;

ಗ್ರಾಮೀಣ ಜಾನಪದ ಕಲೋತ್ಸವ 2023, ಕಾರ್ಯಕ್ರಮದ ಪೂರ್ವಭಾವಿ ಸಭೆ!!!!!

ಗ್ರಾಮೀಣ ಜಾನಪದ ಕಲೋತ್ಸವ 2023, ಕಾರ್ಯಕ್ರಮದ ಪೂರ್ವಭಾವಿ ಸಭೆ!!!!! ವಿಜಯನಗರ ಜಿಲ್ಲೆ ಕೂಡ್ಲಿಗಿ ದಿ.4-1-23 ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ಕರೆದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಮನೂರಪ್ಪ ಕೆ. ಇವರ ಸಾರಥ್ಯದಲ್ಲಿ ನಡೆಯುವ ಕಾರ್ಯಕ್ರಮವು ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ದಿನಾಂಕ 8.1.2023 ರಂದು‌ ನಡೆಯಲಿದ್ದ. ಈ ಕಾರ್ಯಕ್ರಮ ಆ ಯೋಜನೆ ಮಾಡಲಾಗಿದೆ. ಕಲಾವಿದರು, ರೈತ ಬಾಂಧವರು, ಊರಿನ ಗಣ್ಯ ಮಾನ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗ, ಸಮಸ್ತ ದೈವಸ್ಥರು ಹುರುಳಿಹಾಳ್ ಮತ್ತು ಆರೋಗ್ಯ ಇಲಾಖೆ, ಜೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ ಸುತ್ತಮುತ್ತಲಿನ ಗ್ರಾಮಸ್ಥರು, ಗುಡೆಕೋಟೆ ಹೋಬಳಿ, ಕಾನ ಹೊಸಹಳ್ಳಿ ಹೋಬಳಿ, ಕೂಡ್ಲಿಗಿ ಹೋಬಳಿಯ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ‌ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಯಮನೂರಪ್ಪ ಕೆ. ತಿಳಿಸಿದರು ಇದೇ ಸಂದರ್ಭದಲ್ಲಿ ಕಲಾವಿದರಾದ ಬೋರಣ್ಣ ಕನ್ನಾರಟ್ಟಿ, ತಿಪ್ಪೇಸ್ವಾಮಿ, ಸಿದ್ದಪ್ಪ, ಹಾಗೂ ವೀರೇಶ್ ಸುಂಕದಕಲ್ಲು ಉಪಸ್ಥಿತರಿದ್ದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;