ಮಹಾಲಿಂಗಪುರ ತೇರಬಂಡಿ ವೈಭವಕ್ಕೆ ಡಾ॥ ಎ ಆರ್ ಬೆಳಗಲಿ ಚಾಲನೆ.
ಬಾಗಲಕೋಟ ಜಿಲ್ಲೆಯ ಬೆಲ್ಲದ ನಾಡು ಎಂದೆ ಖ್ಯಾತಿಗಿರುವ ಮಹಾಲಿಂಗಪುರ ಪಟ್ಟದಲ್ಲಿ ಕಳೆದ ಐವತ್ತು ವರ್ಷಗಳಿಂದ ತೇರಬಂಡಿ ಸ್ಪರ್ಧೆ ನಡೆಸಿಕೊಂಡು ಬಂದಿರುವ ಬಸವೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರ ಕುಟುಂಬ. ಈ ವರ್ಷ ಐವತ್ತನೆ ವರ್ಷದ ಹಿನ್ನೆಲೆ ಡಾ!! ಎ.ಆರ್.ಬೆಳಗಲಿ ಅವರು ರೈತರಿಗೆ ಗೌರವ ಪೂರ್ವಕ ಸುವರ್ಣ ಮಹೋತ್ಸವ ಉದ್ಘಾಟಸಿ ಹಮ್ಮಿಕೊಂಡು ಲಕ್ಷಾಂತರ ಮೌಲ್ಯದ 31 ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು. ದಕ್ಷಿಣ ಕರ್ನಾಟಕದಲ್ಲಿ ಕೋಣಗಳ ಕಂಬಳ ಇದ್ದಂತೆ ಉತ್ತರ ಕರ್ನಾಟಕದಲ್ಲಿ ನಡೆಯುವ ರೈತರ ಪ್ರಮುಖ ಎತ್ತುಗಳ ಸ್ಪರ್ಧೆಗಳಾದ ತೇರಬಂಡಿ,ಕಲ್ಲು ಎಳೆಯುವ ಸ್ಪರ್ಧೆ,ನೆಗೀಲು ಸ್ಪರ್ಧೆ ಬಹು ಆಕರ್ಷಣೀಯ. ಮಹಾಲಿಂಗಪುರ ತೇರಬಂಡಿ ವೈಭವ ರಾಷ್ಟ್ರಮಟ್ಟದಲ್ಲಿ ಹಸುರುವಾಸಿಯಾಗಿದ್ದು, ಸಾವಿರಾರು ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆ ಇದ್ದು ಸ್ಪರ್ಧೆ ವೀಕ್ಷಿಸಲು ಬರುವ ಸಾವಿರಾರು ಪ್ರೇಕ್ಷಕರಿಗೆ ಬಸವೇಶ್ವರ ಜಾತ್ರಾ ಕಮೀಟಿಯಿಂದ ಊಟದ ವ್ಯವಸ್ಥೆ ಕೂಡಾ ಮಾಡಿದ್ದು, ಮಹಾಲಿಂಗಪುರ ತೇರಬಂಡಿ ಕಣ ಪ್ರೇಕ್ಷಕರ ಮನಗೆದ್ದ ಕಣ ಎಂಬ ಮಾತಿದೆ. ಸ್ಪರ್ಧೆಯಲ್ಲಿ ಮೊದಲು ಮಹಾಲಿಂಗೆಶ್ವರ ಗೋಶಾಲೆಯ ಎತ್ತುಗಳನ್ನು ಪೂಜೆಗೆ ಹೂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರಿನಾಲ್ಟ ಕ್ವೀಡ್ ಕಾರು ಇದ್ದು, ದ್ವಿತೀಯ ಬಹುಮಾನ ಬುಲೆಟ್ ಬೈಕ್, ತೃತೀಯ,ಚತುರ್ಥ ಹೀಗೆ 31 ಬಹುಮಾನಗಳಾಗಿ ಎಂಟು ಬೈಕುಗಳು ಮೂರು ಬೆಳ್ಳಿಯ ಗದೆಗಳು ಹಾಗು ನಗದು ಬಹುಮಾನ ಇಡಲಾಗಿದೆ. ದಿನಾಂಕ 02/02/2023 ಗುರುವಾರದಿಂದ ದಿನಾಂಕ 04/02/2023 ಶನಿವಾರದವರೆಗೆ ಇರಲಿದ್ದು ಕೊನೆಯ ದಿನ ಬಹುಮಾನ ಘೋಷಿಸಿಸಿಗುವುದು. ಕಾರ್ಯಕ್ರಮದಲ್ಲಿ ಬಸವೇಶ್ವರ ಜಾತ್ರಾ ಕಮೀಟಿಯ ಎಲ್ಲ ಸದಸ್ಯರು ಪಾಲ್ಗೊಂಡು ಯಶಸ್ವಿಗೋಳಿಸಲು ಕಾರಣರಾದರು.

ವರದಿ.ಬಸವರಾಜ ನಂದೆಪ್ಪನವರ ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
