ಕೂಡಿ ಬಾಳಿ ಬದುಕಿದರೆ ಮಾನವ ಜೀವನ ನಂದನವನ ಶ್ರೀ ರಂಭಪುರೀ ಜಗದ್ಗುರುಗಳು.
: ಹ.ಬೊ.ಹಳ್ಳಿ ಶ್ರೀಮದ್ ವೀರ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ||. ವೀರ ಸೋಮೇಶ್ವರ, ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳ ಅಡ್ಡ ಪಲ್ಲಕ್ಕಿ ಹಾಗೂ ಶ್ರೀವಿಘ್ನಶ್ವರ,ಶ್ರೀ ಈಶ್ವರ ,ಶ್ರೀ ಶರಣಬಸೇಶ್ವರ, ಹಾಗೂ ಶ್ರೀ ನಂದಿ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ವು ವೀರಗಾಸೆ, ಪುರವಂತಿಕೆ, ಗೊಂಬೆಗಳ ಕುಣಿತ, ಸಕಲವಾದ್ಯಗಳುಂದಿಗೆ ಶ್ರೀ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವವನ್ನು ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನೆರೆವೇರಿತು, ನಂತರ ಧಾರ್ಮಿಕ ಸಭೆಯನ್ನು ಹರ ಚರ ಶಿವಾಚಾರ್ಯರ ಸಮೂಹದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಲಾಯಿತು. ನಂತರ ಧಾರ್ಮಿಕ ಸಭೆಯನ್ನು ಉದ್ದೇಶಿಸಿ, ಶ್ರೀಮದ್ ರಂಭಾಪುರಿ ಶ್ರೀ ಶ್ರೀಗಳು ಮಾತನಾಡಿ, ನಿಮ್ಮೆಲ್ಲರ ಭಕ್ತಿ, ನಿಮ್ಮೆಲ್ಲರ ಅಭಿಮಾನ, ನಿಜವಾಗಿ ಎಷ್ಟು ಹೇಳಿದರೂ ಸಾಲದು, ಕಡಿಮೆಯನ್ನು ವಂತ ಹರುಷದ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಾ ಇದ್ದೇನೆ. ನಾವು ಮೇಲಿಂದ ಮೇಲೆ ಈ ಭಾಗದ ಭಕ್ತರ ಜೊತೆಗೆ ಒಡನಾಟದಲ್ಲಿ ಇದ್ದೇವೆ ಸಭೆ ಸಮಾರಂಭಗಳಲ್ಲಿ ನಾವು ಉಪದೇಶವನ್ನು ಆಶೀರ್ವಚನವನ್ನು ಕೊಡುತ್ತಾ ಇರುತ್ತೇವೆ ಮತ್ತು ಈ ಪವಿತ್ರ ಸಮಾರಂಭದ ಮಾರ್ಗದರ್ಶನವನ್ನು ನೋಡಿದರೆ ನಮಗೆ ಹೆಮ್ಮೆ ಅನಿಸುತ್ತದೆ ಈ ಭಾರತ ದೇಶ ಧರ್ಮ ಪ್ರಧಾನವಾದಂತ ದೇಶ ಅನ್ನೋದು ಎರಡು ಮಾತು ಇಲ್ಲವೇ ಇಲ್ಲ, ಈ ದೇಶದಲ್ಲಿ ಇರುವಷ್ಟು ಧರ್ಮಗಳು ಬೆಳೆದುಕೊಂಡು ಬಂದಂತ ಪರಂಪರೆಗಳು, ಬೇರಾವ ರಾಷ್ಟ್ರದಲ್ಲಿ ಇಲ್ಲ ಎಂದು ಎಲ್ಲರಿಗೂ ಗೊತ್ತಿರುವಂತ ಸಂಗತಿ, ಧರ್ಮ ಹಲವಾರು ಇರಬಹುದು, ಆಚರಣೆಗಳು ಬೇರೆ ಬೇರೆ ಇರಬಹುದು, ಎಲ್ಲಾ ಧರ್ಮಗಳ ಕೊನೆಯ ಗುರಿ ಇದೆಯಲ್ಲ ಅದು ಮಾನವರ ಕಲ್ಯಾಣವನ್ನೇ ಬಯಸುತ್ತಾ ಇದೆ. ಬೇರೇನು ಕೂಡ ಅಲ್ಲ ಅನ್ನೋದು ಸತ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ವಿವಿಧತೆಯಲ್ಲಿ ಏಕತೆಯಲ್ಲಿ ಕಾಣುವಂತದು ಭಾರತೀಯ ಉತ್ಕೃಷ್ಟ ಸಂಸ್ಕೃತಿಯ ಒಂದು ಲಕ್ಷಣ ಅನ್ನೋದು ತಮ್ಮೆಲ್ಲರಿಗೂ ಕೂಡ ಗೊತ್ತಿದೆ, ಕೂಡಿ ಬಾಳಿ ಬದುಕಿದರೆ ಮಾನವ ಜೀವನ ನಂದನವನ ಆಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲವೇ ಇಲ್ಲ, ಅದಕ್ಕಾಗಿ ರಂಬಾಪುರಿ ಧರ್ಮಪೀಠ, “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ”ಅನ್ನುವಂತ ಸಂದೇಶವನ್ನು ಶ್ರೀಮದ್ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳು ಕರೆಯನ್ನ ಕೊಟ್ಟಿದ್ದನ್ನು ತಾವೆಲ್ಲ ಕೇಳಿದ್ದೀರಿ, ಪರಮ ಜಗದ್ಗುರುಗಳ ದರ್ಶನ ಆಶೀರ್ವಾದವನ್ನು ಪಡೆದಂತ ಎಷ್ಟೋ ಜನ, ಈ ಗ್ರಾಮದಲ್ಲಿ, ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ಅಧರ್ವಂತ ಸತ್ಯ ತಮ್ಮೆಲ್ಲರಿಗೂ ಕೂಡ ಗೊತ್ತಿದೆ. ಇವತ್ತು ಒಡಕು, ಮೈ ಮನಸ್ಸುಗಳಿಂದ, ಮನುಷ್ಯ ಬಾಳಿ ಬದುಕುವುದರಿಂದ ಎಲ್ಲಿ ನೋಡಿದಲ್ಲಿ, ಅಶಾಂತಿ ,ಅತೃಪ್ತಿ, ತಾಂಡವ ಆಡುತ್ತಿರುವುದನ್ನು ನಮ್ಮ ನಿಮ್ಮೆಲ್ಲರ ಗಮನದಲ್ಲಿ ಇದೆ. ಆದರೆ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯ ತಿಳಿದುಕೊಳ್ಳ ಬೇಕಾದಂತ ವಿಷಯ ಬಹಳ ಇದೆ. ಅವರವರ ಧರ್ಮ , ಅವರವರ ಪರಂಪರೆ, ಅವರವರ ಸರ್ವ ಶ್ರೇಷ್ಠ, ಇದಲ್ಲಿ ಎರಡು ಮಾತಿಲ್ಲ, ಆದರೆ ಇನ್ನೊಂದು ಧರ್ಮವನ್ನು ಇನ್ನೊಂದು ಪರಂಪರೆಯನ್ನು ಗೌರವದಿಂದ ಸಹಿಷ್ಣುತೆ ಮನೋಭಾವನೆಯಿಂದ ಕಾಣುವಂತದ್ದು ಬಹಳ ಮುಖ್ಯ. ಇವತ್ತು ಅದರ ಕೊರತೆ ಅಲ್ಲಲ್ಲಿ ಆಗುತ್ತಾ ಇರುವುದರಿಂದ ಇಂಥ ಭಾವನೆಗಳು ಬೆಳೆಯಲಿಕ್ಕೆ ಕಾಣಲಾರದಂತೆ ಇರುವಂತ ರಾಜಕೀಯ ಶಕ್ತಿಗಳು, ಪ್ರೇರೇಪಣೆಯನ್ನು ಕೊಡುವುದರಿಂದ, ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಸಂಘರ್ಷಣೆಗಳನ್ನು ಕಾಣುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಎಲ್ಲಾ ಸಮುದಾಯದ ಜೊತೆ ಪರಸ್ಪರ ಸ್ನೇಹ ಭಾವನದಿಂದ ಸಾಮರಸ್ಯದಿಂದ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಾ ಇದ್ದರು. ಅದರಂತೆ ನಾವು ನೀವೆಲ್ಲ ಒಂದಾಗಿ, ಒಟ್ಟಾಗಿ, ಬಾಳೋಣ ಮಾನವ ಮಾನವರು ಶತ್ರುಗಳು ಆಗುವುದು ಬೇಡ, ಎಲ್ಲರೂ ಒಂದಾಗಿ ಭಕ್ತಿ ಮಾರ್ಗಕ್ಕೆ ಮುನ್ನಡೆಯೋಣ ಎಂದು ಆಶೀರ್ವಚನ ನೀಡಿದರು. ಹಾಗೂ ಗ್ರಾಮಸ್ಥರ, ದೈವದವರ, ಪರವಾಗಿ, ತಾವು ಬರೆದಂತ, ಭಿನ್ನ ವತ್ತಳೆ ಯನ್ನು ಶ್ರೀ ಷ.||.ಬ್ರ||. ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನವಲಿ ಹಿರೇಮಠ ಹಂಪಸಾಗರ, ವಾಚನ ಮಾಡುವುದರ ಮೂಲಕ ತಮ್ಮೆಲ್ಲರ ಭಕ್ತಿ ಗೌರವಗಳನ್ನು ಮಹಾ ಪೀಠಕ್ಕೆ ಸಮರ್ಪಿಸಿದರು. ಈ ವೇಳೆಯಲ್ಲಿ ಸಭೆಯ ಅಧ್ಯಕ್ಷ ತೆಯನ್ನು ವಹಿಸಿರುವ ಪರಮಪೂಜ್ಯ ಶ್ರೀ ಡಾ||. ಮಹೇಶ್ವರ ಸ್ವಾಮಿಗಳು ಪುಣ್ಯಕ್ಷೇತ್ರ ನಂದಿಪುರ, ಹಾಗೂ ಶ್ರೀ ಷ||.ಬ್ರ||. ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಕೂಡ್ಲಿಗಿ, ಶ್ರೀ ಮ.ನಿ.ಪ್ರ. ಶಂಕರ ಸ್ವಾಮಿಗಳು ವಿರತ್ ಮಠ ಉತ್ತಂಗಿ ಕೊಟ್ಟೂರು, ಹನಸಿ, ಪರಮಪೂಜ್ಯ ಶ್ರೀ ಹಾಲಸಿದ್ದೇಶ್ವರ ಸ್ವಾಮಿಗಳು ಹಾಲಸ್ವಾಮಿ ಮಠ ಹ.ಬೊ. ಹಳ್ಳಿ. ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಹಿರೇಮಠ ಬೆಣ್ಣಿಹಳ್ಳಿ, ಷ.||.ಬ್ರ||. ನಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಹಂಪಿ ಸಾವಿರ ದೇವರ ಸಂಸ್ಥಾನ ಮಠ ಎಮ್ಮಿಗನೂರು. ಶ್ರೀ ಪರ್ವತ ದೇವರು ಹಂಪಾಪಟ್ಟಣ, ಗರಗ, ನಾಗಲಾಪುರ, ಪ್ರಾಸ್ತವಿಕ ಭಾಷಣವನ್ನು, ಬುಡ್ಡಿ ಬಸವರಾಜ್, ನೆರಳು ಪತ್ರಿಕೆಯ ಸಂಪಾದಕರು, ಪೌರೋಹಿತ್ಯ, ಶ್ರೀ ವೇದಮೂರ್ತಿ, ಸುಭಾಷ್ ಚಂದ್ರಯ್ಯ , ಉಸ್ತುವಾರಿ, ಶ್ರೀ ಓ, ಬಸವರಾಜ, ಮತ್ತು ಗ್ರಾಮದ ಗಣ್ಯ ವ್ಯಕ್ತಿಗಳು,ಪ್ರಾರ್ಥನೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಪ ಪಟ್ಟಣ ವಿದ್ಯಾರ್ಥಿಗಳಿಂದ, ಸಂಗೀತ,ಕು||. ಶ್ರೀ ದಳವಾಯಿ ಅಂಬಣ್ಣ ಸಿರುಗುಪ್ಪ ತಾಲೂಕು ಬಳ್ಳಾರಿ ಜಿಲ್ಲಾ, ತಬಲಸಾತಿ, ಶ್ರೀ ಶೇಖರ ಇಮ್ಮಡಿ ಸಾ||ರಬಕವಿ ವೀರೇಶ್ವರ ಪುಣ್ಯ ಆಶ್ರಮ ಗದಗ, ನಿರೂಪಣೆ, ಶ್ರೀ ನಾಗನಗೌಡ್ರು ತಂಬ್ರಹಳ್ಳಿ, ಶ್ರೀ ಕರಿಬಸನಗೌಡರು ಬ್ಯಾಲಾಳು, ಹಾಗೂ ಹಂಪಾಪಟ್ಟಣದ ದೈವಸ್ಥರು, ಭಕ್ತರು, ಭಾಗವಹಿಸಿದ್ದರು.

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
