;

ಕರ್ನಾಟಕ ಹೈಕೋರ್ಟ್ ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಗಾಯಿತ್ರಿ ಆಯ್ಕೆ…!!!

ಕರ್ನಾಟಕ ಹೈಕೋರ್ಟ್ ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಗಾಯಿತ್ರಿ ಆಯ್ಕೆ.

ಈ ಸಮಾಜಕ್ಕೆ ಮಾದರಿ ಹೆಣ್ಣು ಆಗಿ ಸಹಾಯ ಮಾಡಬೇಕು, ಎಂಬ ಕನಸುಗಳನ್ನ ಹೊತ್ತು ಬೆಳೆದ
ಶಿಕ್ಷಣದ ಛಲಗಾತಿ, ಸಾಧನೆಯ ಸಾಧಕಿ ದಲಿತ ಸಹೋದರಿ ಗಾಯಿತ್ರಿ, ಎನ್ ವಯಸ್ಸು ಕೇವಲ 25 ವರ್ಷಗಳು ಮಾತ್ರ ಆದರೆ ಸಾಧನೆ ಬಹು ದೊಡ್ಡದು ಪ್ರತಿ ಕುಟುಂಬದ ಹೆಣ್ಣು ಮಗಳು ಕೂಡ ಇವರನ್ನ ನೋಡಿ ಕಲಿಯಬೇಕು ಯಾಕೆಂದರೆ ಇಂದು ಇವರು ಕೋಲಾರ ಜಿಲ್ಲಾ ಕೋರ್ಟ್ ನ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ, ಅಂಬೇಡ್ಕರ್ ರವರ ಜ್ಞಾನ ವಿಚಾರಗಳನ್ನ ಮೈಗೂಡಿಸಿಕೊಂಡು ಅಂಬೇಡ್ಕರ್ ರವರ ಹಾದಿಯಲ್ಲಿ ಬೆಳೆದು ಇಂದು ಎಲ್ಲರಿಗೂ ಉತ್ತಮ ಸಮಾಜದ ಮಹಿಳೆಯಾಗಿರುವ ಸಹೋದರಿಗೆ ಕೋಟಿ ಕೋಟಿ ಭೀಮ ನಮನಗಳು…🙏💐

2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.

ಅತ್ಯಂತ ತಳ ಸಮುದಾಯದ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಗಾಯತ್ರಿರವರು ಬಂಗಾರಪೇಟೆಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯಾಭ್ಯಾಸ ಆರಂಭಿಸಿ ಬಾಲಕಿಯ ಪ್ರೌಢಶಾಲೆಯಲ್ಲಿ ಓದಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದುಕೊಂಡಿದ್ದರು.

ಕೆಜಿಎಫ್‌ನ ಕೆಂಗಲ್ ಹನುಮಂತಯ್ಯ ಲಾ ಕಾಲೇಜಿನಲ್ಲಿ ಕಾನೂನು ಪದವಿಯಲ್ಲಿ ಕರ್ನಾಟಕಕ್ಕೆ ನಾಲ್ಕನೆ‌ ಶ್ರೇಣಿಯನ್ನು ಪಡೆದುಕೊಂಡು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದರು.

ಗಾಯತ್ರಿರವರು ಬಂಗಾರಪೇಟೆಯ ನಾರಾಯಣಸ್ವಾಮಿ ವೆಂಕಟಲಕ್ಷ್ಮಿರವರ ಒಬ್ಬಳೇ ಮಗಳಾಗಿದ್ದು ತೀರಾ ಬಡತನದಲ್ಲಿ ಬೆಳೆದ ಗಾಯಿತ್ರಿರವರು ಮೊದಲಿನಿಂದಲೂ ಸಾಮಾಜಿಕ ಕಾಳಜಿಹೊಂದಿದ್ದು ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು.

ಪ್ರತಾಪ್ ಛಲವಾದಿ
ಹರಪನಹಳ್ಳಿ ತಾಲೂಕ ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;