ರಾಜ್ಯದಲ್ಲಿಯೇ ಗ್ರಾಮ ಪಂಚಾಯತ ಮಟ್ಟದಲ್ಲಿ ವಿಶೇಷ ಹೆಜ್ಜೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯತದಲ್ಲಿ ದಿನಾಂಕ 05/01/2023 ರಂದು ಜರುಗಿದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸರ್ವಾನುಮತದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಯಾರಾದರೂ ಮರಣ ಹೊಂದಿದರೆ ಆ ಕುಟುಂಬಕ್ಕೆ ಗ್ರಾಮ ಪಂಚಾಯತಿಯ ನಿಧಿ 2ರ 25% ಎಸ್ಸಿ ಎಸ್ಟಿ ಕಲ್ಯಾಣ ಕಾರ್ಯಕ್ರಮ ಅನುದಾನದಲ್ಲಿಯ 2500 ರೂಪಾಯಿಗಳನ್ನು ಶವಸಂಸ್ಕಾರಕ್ಕಾಗಿ ಸಹಾಯಧನವಾಗಿ ಕೊಡುವುದಾಗಿ ಠರಾವು ಪಾಸ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಸದಾಶಿವ ಜಗದಾಳೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೌಲಾಲಿ ಯಾಕೂಬ ನದಾಫ, ಗ್ರಾಮ ಪಂಚಾಯತ್ ಸದಸ್ಯರಾದ ನಾಮದೇವ ದಶರತ ಕಾಂಬಳೆ, ವಿಲಾಸ್ ರಾಮಚಂದ್ರ ಹೇರವಾಡೆ,ಸಂಜಯ ವಸಂತ ಜಾದವ, ಪ್ರಮೀಳಾ ಅಣ್ಣಸಾಬ ಹಿಡಿಕಲ್, ಮಲ್ಲವ್ವ ಸಿದ್ದಪ್ಪ ಕಾಂಬಳೆ, ಪಾರ್ವತಿ ರಾವಸಾಬ ದಾಸರ, ದೀಪಾ ಆನಂದ ಚೌಗಲಾ, ಮೀನಾಕ್ಷಿ ನಾರಾಯಣ ಮಾನೆ, ವಿನಾಯಕ ದಿಲೀಪ ಪವಾರ, ಪಾಂಡುರಂಗ ಮಾರುತಿ ಹವಾಲದಾರ, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸುರೇಶ ಭೂಪಾಲ ಮೇಖಳಿ ಮುಂತಾದವರು ಉಪಸ್ಥಿತರಿದ್ದರು ಈ ಒಂದು ನಿರ್ಣಯವನ್ನು ತೆಗೆದುಕೊಂಡ ಗ್ರಾಮ ಪಂಚಾಯತ ಜಲಾಲಪೂರ ಸರ್ವ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
