ಸ್ಮರಣ ಸಂಚಿಕೆಗೆ ಬರಹಗಳ ಆಹ್ವಾನ
ಹೂವಿನಹಡಗಲಿಯ ಪ್ರತಿಷ್ಠಿತ ಜಿ.ಬಿ.ಆರ್.ಕಾಲೇಜ್ 50 ವರ್ಷಗಳನ್ನು ಪೂರೈಸಿ ಜನವರಿ 2023ರಲ್ಲಿ ತನ್ನ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಈ ಸುವರ್ಣ ಸಂಭ್ರಮದ ನೆನಪಿಗೆ ಹೊರತರಲಿರುವ ಸ್ಮರಣ ಸಂಚಿಕೆಗೆ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳಿಂದ ಲೇಖನಗಳನ್ನು ಆಹ್ವಾನಿಸಿದೆ. ಸಂಚಿಕೆಯು ಕೇವಲ ಒಂದು ನೆನಪಿನ ಸಂಚಿಕೆಯಾಗದೇ ಹೂವಿನಹಡಗಲಿಯ ಸಮಗ್ರ ಇತಿಹಾಸ, ಸಂಸ್ಕೃತಿ, ಜಿ.ಬಿ.ಆರ್.ಕಾಲೇಜಿನ ಇತಿಹಾಸ, ನಮ್ಮ ಮಹನೀಯರು ಹೀಗೆ ಹಲವಾರು ವಿಷಯಗಳ ಒಂದು ಆಕರ ಗ್ರಂಥವಾಗಿ, 50 ವರ್ಷದ ವಿದ್ಯಾರ್ಥಿಗಳ ಬದುಕಿನ ಭಾಗವಾಗುವಂತಹ ಸ್ಮರಣೀಯ ಸಂಚಿಕೆಯಾಗಲಿದೆ ಎಂದು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಈ ಸ್ಮರಣ ಸಂಚಿಕೆಗೆ ಕಾಲೇಜಿನಲ್ಲಿಯ ನೆನಪುಗಳು, ಕವಿತೆಗಳು, ಕಾಲೇಜಿಗೆ ಸಂಬಂಧಿಸಿದ ಲೇಖನಗಳು, ಕತೆಗಳು ಮತ್ತು ಇತರ ವಿಷಯದ ಲೇಖನಗಳು, ನಿಮ್ಮ ನೆಚ್ಚಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ನಿಮ್ಮ ಬದುಕು ರೂಪಿಸಿದ ಅನುಭವ, ಹೂವಿನಹಡಗಲಿಯ ಹಾಗೂ ತಾಲೂಕಿನ ವಿಶೇಷತೆಗಳು, ಇತಿಹಾಸ, ಪ್ರೇಕ್ಷಣಿಯ ಸ್ಥಳಗಳು ಇತ್ಯಾದಿ ವಿಷಯಗಳ ಬಗ್ಗೆ ಲೇಖನಗಳನ್ನು ಆಹ್ವಾನಿಸಲಾಗಿದ್ದು ಲೇಖನಗಳನ್ನು ಟೈಪ್ ಮಾಡಿ ಸಲ್ಲಿಸಲು 31-12-2022 ಕೊನೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗೆ ಹೆಚ್ಚಿನ ಮಾಹಿತಿಗೆ ಉಪನ್ಯಾಸಕರಾದ ಎಂ.ಪಿ.ಎಂ.ಶಿವಪ್ರಕಾಶ್ 9845049294 ಮತ್ತು ಹಸನ್ ಅಲಿ 9620464504 ಅವರನ್ನು ಸಂಪರ್ಕಿಸಲು ಕೋರಿದ್ದಾರೆ…

ವರದಿ. ಅಜಯ್ ಛಲವಾದಿ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
