ವಿಜ್ರಂಭಣೆಯಿಂದ ಸೊನ್ನೆ ಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ…!!!

ವಿಜ್ರಂಭಣೆಯಿಂದ ಸೊನ್ನೆ ಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹುಲಿಕೆರೆ ಹೊರವಲಯದ ಹೊನ್ನಮರಡಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ವೀರಭದ್ರೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು.
ಸ್ವಾಮಿಯ ರಥದ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕಿ ಬಾಳೆಹಣ್ಣು. ಉತ್ತುತ್ತಿ .ಮಂಡಕ್ಕಿ .ಎಸೆದು ಭಕ್ತಿ ಸಮರ್ಪಿಸಿದರು.
ಶ್ರೀ ಸ್ವಾಮಿಯ ಪಟ್ಟವನ್ನು ಹುಲಿಕೆರೆ ಗ್ರಾಮದ ಮಾಜಿ ಸೈನಿಕ ಶಿವಕುಮಾರ್ ಇವರಿಗೆ ರೂಪಾಯಿ 65.000.ಕ್ಕೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಹುಲಿಕೆರೆ ಹಿರೇಕುಂಬಳಗುಂಟೆ ದಾಸರು ಬನಹಳ್ಳಿ ಹೊಸಹಳ್ಳಿ ಜಗಳೂರು ಮೊಳಕಲ್ಮುರು ಸೇರಿ ಇತರೆ ಜಿಲ್ಲೆಗಳ ಸುತ್ತಮುತ್ತಲಿನ ಗ್ರಾಮದ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

ಆಕಾಂಕ್ಷಿಗಳ ದಂಡು
ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹುಲಿಕೆರೆ ಹೊರವಲಯದಲ್ಲಿ ಶ್ರೀ ಸೋನಮರಡಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವದಲ್ಲಿ
ಕೂಡ್ಲಿಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ದಂಡು ಭಾಗವಹಿಸಿತ್ತು
ಕೂಡ್ಲಿಗಿ ಕ್ಷೇತ್ರದ ಶಾಸಕ ಟಿಕೇಟ್ ಆಕಾಂಕ್ಷಿಗಳಾದ ಕೋಡಿಹಳ್ಳಿ ಭೀಮಣ್ಣ. ಗುಜ್ವಲ್ ರಘು. ಡಾ. ಎನ್. ಟಿ. ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು ವಿವಿಧ ಪಕ್ಷಗಳ ಮುಖಂಡರುಗಳು ಭಾಗಿಯಾಗಿದ್ದರು…

ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend