ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಶಾಸಕ ಎನ್.ವೈ.ಜಿ
ಕಾನ ಹೊಸಹಳ್ಳಿ: ಕೂಡ್ಲಿಗಿ ಕ್ಷೇತ್ರದಲ್ಲಿ ವಸತಿ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದು ಶಾಸಕ ಎನ್.ವೈ ಗೋಪಾಲಕೃಷ್ಣ ಹೇಳಿದರು. ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ಕೂಡ್ಲಿಗಿ ಮಂಡಲ ವತಿಯಿಂದ ವಿಜಯ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತಾನಾಡಿದರು. ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ಅಭಿವೃದ್ಧಿ ಎನ್ನುವುದೇ ಮರಿಚೀಕೆ ಯಾಗಿದ್ದ ಈ ಹಿಂದುಳಿದ ತಾಲೂಕಿನಲ್ಲಿ ಸುಮಾರು 2,600 ಕೋಟಿಗಳಷ್ಟು ಅನುದಾನ ತಂದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡಿದ್ದೇನೆ. ದಶಕಗಳ ಕಾಲ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಯನ್ನು ತುಂಗಭದ್ರಾ ಹಿನ್ನಿರಿನ ಮೂಲಕ ಕ್ಷೇತ್ರಕ್ಕೆ ನೀರಾವರಿ ಯೋಜನೆ ತಂದು ಈ ಭಾಗದ ರೈತರ ಬಾಳನ್ನು ಹಸನು ಮಾಡಿದೆ ಕೀರ್ತಿ ಬಿಜೆಪಿ ಪಕ್ಷಕ್ಕೆ ಇದೆ. ಸುಮಾರು 800 ನೂರು ಕೋಟಿ ಅನುದಾನವನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿ ಈ ಭಾಗದ ರೈತರ ಬಾಳಿಗೆ ಬೆಳಕಾಗಿದ್ದಾರೆ ಎಂದರು. ಗುಡೇಕೋಟೆ ಹೋಬಳಿಯಲ್ಲಿ ಪರಿಶಿಷ್ಟ ಪಂಗಡ ಮೊರಾರ್ಜಿ ವಸತಿ ಶಾಲೆಗೆ ಈಗಾಗಲೆ ಹನ್ನೆರಡು ಎಕರೆ ಭೂಮಿ ಗುರುತಿಸಿ ಹದಿನೆಂಟು ಕೋಟಿ ಹಣ ಬಿಡುಗಡೆ ಯಾಗಿದೆ ಎಂದರು. ಅದರಂತೆ ಅಂಬೇಡ್ಕರ್ ವಸತಿ ಶಾಲೆಗೆ ಒಂಬತ್ತು ಕೋಟಿ ಹಣಕೂಡ ಈಗಗಾಲೆ ಸರ್ಕಾರ ಬಿಡುಗಡೆಗೊಳಿಸಿದ್ದು ಶ್ರೀಘದಲ್ಲೆ ಭೂಮಿ ಪೂಜೆ ಯನ್ನು ನೆರವೇರಿಸಲಾಗುವುದು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ಬೂತ್ ಮಟ್ಟದಲ್ಲಿ ತಲುಪಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಪಣತೊಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ ಪಕ್ಷದ ಕಾರ್ಯಕ್ರಮಗಳ ಹಾಗೂ ಚುನಾವಣೆಗೆ ಬೂತ್ ಮಟ್ಟದ ಕಾರ್ಯಕರ್ತರಿಗೆ ವಹಿಸಿದ್ದ ಜವಬ್ದಾರಿ ಕುರಿತು ವಿಸ್ತಾರವಾಗಿ ತಿಳಿಸಿದರು. ಮಾಜಿ ಜಿಪಂ ಸದಸ್ಯ ಹೊಂಬಾಳೆ ರೇವಣ್ಣ, ಮಂಡಲ ಅಧ್ಯಕ್ಷ ಕೆ.ಚೆನ್ನಪ್ಪ, ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಬಿ.ಭೀಮೇಶ್, ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಎಸ್.ದುರುಗೇಶ್, ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮಿ ಕಾಂತವರಾಜ್, ಜಿಲ್ಲಾ ಕಾರ್ಯದರ್ಶಿ ಪಿ.ದೀನಾ ಮಂಜುನಾಥ, ಯುವ ಮೋರ್ಚಾ ಅಧ್ಯಕ್ಷ ಗುಳಿಗಿ ವೀರೇಶ್, ಮುಖಂಡರಾದ ಎಂ.ಟಿ ಮಲ್ಲೇಶ್. ಬಿ.ಪಿ.ಚಂದ್ರಮೌಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇತರರು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
