;

ಹೊಸಹಳ್ಳಿ ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮ

ಹೊಸಹಳ್ಳಿ ನಾಡಕಛೇರಿ ಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿ ಉಪತಹಶೀಲ್ದಾರರು ಚಂದ್ರ ಮೋಹನ್ ನೇರ, ನಿಷ್ಟುರ, ವಚನಕಾರ ವೀರಗಣಾಚಾರಿ, 12 ನೇ ಶತಮಾನದ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು. ಈ ನಾಡಿಗೆ ತಿಳಿಸಿದರು.
ಕಟ್ಟಿದ ಲಿಂಗವ ಬಿಟ್ಟು,
ಬೆಟ್ಟೆದ ಲಿಂಗಕ್ಕೆ ಹೋಗಿ .
ಹೊಟ್ಟೆ ಹಡಿ ಮಾಡಿ ಮಲಗಿದ
ಲೊಟ್ಟ ಮೂಲರ ಕಂಡು .
ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದಾತ ನಮ್ಮ ನಿಜಶರಣ ಅಂಬಿರ ಚೌಡಯ್ಯ ಎಂದುಕಂದಾಯಪರೀಕ್ಷಕರಾದ ತಿಪ್ಪೇಸ್ವಾಮಿ.ಎನ್. ಹೇಳಿದರು.
ನಂತರ ಗ್ರಾಮ ಲೆಕ್ಕಾಧಿಕಾರಿ ಚನ್ನಬಸಯ್ಯ ಎಸ್ ಎಂ. ಮಾತನಾಡಿ
ತೀಕ್ಷ್ಣ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಶ್ರೇಷ್ಠ ವಚನಕಾರರು, ಸರ್ವಸಮಾನತೆಯ ಹರಿಕಾರರು ಮತ್ತು ಸಮಾಜ ಸುಧಾರಕರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ
ಸಮಾಜದಲ್ಲಿನ ತಾರತಮ್ಯ ನೀತಿಗಳ ವಿರುದ್ಧ ಹೋರಾಡಿ, ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸವಲ್ಲಿ ನಿಜಶರಣರ ಕೊಡುಗೆ ಅಪಾರ. ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ ಕೊಂಡಿ. ಮತ್ತು ನಾಡಕಛೇರಿ ಅಪರೇಟರ್ ಗಳಾದ ರಮೇಶ್ , ಮಂಜುನಾಥ ಅಗ್ರಹಾರ. ನಾಗೇಶ್ ,ಹಾಗೂ ಇಧೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ ಸ್ವಾಮಿ ,ಸ್ವಾಮಿ ಹೊಸಹಳ್ಳಿ. ಹನುಮಂತಪ್ಪ ಕುಂಬಾರ್ ನಾಗರಾಜ್ ಸೇರಿದಂತೆ ಸಾರ್ವಜನಿಕರು ಉಪಸ್ಧಿತರಿದ್ದರು.

ವರದಿ. ಕೆ, ಎಸ್, ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;