ನಕಲಿ ವೋಟರ್ ಐಡಿ ಕಾರ್ಡ್ ಮುದ್ರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಭೇಟಿ…!!!

ಚಳ್ಳಕೆರೆ ನಗರದ ತಿರುಮಲ ಆಸ್ಪತ್ರೆ ಮುಂಭಾಗದಲ್ಲಿ ಖಾಸಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ನಕಲಿ ವೋಟರ್ ಐಡಿ ಕಾರ್ಡ್ ಮುದ್ರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಎನ್.ರಘುಮೂರ್ತಿ ದಾಳಿ ನಡೆಸಿ ರಾಜಶೇಖರ್(೩೦) ಪ್ರಕಾಶ್(೧೯) ಇಬ್ಬರನ್ನು ವಶಪಕ್ಕೆ ಪಡೆದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರಕರಣ ದಾಖಲು ಮುಂದಾಗಿದ್ದಾರೆ.
ನಗರದ ಚುನಾವಣೆ ಶಾಖೆಯಿಂದ ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಮತದಾರರಗುತಿನ ಚೀಟಿ ಮುದ್ರಿಸಿಕೊಡಲು ಅನುಮತಿ ನೀಡಿಲ್ಲ ಆದರೂ ಸಹಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಆನ್‌ಲೈನ್‌ನಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಮುದ್ರಿಸಿ ಒಂದು ಕಾರ್ಡ್ಗೆ ೨೦೦ ರೂ ಪಡೆಯುತ್ತಾರೆ ಎಂದ ಖಚಿತ ಮಾಹಿತಿ ಮೇರೆಗೆ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬರು ಮಾರು ವೇಷದಲ್ಲಿ ಹೋಗಿ ೨೦೦ ರೂ ನೀಡಿನಕಲಿ ವೋಟರ್ ಐಡಿ ತರಿಸಿ ನಂತರ ತಹಶೀಲ್ದಾರ್ ಎನ್.ರಘುಮೂರ್ತಿ, ಕಂದಾಯ ನಿರೀಕ್ಷಕ ಲಿಂಗೇಗೌಡ, ಗ್ರಾಮಲೆಕ್ಕಾಧಿಕಾರಿಗಳಾದ ಪ್ರಕಾಶ್,ಉಮೇಶ್‌ದಾಳಿನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ನಡೆಸುವ ವೇಳೆ ಹೆಸರು , ಊರು, ಖಾಲಿ ಇರುವ ನಕಲಿ ವೋಡರ್ ಐಡಿ ಕಾರ್ಡ್ , ವಾಹನ ಚಾಲನ ಗುರುತಿನ ಚೀಟಿ ಸೇರಿದಂತೆ ಇತರೆ ದಾಖಲು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಂಡು ನಿಮಗೆ ವೋಟರ್ ಐಡಿ ಮುದ್ರಿಸಿ ಕೊಡಲು ನಿಮಗೆ ಯಾರು ಅನುಮತಿ ನೀಡಿದ್ದಾರೆ, ಹೇಗೆ ಮುದ್ರಿಸಿದ್ದಿರಿ ಎಂದು ಹಿಗ್ಗಾ ಮುಗ್ಗತರಾಟೆಗೆ ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡಾಗ ಕಂಪ್ಯೂಟರ್ ನನಗೆ ಬೇರೆಯವರಿಂದ ದೂರವಾಣಿ ಮೂಲಕ ತಿಳಿದು ಕೊಂಡು ಆನ್‌ಲೈನ್ ನಲ್ಲಿ ಡೌನ್‌ಲೋಡ್ ಮಾಡಿದ್ದೇನೆ ಗುರುತಿನ ಚೀಟಿ ನಕಲಿ ಎಂದು ತಪ್ಪೊಪ್ಪಿಕೊಂಡಿದ್ದಾನೆ ಕಂಪ್ಯೂಟರ್ ಸೆಂಟರ್ ಲಾಕ್ ಮಾಡಿಕೊಂಡು ಇಬ್ಬರುನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿ ಪ್ರಕರಣದಾಖಲಿ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಚುನಾವಣೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ,ಡಿಲೀಟ್ ಮಾಡಲು ಅಗತ್ಯ ದಾಖಲೆಗಳನ್ನು ಪಡೆದು ಹಗಲು ರಾತ್ರಿ ಅಧಿಕಾರಿಗಳು ಶ್ರಮಿ ಮತದಾರರ ಪಟ್ಟಿ ಸೇರ್ಪಡೆ ಮಾಡಿಕೊಂಡು ಡಿಜಿಟಲ್ ಗುರತಿನ ಚೀಟಿಯನ್ನು ಕೇವಲು ೩೦ ರೂಗಳಿಗೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಆದರೂ ಸಹ ನಕಲಿ ಕಾರ್ಡ್ ಮುದ್ರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಇಬ್ಬರನ್ನು ವಶಕ್ಕೆಪಡೆದು ಕ್ರಿಮಿನಲ್ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು…

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend