ತಾಯಕನಹಳ್ಳಿ ಎಸ್.ಜಿ ನಾಗೇಶ್ ಗೆ ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ…!!!

ತಾಯಕನಹಳ್ಳಿ ಎಸ್.ಜಿ ನಾಗೇಶ್ ಗೆ ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ

ಕೂಡ್ಲಿಗಿ ತಾಲೂಕಿನ ಗಡಿ ಭಾಗದ ತಾಯಕನಹಳ್ಳಿ ಗ್ರಾಮದ ಎಸ್.ಜಿ ನಾಗೇಶ್ ತಂದೆ ಗಂಗಣ್ಣ ಇವರಿಗೆ ವಿಜಯನಗರ ಹಂಪಿಯಲ್ಲಿ ನಡೆದ 31ನೇ ಘಟಿಕೋತ್ಸವದಲ್ಲಿ ರಾಜ್ಯದ ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಕನ್ನಡ ಅನುವಾದಿತ ಬಂಗಾಳಿ ಕಾದಂಬರಿಗಳಲ್ಲಿ ರಾಷ್ಟ್ರೀಯತೆ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಡಾ.ಎ ಮೋಹನ ಕುಂಟಾರ್ ರವರ ಮಾರ್ಗದರ್ಶನದಲ್ಲಿ ಕನ್ನಡ ಅನುವಾದಿತ ಬಂಗಾಳಿ ಕಾದಂಬರಿಗಳಲ್ಲಿ ರಾಷ್ಟ್ರೀಯತೆ ಎಂಬ ಮಹಾ ಪ್ರಬಂಧವನ್ನು ವಿಜಯನಗರ ಕನ್ನಡ ವಿಶ್ವವಿದ್ಯಾಲಯ ಹಂಪಿ ಡಾಕ್ಟರೇಟ್ ಪದವಿ ಪ್ರದಾನ ನೀಡಿದ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ವಿಜಯನಗರ ಕನ್ನಡ ವಿಶ್ವವಿದ್ಯಾಲಯ ಹಂಪಿ ಕುಲಪತಿ ಸ.ಚಿ.ರಮೇಶ ಇವರು ಎಸ್.ಜಿ ನಾಗೇಶ್ ಇವರಿಗೆ ಡಾಕ್ಟರೇಟ್ ಪದವಿ ಪ್ರದಾನ ನೀಡಿ ಗೌರವಿಸಲಾಯಿತು. ಈ ಸಾಧನೆಗೆ ಊರಿನ ಗ್ರಾಮಸ್ಥರು, ಶಾಲೆಯ ಶಿಕ್ಷಕರು, ಪೋಷಕರು, ಸ್ನೇಹಿತರು ಅಭಿನಂದಿಸಿದ್ದಾರೆ.

ವರದಿಗಾರರು : ಸಿ ಅರುಣ್ ಕುಮಾರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend