ಐತಿಹಾಸಿಕ ವೀರನದುರ್ಗಕ್ಕೆ ಲೋಕೇಶ ನಾಯಕ ಭೇಟಿ.
ಕೂಡ್ಲಿಗಿ.ಜ. 23 :- ಐತಿಹಾಸಿಕ ಭೂಪಟದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಮೂವರು ಪಾಳೇಗಾರರು ಆಳ್ವಿಕೆ ನಡೆಸಿದ ಕೂಡ್ಲಿಗಿ ತಾಲೂಕಿನ ಈಗಿನ ಮೊರಬ ಗ್ರಾಮಪಂಚಾಯಿತಿಯ ವೀರನದುರ್ಗವು ಒಂದು ಅಂತಹ ಐತಿಹಾಸಿಕ ಸ್ಥಳಕ್ಕೆ ಕೆಪಿಸಿಸಿ ಸದಸ್ಯ ಹಾಗೂ ಕೂಡ್ಲಿಗಿ ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಪ್ರಮುಖ ಆಕಾಂಕ್ಷಿ ಲೋಕೇಶ ವಿ ನಾಯಕ ಅವರು ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿದರು.

ಅವರು ಗುಡೇಕೋಟೆ, ಜರಿಮಲೆ ಪಾಳೇಗಾರರಂತೆ ವೀರನದುರ್ಗ ಪಾಳೇಗಾರರು ತಮ್ಮ ಕೋಟೆ ಕೊತ್ತಲು ನಿರ್ಮಿಸಿಕೊಂಡು ಆಳ್ವಿಕೆ ನಡೆಸುತ್ತಿದ್ದ ಮಾಹಿತಿ ಪಡೆದುಕೊಂಡು ಕೋಟೆಯನ್ನು ಸಂಪೂರ್ಣ ಸುತ್ತಾಡಿ ವೀರನದುರ್ಗದ ಚಿತ್ರಣವನ್ನು ಕಣ್ಣಾರೆ ಕಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮೊರಬ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾಬಾಷ, ಸದಸ್ಯ ಹನುಮಂತ, ಕಾಟಮಲ್ಲಿ ಕೊಟ್ರೇಶ್, ಮಹಾಲಿಂಗ, ಮಂಜು, ಬಸವರಾಜ್, ಅಜೇಯ್, ನಿತೇಶ್ ಇನ್ನೂ ಮುಂತಾದವರು ಜತೆಗಿದ್ದರು.

ವರದಿ: ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
