ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ: ಕೆ ಮುರಳಿ ರಾಜ್…!!!

ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ: ಕೆ ಮುರಳಿ ರಾಜ್.

ಕೂಡ್ಲಿಗಿ: ತಾಲೂಕಿನ ಹಿರೇಹೆಗ್ಡಾಳ್ ಶಿವಪುರ ಬಡೇಲಡಕು ಚೌಡಾಪುರ ಮೊರಬ ಗ್ರಾಮ ಪಂಚಾಯಿತಿಗಳಿಗೆ. ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಕೆ ಮುರಳಿ ರಾಜ್ ಭೇಟಿ ನೀಡಿ. ಆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಕುಂದು ಕೊರತೆಯನ್ನು ಚರ್ಚಿಸಿ ನಂತರ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರುಗಳನ್ನು ಉದ್ದೇಶಿಸಿ ದಿನಾಂಕ : 12-12-2022 ರಂದು ಬೆಂಗಳೂರು ಫ್ರೀಡಮ್ ಪಾರ್ಕ್ ನಲ್ಲಿ ನಡೆಯಲಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಸದಸ್ಯರುಗಳ ವೇತನವನ್ನು ಹೆಚ್ಚಳ ಮಾಡಬೇಕು ಮತ್ತು ಇನ್ನಿತರೆ ಸದಸ್ಯರುಗಳ ಬೇಡಿಕೆಯನ್ನು ಈಡೇರಿಸುವಂತೆ ನಂತರ ಅಧಿಕಾರಿಗಳು ಸದಸ್ಯರ ಮೇಲೆ ಅಲ್ಲೇ ಮಾಡುವುದನ್ನು ಹೊರತುಪಡಿಸುವಂತೆ ನಮ್ಮ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಮೇರೆಗೆ ನಾವುಗಳು ಚಲೋ ಕಾರ್ಯಕ್ರಮಕ್ಕೆ ಭಾಗಿಯಾಗಿ ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಈಡೇರಿಸುವಂತೆ ಸತ್ಯ ಧರಣಿ ಮಾಡೋಣ ಎಂದು ತಿಳಿಸಿ ಬೆಂಗಳೂರು ಚಲೋ ಕಾರ್ಯಕ್ರಮದ ಪೋಸ್ಟರ್ಗಳನ್ನು ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಸದಸ್ಯರುಗಳಿಗೆ ನೀಡಿದರು ಇದೇ ಸಂದರ್ಭದಲ್ಲಿ ಹಿರೇ ಹೆಗ್ಡಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪಕೀರಪ್ಪ ರವರು ಅಧ್ಯಕ್ಷರಿಗೆ ತಮ್ಮ ಗ್ರಾಮ ಪಂಚಾಯಿತಿಯ ಸಮಸ್ಯೆ ಹಾಗೂ ಸದಸ್ಯರುಗಳ ಸಮಸ್ಯೆಯನ್ನು ಹಂಚಿಕೊಂಡಳು ನಂತರ ನಮ್ಮ ತಾಲೂಕು ಅಧ್ಯಕ್ಷರು ತಿಳಿಸಿದ ಹಾಗೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗಿಯಾಗಿ ನಮ್ಮ ಒಕ್ಕೂಟವನ್ನು ಇನ್ನಷ್ಟು ಬಲಪಡಿಸೋಣ ಎಂದು ಮಾತನಾಡಿದರು ಮತ್ತೊಬ್ಬ ಮೊರಬ ಗ್ರಾಮ ಪಂಚಾಯಿತಿ ಸದಸ್ಯರಾದ ಹಾಗೂ ಕಾನೂನು ಸಲಹೆಗಾರರ ಕರಿಯಪ್ಪ ರವರು ನಮ್ಮ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಸಮಸ್ಯೆ ಉಪಾಧ್ಯಕ್ಷರ ಸಮಸ್ಯೆ ಸದಸ್ಯರುಗಳ ಸಮಸ್ಯೆ ಹಾಗೂ ಪಂಚಾಯಿತಿಗಳಲ್ಲಿ ಯಾವುದೇ ರೀತಿ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ ಮುಖ್ಯವಾಗಿ ನಾವು ನಮ್ಮ ನಮ್ಮ ವಾರ್ಡ್ಗಳಲ್ಲಿ ಕೆಲಸ ಮಾಡಲು ಅನುದಾನವು ಸಹ ಸಿಗುತ್ತಿಲ್ಲ ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕೆಂದರೆ ನಾವುಗಳು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ನಮ್ಮ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಕೆ ಮುರಳಿ ರಾಜು. ಹಿರೇ ಹೆಗ್ಡಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪಕೀರಪ್ಪ ಕಾನೂನು ಸಲಹೆಗಾರರಾದ ಕರಿಯಪ್ಪ. ಹಾಗೂ ಭೇಟಿ ನೀಡಿದ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಪತ್ರಿಕಾ ಮಾಧ್ಯಮದವರು ಇದ್ದರು.

ವರದಿಗಾರರು ಸಿ ಅರುಣ್ ಕುಮಾರ್.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend