ಸೇವಾಲಾಲ್ ಹಾಗೂ ಮರಿಯಮ್ಮ ದೇವಿಯ ದೇವಸ್ಥಾನ ಪ್ರತಿಷ್ಠಾಪನೆ
ಕೂಡ್ಲಿಗಿ ತಾಲೂಕಿನ ಉಲ್ಲಾನ ಹಳ್ಳಿ ತಾಂಡದಲ್ಲಿ ಸಂತ ಶ್ರೀ ಸೇವಾಲಾಲ್, ಹಾಗೂ ಮರಿಯಮ್ಮ ದೇವಿಯ ದೇವಸ್ಥಾನ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಮುರಳಿ ರಾಜ್. ಕೆ ಮಾತನಾಡಿ. ಸೇವಾಲಾಲ್ ರವರು ಹುಟ್ಟು ಬಾಲ ಬ್ರಹ್ಮಚಾರಿಯಾಗಿ. ಸಮಾಜ ಉದ್ದಾರಕ್ಕಾಗಿ ಬಂಜಾರ ಸಮುದಾಯಗಳಿಗೆ . ಯಾವುದೇ ರೀತಿಯಿಂದ ಮಧ್ಯಾವೇಶನಕ್ಕೆ ತುತ್ತಾಗಬಾರದು ಕಡು ಕಷ್ಟದಿಂದ ಕುಟುಂಬಗಳನ್ನು ಸಾಗಿಸುವ ಬಂಜಾರ್ ಸಮುದಾಯಗಳು ಕಡು ಕಷ್ಟಗಳಿಂದ ಕೂಡಿರುವಂತಹ . ಕುಟುಂಬದ ತಮ್ಮ ಮಕ್ಕಳನ್ನು ವಲಸೆ ಕರೆದುಕೊಂಡು ಹೋಗುವುದು ಖಂಡಿಸಬೇಕು ಅಂತ ಮಕ್ಕಳಿಗೆ.

ವಿದ್ಯಾಭ್ಯಾಸದ ಕಡೆ ಗಮನ ಕೊಡಿಸಬೇಕು ಆರ್ಥಿಕವಾಗಿ ದುಂದು ವೆಚ್ಚಗಳನ್ನು ಮಾಡದ ಬೇರೆ ಯಾವುದೇ ಚಟಕ್ಕೆ ಹಾನಿ ಆಗಬಾರದು ಸಮಾಜದಲ್ಲಿ ನಮ್ಮದೇ ಆದಂತಹ ಗೌರವ ಸ್ಥಾನಮಾನಗಳು ಇರುವುದನ್ನು ನಾವೆಲ್ಲರೂ ಸ್ವಾಭಿಮಾನದಿಂದ ಬದುಕಬೇಕು ಶಿಕ್ಷಣಪರ ನಾವೆಲ್ಲರೂ ಒಗ್ಗಟ್ಟಾಗಿರಬೇಕು ನಮ್ಮ ತಾಂಡಗಳಲ್ಲಿ ಬರುವಂತಹ ಯಾವುದೇ ಬಗೆಹರಿಸುವಲ್ಲಿ ನಾಯಕ್ ಕಾರ್ಬಾರಿ ಡಾ ಓ ಇವರ ಪಾತ್ರ ಬಹುಮುಖ್ಯವಾಗಿರುತ್ತದೆ ಇವರಿಗೆ ನಾವೆಲ್ಲರೂ ಗೌರವವಾಗಿ . ಕಾಣಬೇಕು ಅಂದಿನಿಂದ ಇಂದಿನವರೆಗೆ ನಡೆದುಕೊಂಡು ಬಂದಿರುವುದು ಇವರ ನಿರ್ಣಯದ ಪ್ರಕಾರ ಅಂತಿಮ ವಾಗುವುದು ಸಂತೋಷಕರ ವಿಷಯ ವಿಷಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಂಘದ ಅಧ್ಯಕ್ಷರಾದ ಶಾಮ ನಾಯ್ಕ್ ಮುಖಂಡರುಗಳಾದ ವಿಜಯಕುಮಾರ್ ಮಂಜೇಶ್ ನಾಯ್ಕ್ ಊರಿನ ಪ್ರಮುಖರು ಮುಖಂಡರುಗಳು ಮಹಿಳಾ ಮುಖಂಡರುಗಳು. ಸೇವಾಲಾಲ್ ಭಕ್ತರು ಇದ್ದರು.

ವರದಿ ; ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
