ದಿನಾಂಕ 09/12/2022 ರಂದು ಹಿರೇಕುಂಬಳಗುಂಟೆ ಗ್ರಾಮಪಂಚಾಯಿತಿ ಹಾಗೂ ಅಕ್ಷರ ಫೌಂಡೇಶನ್ವತಿಯಿಂದ ಗ್ರಾಮಪಂಚಾಯಿತಿಯ 12 ಶಾಲೆಗಳಿಂದ ಸುಮಾರು4,5,6,.ನೇತರಗತಿಯ 156 ಮಕ್ಕಳು ಭಾಗವಹಿಸಿದ್ದು ಉ.ಸ.ಹಿ.ಪ್ರಾ.ಶಾಲೆ.ಹುಲಿಕೆರೆ ಯಲ್ಲಿ ಆಯೋಜಿಸಲಾಗಿದ್ದು ಲಿಖಿತ ಪರೀಕ್ಷೆ ನೆಡೆಸಲಾಯಿತು.ಪ್ರತಿತರಗತಿಯಲ್ಲಿ ಪ್ರಥಮ ಬಹುಮಾನ 1000 ರೂ,ದ್ವಿತೀಯ ಬಹುಮಾನ 600 ರೂ ಹಾಗೂ ತೃತೀಯ ಬಹುಮಾನ 400 ರೂ ಗಳನ್ನು ಗ್ರಾಮಪಂಚಾಯಿತಿ ವತಿಯಿಂದ ನೀಡಲಾಯಿತು.ಸ.ಹಿ.ಪ್ರಾ.ಶಾಲೆ.ಹಿರೇಕುಂಬಳಗುಂಟೆ ಯ ಮಕ್ಕಳು 9 ಬಹುಮಾನಗಳಲ್ಲಿ 7 ಬಹುಮಾನಗಳನ್ನು ಪಡೆದು ಉನ್ನತ ಸ್ಥಾನದಲ್ಲಿದೆ. ಸ.ಹಿ.ಪ್ರಾ.ಶಾಲೆ ಹುಲಿಕೆರೆಯ ಶಾಲೆಯವರು 2 ಬಹುಮಾನಗಳನ್ನು ಪಡೆದರು. ಈ ದಿನದ ಸಂಪೂರ್ಣ ಕಾರ್ಯಕ್ರಮ ವನ್ನು ಅಧ್ಯಕ್ಷರುಶ್ರೀ ಮಾರಪ್ಪ ಹಾಗೂ ಸದಸ್ಯರು ಗ್ರಾಮಪಂಚಾಯಿತಿ ಹಿರೇಕುಂಬಳಗುಂಟೆ ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ನಿಂಗಪ್ಪ, ಚಿನ್ನಾಪುರಿ, ಸ್ಥಳಿಯಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ವಿಮಲಾಕ್ಷಿ,ಹಾಗೂ ಸಿಬ್ಬಂದಿ ಎಲ್ಲಾ ಶಾಲೆಗಳ ಮುಖ್ಯಗುರುಗಳು,ಎಸ್ಡಿಎಂಸಿ ಅಧ್ಯಕ್ಷರು ,ಸದಸ್ಯರು,ಸಿಆರ್ಪಿ ಲೋಕೇಶ್ ಅಡುಗೆ ಸಿಬ್ಬಂದಿ, ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು..
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
