ರಾಜ್ಯಮಟ್ಟದ ಭತ್ತ ಬೆಳೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗೆ ಆಯ್ಕೆಯಾದ ಕಂಪ್ಲಿಯ ಡಾ!! ಎ.ಸಿ ದಾನಪ್ಪಗೆ ಪ್ರಥಮ ಸ್ಥಾನ !!
ಕಂಪ್ಲಿ: 2019 20ನೇ ಸಾಲಿನ ರಾಜ್ಯಮಟ್ಟದ ಭತ್ತದ ಮುಂಗಾರು ಹಂಗಾಮು ನೀರಾವರಿಯ ಬೆಳೆ ಸ್ಪರ್ಧೆಯಲ್ಲಿ ಕಂಪ್ಲಿ ಪಟ್ಟಣದ ಪ್ರಗತಿಪರ ರೈತ ಡಾ. ಎ.ಸಿ ದಾನಪ್ಪ ಪ್ರಥಮ ಸ್ಥಾನ ಗಳಿಸಿ ರಾಜ್ಯ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಂಪ್ಲಿ ತಾಲೂಕಿನ ನಂ 10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗೊಡು ಹಾಳ್ ಗ್ರಾಮದ ವ್ಯಾಪ್ತಿಯ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ 112.11 ಕ್ವಿಂಟಲ್ ಭತ್ತ ಬೆಳೆದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಇವರಿಗೆ ಇದೇ ತಿಂಗಳು ಜನವರಿ 31ರಂದು. ಧಾರವಾಡ ಘನವೆತ್ತ ಸನ್ಮಾನ್ಯ ಉಪರಾಷ್ಟ್ರಪತಿಗಳು ಭಾರತ ಸರ್ಕಾರ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರ ಘನ ಉಪಸ್ಥಿತಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯದ ನೈಸರ್ಗಿಕ ಕೃಷಿ ಕಾರ್ಯಕ್ರಮ ಲೋಕಾರ್ಪಣದೊಂದಿಗೆ ಆವರಣದಲ್ಲಿ ಏರ್ಪಡಿಸಲಾಗಿದ್ದ 2019 20ನೇ ಸಾಲಿನಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿಗೆ ಭತ್ತ ನೀರಾವರಿ ಪ್ರಥಮ ಸ್ಥಾನ ಪ್ರಶಸ್ತಿಯನ್ನು ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಡಾ. ಎ.ಸಿ ದಾನಪ್ಪ ಅವರಿಗೆ ಸನ್ಮಾನದ ಜೊತೆಗೆ 50 ಸಾವಿರ ರೂಪಾಯಿ ಬಹುಮಾನ ರೂಪವಾಗಿ ಸಿಗಲಿದೆ ಎಂದು ಕರ್ನಾಟಕ ಸರ್ಕಾರ ಕೃಷಿ ಇಲಾಖೆ ಸಚಿವರು ಬಿಸಿ ಪಾಟೀಲ್, ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಬಳ್ಳಾರಿ,ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶ್ರೀಧರ್ ರವರು ತಿಳಿಸಿದರು…

ವರದಿ. ಬಸವರಾಜ್ ಕಂಪ್ಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
