ಸ್ನೇಹ ಗೆಳೆಯರ ಬಳಗದವರಿಂದ ಸ್ಪರ್ಧಾತ್ಮಕ ಪರೀಕ್ಷೆ
ಹ.ಬೊ. ಹಳ್ಳಿ. ಸ್ನೇಹ ಗೆಳೆಯರ ಬಳಗ ಹಾಗೂ ಯುವ ಶಿಕ್ಷಣ ಪ್ರೇಮಿಗಳು ಇವರ ವತಿಯಿಂದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಯನ್ನು, ತಾಲೂಕಿನ ಕಡಲ ಬಾಳು ಗ್ರಾಮದ ಶ್ರೀ ಶಿವ ಶಾಂತ ವೀರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಪರೀಕ್ಷೆಗೆ ಧಾರವಾಡ, ಬೀದರ್, ದಾವಣಗೆರೆ, ವಿಜಯನಗರ, ಜಿಲ್ಲಾ ಹಾಗೂ ತಾಲೂಕ ಗಳಿಂದ, ಸುಮಾರು 250 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಕ್ಕ ರೂ.10,000, ದ್ವಿತೀಯ ಸ್ಥಾನಕ್ಕೆ,ರೂ. 5000, ತೃತೀಯ ಸ್ಥಾನಕ್ಕೆ, ರೂ.3000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ . ಅತಿ ಹೆಚ್ಚಿನ ಅಂಕ ಗಳಿಸಿದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಇಡಲಾಗಿತ್ತು. ಈ ಪರೀಕ್ಷೆ ಸ್ಪರ್ಧೆಯಲ್ಲಿ ಧಾರವಾಡದ ಬಸವರಾಜ ಗೌಡ, ರಿ. ಪಡೆದಅಂಕ 75/ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಹ.ಬೊ. ತಾಲೂಕಿನ, ಆನೇಕಲ್ ಗ್ರಾಮದ ವಿಎಂ. ಬಸವರಾಜರಿ. ಸಂಖ್ಯೆ.23340, ಪಡೆದ ಅಂಕ,55.2/ ದ್ವಿತೀಯ ಸ್ಥಾನದಲ್ಲಿ , ಹ.ಬೊ. ಹಳ್ಳಿ ತಾಲೂಕಿನ ಆನಂದ ದೇವನಹಳ್ಳಿ, ಬಸವರಾಜ ಹಿರೇಗೌಡ, ರಿ. ಪಡೆದ ಅಂಕ 54.75/ತೃತೀಯ ಸ್ಥಾನದಲ್ಲಿ, ಪಡೆದು, ಜಿಲ್ಲಾ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ಶ್ರೀ ಶಿವಶಾಂತೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಂದ, ನಗದು ಬಹುಮಾನ, ಹಾಗೂ ಪ್ರಶಸ್ತಿ ಪತ್ರ, ಕೊಟ್ಟು ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ, ಮಾಗಳದ ನಿಂಗಪ್ಪ, ಹಾಗೂ ಬ್ಯಾಟಿ ನಾಗರಾಜ್, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ, ಚಲವಾದಿ ರಮೇಶ, ಹಾಗೂ ಗ್ರಾ.ಪಂ. ಸಿಬ್ಬಂದಿ ಹಾಗೂ ಪ್ರೌಢ ಶಾಲೆಯ ಶಿಕ್ಷಕ, ಶಿಕ್ಷಕೀಯರು, ಶಾಲೆಯ ವಿದ್ಯಾರ್ಥಿಗಳು, ಪರೀಕ್ಷಾರ್ಥಿಗಳು ಹಾಜರಿದ್ದರು…

ವರದಿ. ಧನಂಜಯ್, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
