೇ ತಾಲೂಕು ಅಧ್ಯಕ್ಷರು ತಿಳಿಸಿದ ಹಾಗೆ, ಅಧ್ಯಕ್ಷರ ಜೊತೆ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಿಂದ, ಸೇವೆ ಸಲ್ಲಿಸಬೇಕು ಹಾಗೂ ನಿಮ್ಮ ಜೊತೆಯಲ್ಲಿ ನಾನು ಹೆಚ್ಚಿನ ಮಟ್ಟಕ್ಕೆ ಸೇವೆ ಸಲ್ಲಿಸಿ, ನಿಜವಾದ ಕಟ್ಟಡ ಕಾರ್ಮಿಕರಿಗೆ, ಎಲ್ಲಾ ಸೌಲಭ್ಯಗಳನ್ನು , ನಾವು ನೀವು ಕಲ್ಪಿಸಿ ಕೊಡೋಣ, ಅರ್ಥಪೂರ್ವಕವಾಗಿ ಹೇಳಿದರು,
ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ ರವರು ನೂತನವಾಗಿ ಕಾರ್ಮಿಕರ ಘಟಕಕ್ಕೆ ತಾಲೂಕು ಪದಾಧಿಕಾರಿಗಳನ್ನು, ನೇಮಕ ಮಾಡಿ , ಆದೇಶ ಪತ್ರವನ್ನು ನೀಡಿ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿಯುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್ ಟಿ ಸೆಲ್ ಜಿಲ್ಲಾಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ನಾಗಮಣಿ ಜಿಂಕಲ್, ಕೆಪಿಸಿಸಿ ಸದಸ್ಯ, ಉಮೇಶ್ ತಾಲೂಕು ಉಪಾಧ್ಯಕ್ಷ ಓಬಳೇಶ್, ಜಿಲ್ಲಾ ಉಪಾಧ್ಯಕ್ಷ ವೀರನಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೆ ಆರ್ ಉಮೇಶ್, ಜಿಲ್ಲಾ ಕಾರ್ಯಾ ಅಧ್ಯಕ್ಷ, ಮಂಜುನಾಥ್, ಅಸಂಘಟಿತ ಕಾರ್ಮಿಕರ ವಿಭಾಗದ, ತಾಲೂಕು ಅಧ್ಯಕ್ಷ ಚಂದ್ರಪ್ಪ, ವೀರಭದ್ರಪ್ಪ, ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು..

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
