;

ಸಂತ ಸೇವಾಲಾಲ್ ,284ನೇ ಜಯಂತಿ ಆಚರಣೆ…!!!

ಸಂತ ಸೇವಾಲಾಲ್ ,284ನೇ ಜಯಂತಿ ಆಚರಣೆ.
ಹ.ಬೊ.ಹಳ್ಳಿ. ಸಂತ ಸೇವಾಲಾಲ್ ಗುರುಗಳು ಇವರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ 284 ನೇ ಜನ್ಮದ ದಿನಾಚರಣೆಯಅಂಗವಾಗಿ, ಸಂತ ಸೇವಾಲಾಲ್ ರವರ ಭಾವ ಚಿತ್ರಕ್ಕೆ ಪೂಜಾ ಸಲ್ಲಿಸಿ , ಜೆಸ್ಕಾಂ ನೌಕರರಾದ,ರಮೇಶ್ ಮಾತನಾಡಿ,ಸಂತ ಸೇವಾಲಾಲ್ ಅವರು 1739ರಲ್ಲಿ ದಾವಣಗೆರೆ ಜಿಲ್ಲೆ ಯ ನ್ಯಾಮತಿ ಯ ಸೂರೆಗೊಂದ ಕೊಪ್ಪ ದಲ್ಲಿ ಫೆಬ್ರುವರಿ 15 ರಂದು ಜನಿಸಿದರು. ಇವರು 17 ನೆಯ ಶತಮಾನದವರಾಗಿದ್ದರು, ಮಹಾ ಸಂತ ಸೇವಾಲಾಲ್ ರವರ ತಂದೆ, ಭೀಮಾನಯಕ್,ತಾಯಿ,ರೂಪಿಣಿ ದೇವೀ.ಇವರಿಗೆ ಮಕ್ಕಳು ಆಗಿರುವುದಿಲ್ಲ ಮರಿಯಮ್ಮ ದೇವಿಗೆ ಹರ ಕೆ ಹೊರುತ್ತಾರೆ . ದೇವಿಯ ಕೃಪಾಶೀರ್ವಾದ ದಿಂದ ಹುಟ್ಟಿದವರೇ ಈ ಮಹಾನ್ ಪುರುಷರು ಇವರು ಭರ ತ ಖಂಡದ ಧಾರ್ಮಿಕ ರಾಯಭಾರಿ ಯೆಂದೆ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಇವರು ಹಲವು ಪವಾಡಗಳ ಮೂಲಕ ಜನರ ಮನಗೆದ್ದವರು.ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತ ಜನದಂಬೆಯ ಆರಾಧಕ ರಾಗಿ ,ಇಡೀ ಜೀವಮಾನ ದುದ್ದಕ್ಕು ಬ್ರಹ್ಮಚಾರಿಯಾಗಿ ,ಪಾಲನೆ ಮಾಡಿದಂತ ಸೇವಾ ಲಾಲರು ಇಂದಿಗೂ ಜನಮನದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ.ಇವರು ಬಂಜಾರ ಸಮುದಾಯದ ಆರಾದ್ಯ ಸದ್ಗುರು,ಸಂತ ಸೇವಾಲಾಲ್ ಮಹಾರಾಜರು.ಎಂದು ತಿಳಿಸಿದರು. ಈ ವೇಳೆಯಲ್ಲಿ ಜೆಸ್ಕಾಂ ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;