ಸೌಲಭ್ಯಕ್ಕಾಗಿ ಸಂಘಟನೆ ಹೋರಾಟ ಅನಿವಾರ್ಯ: ಗುನ್ನಳ್ಳಿ ರಾಘವೇಂದ್ರ…!!!

ಸೌಲಭ್ಯಕ್ಕಾಗಿ ಸಂಘಟನೆ ಹೋರಾಟ ಅನಿವಾರ್ಯ: ಗುನ್ನಳ್ಳಿ ರಾಘವೇಂದ್ರ

ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಸಿಡಬ್ಲ್ಯೂಎಫ್ಐ ಫೆಡರೇಶನ್ ಗ್ರಾಮ ಘಟಕವನ್ನು ಕೂಡ್ಲಿಗಿ ಸಿ.ಐ.ಟಿ.ಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಹಾಗೂ ಸಿ ವಿರೂಪಾಕ್ಷಪ್ಪ ಇವರ ಸಮ್ಮುಖದಲ್ಲಿ ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿದರು.

ನಂತರ ಸಿಐಟಿ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ.ಅವುಗಳನ್ನು ಸಮರ್ಪಕವಾಗಿ ಹೊಂದಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಕೆಲ ಜನವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕಿದೆ, ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಸಂಘಟನೆ ಹುಟ್ಟುಹಾಕಬೇಕೆಂದರು. ಈ ಸಂದರ್ಭದಲ್ಲಿ ಸಿ ವಿರೂಪಾಕ್ಷಪ್ಪ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸುವ ಜವಾಬ್ದಾರಿಯುತ ಕೆಲಸವನ್ನು ನಮ್ಮ ಫೆಡರೇಶನ್ ವತಿಯಿಂದ ಕೊಡಿಸುವುದರೊಂದಿಗೆ ಯಾವಾಗಲೂ ನಾವು ಕಾರ್ಮಿಕರ ಜೊತೆ ಸದಾಕಾಲ ನಾವುಗಳು ಇರುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರಾದ ಎಂ.ಬಿ ಅಯ್ಯನಳ್ಳಿ ಕರಿಯಪ್ಪ, ಉಪಾಧ್ಯಕ್ಷರು ಹುಲೆಪ್ಪ, ಸಹ ಕಾರ್ಯದರ್ಶಿ ಮರಳು ಸಿದ್ದಪ್ಪಾಚಾರಿ, ಅಯ್ಯನಳ್ಳಿ ತಿಪ್ಪೇಸ್ವಾಮಿ, ನಬಿ ಸಾಬ್, ಹಾರಕಬಾವಿ ಗ್ರಾಮ ಘಟಕದ ಅಧ್ಯಕ್ಷ ಅಜ್ಜಪ್ಪಚಾರಿ, ಉಪಾಧ್ಯಕ್ಷ ಕುಮಾರ್, ಖಜಾಂಸಿ ದೇವೇಂದ್ರಪ್ಪ ಹಾಗೂ ಹಡಪ ಸಮಾಜದ ಜಿಲ್ಲಾ ಕಾರ್ಯದರ್ಶಿ ಎಚ್ ಕೋಟೇಶ್ ಸೇರಿದಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ತಾಲೂಕು ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು, ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

ವರದಿಗಾರರು : ಸಿ ಅರುಣ್ ಕುಮಾರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend