ಪ್ರಮಾಣಿಕವಾಗಿ ಕೆಲಸ ಮಾಡುವವರು ಸಾರ್ವಜನಿಕರ ಮನದಲ್ಲಿ ಉಳಿಯುತ್ತಾರೆ: ಡಿ.ಸಿ.ತಮ್ಮಣ್ಣ…!!!

ಪ್ರಮಾಣಿಕವಾಗಿ ಕೆಲಸ ಮಾಡುವವರು ಸಾರ್ವಜನಿಕರ ಮನದಲ್ಲಿ ಉಳಿಯುತ್ತಾರೆ: ಡಿ.ಸಿ.ತಮ್ಮಣ್ಣ

ಸಾರ್ವಜನಿಕ ಕೆಲಸವನ್ನು ಪ್ರಮಾಣಿಕವಾಗಿ ಅಧಿಕಾರಿಗಳು ನಿರ್ವಹಣೆ ಮಾಡಿದರೆ, ಅವರು ಸದಾಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದು ಮದ್ದೂರು ವಿಧಾನಸಭಾ ಶಾಸಕ ಡಿ.ಸಿ.ತಮ್ಮಣ್ಣ ಅವರು ತಿಳಿಸಿದರು ‌

ಅವರು ಇಂದು ಹೊನ್ನನಾಯಕನಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕನಾಗುವ ಮೊದಲು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆ ಸಮಯದಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ಚುನಾವಣೆಗಳ ಗೆಲುವಿಗೆ ಸಹಕಾರ ನೀಡಿತು ಎಂದರು.
ರೈತರು ಜೀವನದಲ್ಲಿ ನೊಂದ ಜೀವಿಗಳು ಅವರ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಿ ಕೊಡಿ ಎಂದರು.

ಸರ್ವೆ ಇಲಾಖೆಯಲ್ಲಿ ಕೆಳ ಮಟ್ಟದಲ್ಲಿ ನಡೆಯುವ ನಿರ್ಲಕ್ಷ್ಯ ದಿಂದ ಒಂದೇ ಭೂಮಿಗೆ ಮೂರು ಸ್ಕ್ಯಚ್ ಮಾಡುವುದರಿಂದ ರೈತರು ಹಲವಾರು ದಿನ ಕಚೇರಿಗೆ ಅಲೆದಾಡಬೇಕಾಗುತ್ತದೆ‌ ಎಂದರು

ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ವಿವಿಧ ಇಲಾಖೆಯಿಂದ ದೊರಕುವ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮಳಿಗೆಗಳನ್ನು ಅನಾವರಣಗೊಳಿಸಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂಗವಿಕಲ ವೇತನ ಯೋಜನೆಯಡಿ ಆದೇಶ ಪತ್ರ, ನಿರ್ಗತಿಕ ವಿಧವಾ ವೇತನ ಕಾರ್ಡ್, ಇಂದಿರಾ ಗಾಂಧೀ ವೃದ್ದಾಪ್ಯ ಯೋಜನೆ ಕಾರ್ಡ್, ಸಂಧ್ಯಾ ಸುರಕ್ಷಾ ಕಾರ್ಡ್ ಕಾರ್ಮಿಕ ಇಲಾಖೆಯಿಂದ ಈ ಶ್ರಮ್ ಕಾಡ್೯, ಕಟ್ಟಡ ಕಾರ್ಮಿಕರ ಗುರುತಿನ‌ ಚೀಟಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಸುರೇಶ್. ಮಂಡ್ಯ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend