ಇಂದು ಕೂಡ್ಲಿಗಿಯಲ್ಲಿ ಪೇಜ್ ಪ್ರಮುಖರ ಸಮಾವೇಶ
ಕಾನ ಹೊಸಹಳ್ಳಿ: ಚಿಕ್ಕ ಜೋಗಿಹಳ್ಳಿ ಪ್ರವಾಸಿ ಮಂದಿರ ದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪೂರ್ವಭಾವಿ ಸಭೆ ಜರುಗಿತು.
ಪೇಜ್ ಪ್ರಮುಖರ ಸಮಾವೇಶ ಕಾರ್ಯಕ್ರಮ ಫೆ,13 ರಂದು ಕೂಡ್ಲಿಗಿ ಪಟ್ಟಣ ದಲ್ಲಿ ನಡೆಯುವುದರಿಂದ ಸಮಾವೇಶಕ್ಕೆ ಆಗಮಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಕುರಿತಾಗಿ ಪೂರ್ವಭಾವಿ ಸಭೆಯನ್ನು ಶಾಸಕ ಎನ್.ವೈ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೆ ವೇಳೆ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ಮಾತನಾಡಿ ಬಿಜೆಪಿ ಬೂತ್ ಅಭಿಯಾನ, ಸಂಕಲ್ಪ ವಿಜಯ ಅಭಿಯಾನ ಯಶಸ್ವಿಯಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೂತ್‌ಗಳಲ್ಲಿ ತಲಾ 30 ಮತದಾರರ ಪಟ್ಟಿಗೆ ಪ್ರತಿ ಒಬ್ಬ ಪೇಜ್ ಪ್ರಮುಖರನ್ನು ನೇಮಕ ಮಾಡಲಾಗಿದೆ. ಅವರ ಉತ್ಸಾಹ ಮತ್ತಷ್ಟು ಹೆಚ್ಚಿಸಲು ಹಾಗೂ ಮತದಾರರನ್ನು ಪಕ್ಷದ ಪರ ಸೆಳೆಯಲು ಫೆಬ್ರುವರಿ 13ರಂದು ಪೇಜ್ ಪ್ರಮುಖರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಕ್ಷೇತ್ರದಲ್ಲಿ ಗೆಲ್ಲಿಸುವಕೆಲಸ ಮಾಡೋಣ. ಯಾವುದೇ ವೈಯಕ್ತಿಕ ಭಿನ್ನ ಅಭಿಪ್ರಾಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಾವೆಲ್ಲರೂ ಒಂದೇ ಕಾರ್ಯಕರ್ತರ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಪಕ್ಷವನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ಇಂದು ಫೆಬ್ರವರಿ 13ರಂದು ನಡೆಯುವ ಸಮಾವೇಶವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದುರ್ಗ ಸೂರ್ಯಪಾಪಣ್ಣ ಪಕ್ಷದ ಹಾಗೂ ಕಾರ್ಯಕ್ರಮದ ರೂಪುರೇಷೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಮುಖಂಡರಾದ ಗುಂಡುಮುಣುಗು ಪ್ರಕಾಶ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು, ಬಿ.ಪಿ.ಚಂದ್ರಮೌಳಿ, ಎಸ್.ದುರುಗೇಶ್, ಮೊರಬ ಶಿವಣ್ಣ, ಬಿ.ಭೀಮೇಶ್, ಎನ್.ಪಿ.ಮಂಜುನಾಥ, ಡಾ.ಎಂ ಟಿ ಮಲ್ಲೇಶ್. ನಿವೃತ್ತ ಶಿಕ್ಷಕ ಬಿಜೆಪಿ ಮುಖಂಡ ಕಾನಾ ಮಡಗು ತಳವಾರ ಶರಣಪ್ಪ.ಶಾಸಕ ರ ಆಪ್ತ ಸಹಾಯಕ ಶ್ರೀಕಾಂತ್.ಜಿ. ಯಲ್ಲಪ್ಪ ನಾಗರಾಜ ಜೋಗಿಹಳ್ಳಿ ನಾಗಣ್ಣ, ಸಿದ್ದಾಪುರ ಅಂಜಿನಪ್ಪ ಕುರಿಹಟ್ಟಿ ರಾಮಣ್ಣ. ಸೇರಿದಂತೆ ಬಿಜೆಪಿ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
