ಗುಡೆಕೋಟೆ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಚೇತನರ ಸಭೆ

ಕೂಡ್ಲಿಗಿ : ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಚೇತನರ ಗ್ರಾಮ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಕೆಂಚಪ್ಪ ರವರು ವಿಶೇಷ ಚೇತನರ ಕುಂದು ಕೊರತೆಯನ್ನು ಚರ್ಚಿಸಿದರು ನಂತರ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಕೆ ಮುರಳಿ ರಾಜ್ ರವರು ವಿಶೇಷ ಚೇತನರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ತಿಳಿಸಿ ರಿಯಾಯಿತಿ ದರದಲ್ಲಿ ವಿಶೇಷ ಚೇತನರಿಗೆ ನೀವು ಇರುವ ಸ್ಥಳದಿಂದ 100 ಕಿಲೋಮೀಟರ್ ಗಣ ಹೊರಗೆ ಉಚಿತವಾಗಿ ಪ್ರಯಾಣ ಮಾಡಬಹುದು ಹಾಗೂ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಚೇತನರಿಗೆ 5 ಪರ್ಸೆಂಟ್ ಅನುದಾನ ನೀಡಲಾಗುತ್ತದೆ ಹಾಗೂ ಇನ್ನೂ ಅನೇಕ ಸೌಲಭ್ಯಗಳಿದ್ದು ಇವನ್ನು ಪಡೆದುಕೊಳ್ಳಬೇಕು ವಿಶೇಷ ಚೇತನರಿಗೋಸ್ಕರ ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ಅಧಿಕಾರಿಯನ್ನು ಈಗಾಗಲೇ ನೇಮಿಸಲಾಗಿದೆ ಅವರ ಮುಖಾಂತರ ವಿಶೇಷ ಚೇತನರೆಲ್ಲರೂ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಎಂದು ವಿಶೇಷ ಚೇತನರಿಗೆ ತಿಳಿಸಿದರು ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕೆಂಚಪ್ಪ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಕೆ ಮುರಳಿ ರಾಜ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ವಿಕಲಚೇತನರು ಪಂಚಾಯತಿ ಸಿಬ್ಬಂದಿಗಳು ಇದ್ದರು.
ವರದಿಗಾರರು : ಸಿ ಅರುಣ್ ಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
